ಸೂರತ್ (ಗುಜರಾತ್): ಸೂರತ್ನ ಖಾಸಗಿ ಕಂಪನಿಯೊಂದು ದೀಪಾವಳಿ ವಿಶೇಷವಾಗಿ ತನ್ನ ಉದ್ಯೋಗಿಗಳಿಗೆ ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆಯಾಗಿ ನೀಡಿದೆ. ಹೆಚ್ಚುತ್ತಿರುವ ತೈಲ ಬೆಲೆ ಮತ್ತು ವಾಯು ಮಾಲಿನ್ಯ ಗಮನದಲ್ಲಿಟ್ಟುಕೊಂಡು ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಮಾಡಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುಭಾಷ್ ದಾವರ್ ತಿಳಿಸಿದ್ದಾರೆ.
ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 35 ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ಸ್ಕೂಟರ್ ನೀಡಿದೆ. ಸ್ಕೂಟರ್ ವಿತರಣೆಯಿಂದ ಕಂಪನಿಗೆ ಹೊರೆಯಾದರೂ ಸಮಸ್ಯೆ ಏನಿಲ್ಲ. ಭವಿಷ್ಯದಲ್ಲಿ ಇಂಧನ ವೆಚ್ಚ ಕಡಿಮೆಯಾಗಲಿದೆ ಎಂದು ಕಂಪನಿ ತಿಳಿಸಿದೆ.
ಕಂಪನಿಯಿಂದ ದ್ವಿಚಕ್ರ ವಾಹನ ಉಡುಗೊರೆಯಾಗಿ ಪಡೆದ ಉದ್ಯೋಗಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಕೇದಾರನಾಥದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆ