ಚೆನ್ನೈ (ತಮಿಳುನಾಡು): ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಎಂ.ಕೆ.ಸ್ಟಾಲಿನ್ ಅವರು ಫೋರ್ಟ್ ಸೇಂಟ್ ಜಾರ್ಜ್‌ನ ಸಚಿವಾಲಯದಲ್ಲಿರುವ ತಮ್ಮ ಕಚೇರಿಯಿಂದ ಐದು ನಿರ್ಣಾಯಕ ಕಡತಗಳಿಗೆ ಸಹಿ ಹಾಕಿದರು. ಈ ಮೂಲಕ ಸಿಎಂ ಆಗಿ ಪದಗ್ರಹಣ ಮಾಡಿದ ದಿನದಂದೇ ತಮಿಳುನಾಡಿನ ಜನತೆಯ ಖುಷಿ ಹೆಚ್ಚಿಸಿದ್ದಾರೆ.
ಕೊರೊನಾ ಚಿಕಿತ್ಸೆಯನ್ನು ಮುಖ್ಯಮಂತ್ರಿಗಳ ಆರೋಗ್ಯ ವಿಮಾ ಯೋಜನೆಯಡಿ ನೀಡುವುದು, ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ಎಲ್ಲಾ ಚಿಕಿತ್ಸಾ ವೆಚ್ಚಗಳನ್ನು ಸರ್ಕಾರವು ಮರುಪಾವತಿ ಮಾಡುವುದು, ರಾಜ್ಯಾದ್ಯಂತ ಮಹಿಳೆಯರಿಗೆ ಸರ್ಕಾರಿ ಸಿಟಿ ಬಸ್‌ಗಳಲ್ಲಿ (ಸಾಮಾನ್ಯ ಸೇವೆ) ಉಚಿತ ಪ್ರಯಾಣವನ್ನು ಘೋಷಿಸಿದ್ದಾರೆ.
![Stalin sanctions Bumper gift to Tamilnadu](https://etvbharatimages.akamaized.net/etvbharat/prod-images/stalin_0705newsroom_1620373532_128.jpg)
ಚುನಾವಣಾ ಅಭಿಯಾನದ ಸಮಯದಲ್ಲಿ ಭರವಸೆ ನೀಡಿದಂತೆ ಪ್ರತಿ ಪಡಿತರ ಚೀಟಿದಾರರಿಗೆ 4,000 ರೂ.ಗಳ ಕೋವಿಡ್ ಪರಿಹಾರವನ್ನು ವಿತರಿಸಲಾಗುವುದು. ಕೊರೊನಾ ಸಾಂಕ್ರಾಮಿಕ ಪರಿಹಾರವಾಗಿ ಮೊದಲ ಕಂತು 2,000 ರೂ. ಮೇ ತಿಂಗಳಲ್ಲಿ ನೀಡಲಾಗುವುದು ಎಂದು ನೂತನ ಸಿಎಂ ಘೋಷಿಸಿದ್ದಾರೆ.
ಇದನ್ನೂ ಓದಿ: ದಶಕದ ಬಳಿಕ ತಮಿಳುನಾಡು ಗದ್ದುಗೆ ಏರಿದ ಡಿಎಂಕೆ: ಸಿಎಂ ಆಗಿ ಎಂ.ಕೆ.ಸ್ಟಾಲಿನ್ ಪ್ರಮಾಣ
ಸರ್ಕಾರಿ ಹಾಲಿನ ಸಹಕಾರಿ ಸಂಘವಾದ ಆವಿನ್, ಹಾಲಿನ ಬೆಲೆಯನ್ನು ಲೀಟರ್‌ಗೆ 3 ರೂ.ಗಳಷ್ಟು ಕಡಿಮೆ ಮಾಡಿದ್ದು, ಇದು ಮೇ 16 ರಿಂದ ಜಾರಿಗೆ ಬರಲಿದೆ.