ETV Bharat / bharat

ವಿಧಾನ ಸಮರದಲ್ಲಿ ಟಿಎಂಸಿ, ಡಿಎಂಕೆ ಗೆಲುವು: ಸ್ಟಾಲಿನ್, ಮಮತಾಗೆ ಸೋನಿಯಾ ಅಭಿನಂದನೆ - ಟಿಎಂಸಿ

ಬಂಗಾಳದಲ್ಲಿ ಮೂರನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಟಿಎಂಸಿ ಹಾಗೂ ತಮಿಳುನಾಡು ಆಳಲು ಡಿಎಂಕೆ ಸಜ್ಜಾಗಿದ್ದು, ದೀದಿ ಹಾಗೂ ಸ್ಟಾಲಿನ್​ಗೆ ಸೋನಿಯಾ ಗಾಂಧಿ ಅಭಿನಂದಿಸಿದ್ದಾರೆ.

Sonia Gandhi congratulates Mamata Banerjee, MK Stalin for poll win
ಸ್ಟಾಲಿನ್, ಮಮತಾಗೆ ಸೋನಿಯಾ ಅಭಿನಂದನೆ
author img

By

Published : May 3, 2021, 9:16 AM IST

ನವದೆಹಲಿ: ಪ. ಬಂಗಾಳ ಮತ್ತು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ್ದಕ್ಕಾಗಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್​ಗೆ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿನಂದನೆ ಸಲ್ಲಿಸಿದ್ದಾರೆ.

ಬಂಗಾಳದಲ್ಲಿ ಮೂರನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಸಜ್ಜಾಗಿದ್ದು, ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವನ್ನು ಸೋಲಿಸಿರುವ ಡಿಎಂಕೆ ಮುಖ್ಯಸ್ಥ ಸ್ಟಾಲಿನ್​ ಶೀಘ್ರದಲ್ಲೇ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೀದಿ ಹಾಗೂ ಸ್ಟಾಲಿನ್​ಗೆ ದೂರವಾಣಿ ಕರೆ ಮಾಡಿ ಸೋನಿಯಾ ಗಾಂಧಿ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಕಮಲ್‌ ಹಾಸನ್‌ಗೆ ಸೋಲುಣಿಸಿದ 'ಕಮಲ' ಪಕ್ಷದ ನಾಯಕಿ ವನತಿ ಶ್ರೀನಿವಾಸನ್‌

ನಿನ್ನೆ ವಿಧಾನಸಭೆ ಚುನಾವಣಾ ಫಲಿತಾಂಶ ಹೊರ ಬಂದಿದ್ದು, ಪಶ್ಚಿಮ ಬಂಗಾಳದ 292 ಸ್ಥಾನಗಳ ಪೈಕಿ ಟಿಎಂಸಿ 213 ಕ್ಷೇತ್ರಗಳಲ್ಲಿ ಗೆದ್ದಿದೆ. ತಮಿಳುನಾಡಿನಲ್ಲಿ10 ವರ್ಷಗಳ ಕಾಲ ಪ್ರತಿಪಕ್ಷದಲ್ಲಿದ್ದ ಡಿಎಂಕೆ, 234 ಸ್ಥಾನಗಳ ಪೈಕಿ 157 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್​ ಪಕ್ಷ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.