ETV Bharat / bharat

ಸಿದ್ದೀಕ್ ಕಪ್ಪನ್​ಗೆ ತಾಯಿ ಜೊತೆ ಮಾತನಾಡಲು ಅವಕಾಶ ಕಲ್ಪಿಸಿದ ಸುಪ್ರೀಂಕೋರ್ಟ್ - ಸಿದ್ದೀಕ್ ಕಪ್ಪನ್

ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (ಕೆಯುಡಬ್ಲ್ಯುಜೆ) ದೆಹಲಿ ಘಟಕದ ಕಾರ್ಯದರ್ಶಿ ಸಿದ್ದೀಕ್ ಕಪ್ಪನ್ ಅವರು ಉತ್ತರ ಪ್ರದೇಶದ ಜೈಲಿನಲ್ಲಿದ್ದು, ತಮ್ಮ ತಾಯಿ ಜೊತೆಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡಲು ಸುಪ್ರೀಂಕೋರ್ಟ್​​ ಅವಕಾಶ ಕಲ್ಪಿಸಿದೆ.

ಸಿದ್ದೀಕ್ ಕಪ್ಪನ್
ಸಿದ್ದೀಕ್ ಕಪ್ಪನ್
author img

By

Published : Jan 22, 2021, 1:14 PM IST

ನವದೆಹಲಿ: ಉತ್ತರ ಪ್ರದೇಶದಲ್ಲಿ ಬಂಧಿತನಾದ ಕೇರಳ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆ ತಾಯಿಯೊಂದಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಾತನಾಡಲು ಸಿದ್ದೀಕ್​ಗೆ ಸುಪ್ರೀಂಕೋರ್ಟ್​​ ಅವಕಾಶ ಕಲ್ಪಿಸಿದೆ.

ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (ಕೆಯುಡಬ್ಲ್ಯುಜೆ) ದೆಹಲಿ ಘಟಕದ ಕಾರ್ಯದರ್ಶಿ ಸಿದ್ದೀಕ್ ಕಪ್ಪನ್ ಅವರನ್ನು 2020ರ ಅಕ್ಟೋಬರ್ 5 ರಂದು ಮಥುರಾದಲ್ಲಿ ಬಂಧಿಸಲಾಗಿತ್ತು. 19 ವರ್ಷದ ದಲಿತ ಯುವತಿಯನ್ನು ನಾಲ್ವರು ‘ಮೇಲ್ಜಾತಿ’ಯ ಜನರು ಅತ್ಯಾಚಾರ ಎಸಗಿದ್ದರಿಂದ ಗಂಭೀರವಾಗಿ ಘಾಸಿಗೊಂಡಿದ್ದ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಪ್ರಕರಣದ ವರದಿಗಾರಿಕೆಗಾಗಿ ಹತ್ರಾಸ್‌ಗೆ ತೆರಳುತ್ತಿದ್ದ ಸಿದ್ದೀಕ್ ಅವರನ್ನು ಯುಎಪಿಎ ಹಾಗೂ ಭಾರತೀಯ ದಂಡಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಮಥುರಾದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ಇವರನ್ನು ದೇಶದ್ರೋಹ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪದಡಿ ಬಂಧಿಸಲಾಗಿತ್ತು. ಜೊತೆಗೆ ಹತ್ರಾಸ್‌ ಸಂಚು ಪ್ರಕರಣದಲ್ಲಿ ಸಹ ಇವರ ಹೆಸರು ಕೇಳಿಬಂದಿತ್ತು.

ಇನ್ನು ಸಿದ್ದೀಕ್ ಕಪ್ಪನ್ ಅವರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.