ನವದೆಹಲಿ: ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ಗಳ ಬದಲಾಗಿ ಇವಿಎಂಗಳ ಬಳಕೆ ಮಾಡಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ. ಅದರ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ಇದೀಗ ಸಮ್ಮತಿ ನೀಡಿದೆ.
ಇದಕ್ಕೆ ಸಂಬಂಧಿಸಿದಂತೆ ಎಂ.ಎಲ್ ಶರ್ಮಾ ಎಂಬ ವಕೀಲರು ಸಾರ್ವಜನಿಕ ಅರ್ಜಿ ಸಲ್ಲಿಕೆ ಮಾಡಿದ್ದರು. ಮುಖ್ಯನ್ಯಾಯಮೂರ್ತಿ ಎನ್.ವಿ ರಮಣ್ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಲು ಸಮ್ಮಿತಿ ನೀಡಿದೆ.
ಇದನ್ನೂ ಓದಿರಿ: ಬಿಜೆಪಿಗೆ ಟಾಂಗ್ ನೀಡಲು ನಿರ್ಧಾರ.. ಗೋವಾದಲ್ಲಿ ಶಿವಸೇನೆ-ಎನ್ಸಿಪಿ ಮೈತ್ರಿ ಘೋಷಣೆ..
ಅರ್ಜಿಯಲ್ಲಿ ಶರ್ಮಾ ಅವರು ತಿಳಿಸಿರುವ ಪ್ರಕಾರ, ಇವಿಎಂಗಳ(electronic voting machines) ಬಳಕೆಗೆ ಪ್ರಜಾ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 61A ಅವಕಾಶ ಕಲ್ಪಿಸುತ್ತದೆ. ಆದರೆ, ಈ ಕಾಯ್ದೆ ಸಂಸತ್ನಲ್ಲಿ ಅಂಗೀಕಾರಗೊಂಡಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಈ ನಿಯಮ ಜಾರಿಗೊಳಿಸಬಾರದು ಎಂದು ಪಿಐಎಲ್ನಲ್ಲಿ ತಿಳಿಸಿದ್ದಾರೆ. ಜೊತೆಗೆ ಇವಿಎಂಗಳ ಮೂಲಕ ಚುನಾವಣೆ ನಡೆಸುವುದು ಅಕ್ರಮ ಹಾಗೂ ಅಸವಿಂಧಾನಿಕವಾಗಿದೆ ಎಂದು ಅವರು ಆರೋಪಿಸಿದ್ದಾರೆ.