ಚೆನ್ನೈ: ಕ್ರೋಮ್ಪೇಟೆಯ ಎಂಐಟಿ ಫ್ಲೈಓವರ್ನಿಂದ ಯುವಕನೊಬ್ಬ ಕಾರಿನ ಮೇಲೆ ಬಿದ್ದಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.
ತಮಿಳುನಾಡಿನ ಚೆನ್ನೈನಲ್ಲಿರುವ ಕ್ರೋಮ್ಪೇಟ್ನಲ್ಲಿ ಈ ಘಟನೆ ನಡೆದಿದ್ದು, ಆತನ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸಿಸಿಟಿವಿ ದೃಶ್ಯಾವಳಿ ಇದೀಗ ರಿಲೀಸ್ ಆಗಿವೆ.
ಇದನ್ನೂ ಓದಿ: ಯುಪಿಯಲ್ಲಿ ಭಾನುವಾರ ಲಾಕ್ಡೌನ್.. 2ನೇ ಸಲ ಮಾಸ್ಕ್ ನಿಯಮ ಉಲ್ಲಂಘಿಸಿದ್ರೆ 10 ಸಾವಿರ ದಂಡ!
ಯುವಕ ಬಿದ್ದಿರುವ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಫ್ಲೈಓವರ್ ಮೇಲಿಂದ ಯುವಕ ಆಯಾತಪ್ಪಿ ಬಿದ್ದಿರುವುದೇ? ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕೆಳಗೆ ಬಿದ್ದನಾ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವಕನ್ನ ಸಧ್ಯ ಕ್ರೋಮ್ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ಕೆಳಗೆ ಬಿದ್ದಿರುವ ದೃಶ್ಯಾವಳಿ ನೋಡಿ ವೀಕ್ಷಕರು ಬೆಚ್ಚಿಬಿದ್ದಿದ್ದಾರೆ.