ETV Bharat / bharat

ನಡ್ಕೊಂಡು ದೇವಸ್ಥಾನಕ್ಕೆ ಹೋಗ್ತಿದ್ದಾಗ ಹರಿದ ಕಾರು: 6 ಮಂದಿ ಸಾವು, ಹಲವರಿಗೆ ಗಾಯ - Etv bharat kannada

ದೇವರ ದರ್ಶನಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಇನ್ನೋವಾ ಕಾರು ಹರಿದು ಗುಜರಾತ್‌ನಲ್ಲಿ ಭೀಕರ ಅವಘಡ ಸಂಭವಿಸಿದೆ.

Six people died in an accident
Six people died in an accident
author img

By

Published : Sep 2, 2022, 9:44 AM IST

Updated : Sep 2, 2022, 12:06 PM IST

ಅರಾವಳಿ(ಗುಜರಾತ್​): ಬೆಳ್ಳಂಬೆಳಗ್ಗೆ ವಿಧಿಯಾಟಕ್ಕೆ ಆರು ಮಂದಿ ಭಕ್ತರು ದುರ್ಮರಣ ಹೊಂದಿದ ಘಟನೆ ಗುಜರಾತ್​​ನಲ್ಲಿ ನಡೆದಿದೆ. ಅರಾವಳಿ ಜಿಲ್ಲೆಯ ಮಾಲ್ಪುರ್​ ಎಂಬಲ್ಲಿನ ಕೃಷ್ಣನಗರದ ಅಂಬಾಜಿ ದೇವಸ್ಥಾನಕ್ಕೆ ನಡೆದುಕೊಂಡು ಹೋಗ್ತಿದ್ದ ಭಕ್ತರ ಮೇಲೆ ವೇಗವಾಗಿ ಬಂದ ಇನ್ನೋವಾ ಕಾರು ಹರಿದಿದೆ. ಪರಿಣಾಮ, ಆರು ಮಂದಿ ಸಾವಿಗೀಡಗಿದ್ದಾರೆ. ಅಲ್ಲದೇ ಇತರೆ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಡ್ಕೊಂಡು ದೇವಸ್ಥಾನಕ್ಕೆ ಹೋಗ್ತಿದ್ದಾಗ ಹರಿದ ಕಾರು

ಇದನ್ನೂ ಓದಿ: ಆಮ್‌ ಆದ್ಮಿ ಪಕ್ಷದ ಶಾಸಕಿಗೆ ಎಲ್ಲರೆದುರೇ ಕಪಾಳಮೋಕ್ಷ ಮಾಡಿದ ಪತಿ: ವಿಡಿಯೋ ವೈರಲ್​​

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತರೆಲ್ಲರೂ ದಾಹೋದ್​​ನ ಲಿಮ್ಖೇಡಾ ಮತ್ತು ಮಾಲ್​​ಪುರದವರು ಎಂದು ಗುರುತಿಸಲಾಗಿದೆ.

ಪರಿಹಾರ ಘೋಷಿಸಿದ ಮುಖ್ಯಮಂತ್ರಿ: ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಕುಟುಂಬಗಳಿಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​​ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತರಿಗೆ 4 ಲಕ್ಷ ರೂ ಹಾಗೂ ಗಾಯಗೊಂಡಿರುವರಿಗೆ 50 ಸಾವಿರ ರೂ. ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಘಟನೆಯ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.

Last Updated : Sep 2, 2022, 12:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.