ಹೈದರಾಬಾದ್ (ತೆಲಂಗಾಣ): ತೆಲಂಗಾಣದಲ್ಲಿ 7,646 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 53 ಜನ ಸೋಂಕಿಗೆ ಬಲಿಯಾಗಿದ್ದಾರೆ. 5,926 ಜನ ಗುಣಮುಖರಾಗಿದ್ದಾರೆ.
ಇದುವರೆಗೆ 4,35,606 ಪ್ರಕರಣಗಳು ವರದಿಯಾಗಿದ್ದು, 35,5618 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 77,727 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿದ್ದು, ಈ ವರೆಗೆ 2,261 ಜನ ಸಾವನ್ನಪ್ಪಿದ್ದಾರೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್ಎಂಸಿ) ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿದ್ದು, 1,441 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಮೆಡ್ಚಲ್ ಮಲ್ಕಜ್ಗಿರಿ 631 ಮತ್ತು ರಂಗರೆಡ್ಡಿ ಜಿಲ್ಲೆಯಲ್ಲಿ 484 ಕೇಸ್ಗಳು ಪತ್ತೆಯಾಗಿವೆ.
77,091 ಮಾದರಿಗಳನ್ನು ಗುರುವಾರ ಪರೀಕ್ಷಿಸಲಾಯಿತು. ಈವರೆಗೆ 1,29,05,854 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ರಾಜ್ಯದಲ್ಲಿ ಸಾವಿನ ಪ್ರಮಾಣ ಶೇಕಡಾ 0.51% ರಷ್ಟಿದ್ದು, ರಾಷ್ಟ್ರಮಟ್ಟದಲ್ಲಿ ಶೇ 1.1 ರಷ್ಟಿತ್ತು. ತೆಲಂಗಾಣದಲ್ಲಿ ಚೇತರಿಕೆ ಪ್ರಮಾಣವು ಶೇಕಡಾ 81.63 ರಷ್ಟಿದ್ದು, ಇದು ದೇಶದಲ್ಲಿ ಶೇಕಡಾ 82 ರಷ್ಟಿದೆ.