ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಪಕ್ಷ ಪ್ರಚಂಡ ಜಯ ಸಾಧಿಸುವಲ್ಲಿ ಯಶ ಕಂಡ ಎಂ.ಕೆ.ಸ್ಟಾಲಿನ್ ರಾಜ್ಯದ ನೂತನ ಸಿಎಂ ಆಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಚೆನ್ನೈನಲ್ಲಿರುವ ರಾಜಭವನದಲ್ಲಿ ನಡೆದ ಸರಳ ಪದಗ್ರಹಣ ಸಮಾರಂಭದಲ್ಲಿ 68 ವರ್ಷದ ಎಂ.ಕೆ ಸ್ಟಾಲಿನ್ ಅವರಿಗೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅಧಿಕಾರದ ಪ್ರಮಾಣ ವಚನ ಬೋಧಿಸಿದರು.
ತಮಿಳುನಾಡಿನ ಖ್ಯಾತ ರಾಜಕಾರಣಿ ಡಿಎಂಕೆ ಪಕ್ಷದ ಸ್ಥಾಪಕ ಎಂ.ಕರುಣಾನಿಧಿಯವರ ಪುತ್ರ ಎಂ.ಕೆ.ಸ್ಟಾಲಿನ್ 2018, ಆಗಸ್ಟ್ 28ರಿಂದ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಸ್ಟಾಲಿನ್ ಈ ಹಿಂದೆ 2009ರಲ್ಲಿ ತಮಿಳುನಾಡಿನ ಉಪ ಮುಖ್ಯಮಂತ್ರಿಯಾಗಿ, 2006ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಿದ್ದಾಗ ಗ್ರಾಮೀಣಾಭಿವೃದ್ಧಿ ಮತ್ತು ಸ್ಥಳೀಯ ಆಡಳಿತ ಸಚಿವ ಖಾತೆಯನ್ನು ಹಾಗೂ ಚೆನ್ನೈ ಮಹಾನಗರ ಪಾಲಿಕೆಯ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. 2018ರಲ್ಲಿ ಎಂ.ಕರುಣಾನಿಧಿಯವರ ನಿಧನದ ಬಳಿಕ ಡಿಎಂಕೆ ಅಧ್ಯಕ್ಷರಾದರು.
ಪ್ರಮುಖಾಂಶಗಳು:
- 34 ಡಿಎಂಕೆ ಶಾಸಕರಿಂದ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
- 19 ಮಾಜಿ ಮಂತ್ರಿಗಳು ಮತ್ತು 15 ಜನ ಹೊಸಬರಿಗೆ ಸಂಪುಟದಲ್ಲಿ ಅವಕಾಶ
- ಸಂಪುಟದಲ್ಲಿ ಇಬ್ಬರು ಮಹಿಳೆಯರಿಗೆ ಸ್ಥಾನ
ಸ್ಟಾಲಿನ್ ಸಂಪುಟ ಸೇರಿದವರಿವರು:
- ದುರೈಮುರುಗನ್ - ಜಲಸಂಪನ್ಮೂಲ ಸಚಿವ
- ಕೆ.ಎನ್. ನೆಹರೂ - ಪುರಸಭೆ ಆಡಳಿತ ಸಚಿವ
- ಐ.ಪೆರಿಯಸಾಮಿ - ಸಹಕಾರ ಸಚಿವ
- ಕೆ.ಪೊನ್ಮುಡಿ - ಉನ್ನತ ಶಿಕ್ಷಣ ಸಚಿವ
- ಇ.ವಿ. ವೇಲು - ಲೋಕೋಪಯೋಗಿ ಸಚಿವ
- ಎಂ.ಆರ್.ಕೆ. ಪನ್ನೀರ್ಸೆಲ್ವಂ - ಕೃಷಿ ಸಚಿವ
- ಕೆ.ಕೆ.ಎಸ್.ಎಸ್.ಆರ್ ರಾಮಚಂದ್ರನ್ - ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ
- ತಂಗಮ್ ತೆನ್ನರಸು - ಕೈಗಾರಿಕಾ ಸಚಿವ
- ಎಸ್.ರಘುಪತಿ - ಕಾನೂನು ಸಚಿವ
- ಎಸ್.ಮುತ್ತುಸಾಮಿ - ವಸತಿ ಮತ್ತು ನಗರಾಭಿವೃದ್ಧಿ ಸಚಿವ
- ಕೆ.ಆರ್. ಪೆರಿಯಕಾರಪ್ಪನ್ - ಗ್ರಾಮೀಣಾಭಿವೃದ್ಧಿ ಸಚಿವ
- ಟಿ.ಎಂ. ಅನ್ಬರಸನ್ - ಗ್ರಾಮೀಣ ಕೈಗಾರಿಕಾ ಸಚಿವ
- ಎಂ.ಪಿ. ಸಮಿನಾಥನ್ - ಮಾಹಿತಿ ಮತ್ತು ಪ್ರಚಾರ ಸಚಿವ
- ಪಿ.ಗೀತಾ ಜೀವನ್ - ಸಮಾಜ ಕಲ್ಯಾಣ ಮತ್ತು ಮಹಿಳಾ ಸಬಲೀಕರಣ ಸಚಿವೆ
- ಅನಿತಾ ಆರ್. ರಾಧಾಕೃಷ್ಣನ್ - ಮೀನುಗಾರಿಕೆ ಸಚಿವ
- ಎಸ್.ಆರ್. ರಾಜಕನ್ನಪ್ಪನ್ - ಸಾರಿಗೆ ಸಚಿವ
- ಕೆ.ರಾಮಚಂದ್ರನ್ - ಅರಣ್ಯ ಸಚಿವ
- ಆರ್.ಸಕ್ರಪಾಣಿ - ಆಹಾರ ಮತ್ತು ನಾಗರಿಕ ಸರಬರಾಜು ಸಚಿವ
- ವಿ.ಸೆಂಥಿಲ್ಬಾಲಾಜಿ - ವಿದ್ಯುತ್ ಮತ್ತು ಅಬಕಾರಿ ಸಚಿವ
- ಆರ್.ಗಾಂಧಿ - ಕೈಮಗ್ಗ ಮತ್ತು ಜವಳಿ ಸಚಿವ
- ಮಾ. ಸುಬ್ರಮಣಿಯನ್ - ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಸಚಿವ
- ಪಿ.ಮೂರ್ತಿ - ವಾಣಿಜ್ಯ ತೆರಿಗೆ ಮತ್ತು ನೋಂದಣಿ ಸಚಿವ
- ಎಸ್.ಎಸ್.ಶಿವಶಂಕರ್ - ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ
- ಪಿ.ಕೆ. ಶೇಕರ್ ಬಾಬು - ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ
- ಪಳನಿವೆಲ್ ತ್ಯಾಗರಾಜನ್ - ಹಣಕಾಸು ಸಚಿವ
- ಎಸ್.ಎಂ. ನಾಸರ್ - ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವ
- ಜಿಂಗೀ ಕೆ.ಎಸ್. ಮಸ್ತಾನ್ - ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅನಿವಾಸಿ ತಮಿಳರ ಕಲ್ಯಾಣ ಸಚಿವ
- ಅನ್ಬಿಲ್ ಮಹೇಶ್ ಪಯ್ಯಮೊಯಿ - ಶಾಲಾ ಶಿಕ್ಷಣ ಸಚಿವ
- ಶಿವ. ವಿ.ಮಯನಾಥನ್ - ಪರಿಸರ, ಯುವ ಕಲ್ಯಾಣ ಮತ್ತು ಕ್ರೀಡಾ ಸಚಿವ
- ಸಿ.ವಿ. ಗಣೇಶನ್ - ಕಾರ್ಮಿಕ ಸಚಿವ
- ಟಿ.ಮನೋ ತಂಗರಾಜ್ - ಮಾಹಿತಿ ತಂತ್ರಜ್ಞಾನ ಸಚಿವ
- ಎಂ.ಮಥಿವೆಂತನ್ - ಪ್ರವಾಸೋದ್ಯಮ ಸಚಿವ
- ಎನ್.ಕಯಾಲ್ವಿಜಿ ಸೆಲ್ವರಾಜ್ - ಆದಿ ದ್ರಾವಿಡರ ಕಲ್ಯಾಣ ಸಚಿವ
234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ 159 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಇದೀಗ 10 ವರ್ಷಗಳ ಬಳಿಕ ಅಧಿಕಾರದ ಗದ್ದುಗೆ ಏರಿದೆ.