ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಗ್ಗೆ ಈಗಾಗಲೇ ಹೊಸ ಊಹಾಪೋಹಗಳಿವೆ. ಸೌರವ್, ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬಹುದು ಎಂಬ ಗುಸುಗುಸು ಸಹ ಇದೆ. ಈ ಅನುಮಾನಗಳಿಗೆ ಪುಷ್ಟಿ ನೀಡುವಂತೆ ಗಂಗೂಲಿ ನಿಗೂಢಾರ್ಥದ ಟ್ವೀಟ್ ಮಾಡಿದ್ದಾರೆ.
ನಾನು ಏನನ್ನಾದರೂ ಪ್ರಾರಂಭಿಸಲು ಯೋಜಿಸುತ್ತಿದ್ದೇನೆ ಎಂದು ಟ್ವಿಟರ್ನಲ್ಲಿ ಬರೆದಿದ್ದಾರೆ, ಅದು ಬಹುಶಃ ಬಹಳಷ್ಟು ಜನರಿಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ನಾನು ನನ್ನ ಜೀವನದ ಈ ಅಧ್ಯಾಯವನ್ನು ಪ್ರವೇಶಿಸುವಾಗ ನೀವು ನನ್ನನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಗಂಗೂಲಿ ಟ್ವೀಟ್ ಮಾಡಿದ್ದಾರೆ.
- — Sourav Ganguly (@SGanguly99) June 1, 2022 " class="align-text-top noRightClick twitterSection" data="
— Sourav Ganguly (@SGanguly99) June 1, 2022
">— Sourav Ganguly (@SGanguly99) June 1, 2022
ಈ ಟ್ವೀಟ್ ನಂತರ ಸೋಶಿಯಲ್ ಮೀಡಿಯಾದಲ್ಲಿ ಗಂಗೂಲಿ, ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಆದರೆ ಈ ಬಗ್ಗೆ ಗಂಗೂಲಿ ಅಧಿಕೃತವಾಗಿ ಎಲ್ಲೂ ಘೋಷಣೆ ಮಾಡಿಲ್ಲ.
ಇತ್ತೀಚೆಗೆ, ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೌರವ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಗೃಹ ಸಚಿವರು ಸೌರವ್ ಅವರ ಮನೆಗೆ ತೆರಳಿದ್ದರು. ಇಬ್ಬರೂ ಒಟ್ಟಿಗೆ ಊಟ ಮಾಡಿದ್ದರು.