ETV Bharat / bharat

ತನ್ನನ್ನು ತಾನೇ ಮದುವೆಯಾಗಲಿರುವ ಯುವತಿಗೆ ವಿಘ್ನ.. ಸಮಾರಂಭಕ್ಕೆ ಅಡ್ಡಿ, ತೀವ್ರ ವಿರೋಧ - ತನ್ನನ್ನು ತಾನೇ ವಿವಾಹ ಮಾಡಿಕೊಳ್ಳಲಿರುವ ಯುವತಿ

ಸೆಲ್ಫ್‌ ಮ್ಯಾರೇಜ್‌ ಮಾಡಿಕೊಳ್ಳಲು ಮುಂದಾಗಿದ್ದ ಯುವತಿಯೊಬ್ಬಳಿಗೆ ಇದೀಗ ಅಡ್ಡಿ ಉಂಟಾಗಿದ್ದು, ದೇವಸ್ಥಾನದಲ್ಲಿ ನಡೆಯಬೇಕಾಗಿದ್ದ ಸಮಾರಂಭ ರದ್ಧುಗೊಳಿಸಲಾಗಿದೆ.

Vadodara girl Marriage disrupted
Vadodara girl Marriage disrupted
author img

By

Published : Jun 3, 2022, 3:43 PM IST

ವಡೋದರಾ(ಗುಜರಾತ್​): ತನ್ನೊಂದಿಗೆ ತಾನೇ ವಿವಾಹ ಮಾಡಿಕೊಳ್ಳಲು ಮುಂದಾಗಿದ್ದ ವಡೋದರಾದ 24 ವರ್ಷದ ಯುವತಿಯೊಬ್ಬಳಿಗೆ ಇದೀಗ ವಿಘ್ನ ಎದುರಾಗಿದೆ. ವಡೋದರಾದ ಮೇಯರ್ ಸುನೀತಾ ಅವರ ಸಹೋದರಿ ಶುಕ್ಲಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ದೇವಸ್ಥಾನದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಮದುವೆ ಕಾರ್ಯಕ್ರಮ ರದ್ಧುಗೊಳಿಸಿದ್ದಾರೆ.

24 ವರ್ಷದ ಯುವತಿ ಜೂನ್​ 11ರಂದು ದೇವಸ್ಥಾನದಲ್ಲಿ ಸ್ವಯಂ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಳು. ಇದಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಸಿದ್ಧತೆಗಳು ಆಯೋಜನೆಗೊಂಡಿದ್ದವು. ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆ ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ದೇವಸ್ಥಾನದಲ್ಲಿ ನಡೆಯಬೇಕಾಗಿದ್ದ ಸಮಾರಂಭ ರದ್ಧುಗೊಳಿಸಲಾಗಿದೆ.

Vadodara girl Marriage disrupted
ತನ್ನನ್ನು ತಾನೇ ಮದುವೆಯಾಗಲಿರುವ ಯುವತಿಗೆ ವಿಘ್ನ...

ಈ ಮದುವೆ ಬಗ್ಗೆ ಗೊತ್ತಾಗುತ್ತಿದ್ದಂತೆ ಅನೇಕರು ಪ್ರತಿಭಟನೆ ನಡೆಸುತ್ತಿದ್ದು, ಯುವತಿ ಮದುವೆಯಾಗಲಿರುವ ದೇವಸ್ಥಾನ ನಮ್ಮ ಪ್ರದೇಶದಲ್ಲಿದೆ. ಅದಕ್ಕೆ ನಾವು ಅನುಮತಿ ನೀಡಲ್ಲ ಎಂದಿದ್ದಾರೆ. ನಾಗರಿಕ ಸಮಾಜದಲ್ಲಿ ಇಂತಹ ನಿರ್ಧಾರ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದೇವಸ್ಥಾನದ ಹೊರಗಡೆ ಬೇಕಾದರೆ ಅವಳು ಮದುವೆ ಮಾಡಿಕೊಳ್ಳಲಿ. ಆದರೆ, ದೇವಸ್ಥಾನದಲ್ಲಿ ಅದಕ್ಕೆ ನಾವು ಒಪ್ಪಿಗೆ ನೀಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆ ಪ್ರಕರಣ: ಹೆಚ್ಚಿನ ಅರೆ ಸೇನಾಪಡೆ ನಿಯೋಜನೆ

ಇದನ್ನೂ ಓದಿ: ತನ್ನನ್ನು ತಾನೇ ವಿವಾಹ ಮಾಡಿಕೊಳ್ಳಲಿರುವ ಯುವತಿ; 2 ವಾರ ಹನಿಮೂನ್​​: ಗುಜರಾತ್​​ನಲ್ಲೊಂದು ಸೆಲ್ಫ್ ಮ್ಯಾರೇಜ್​

ಜೂನ್ 11ರಂದು ವಡೋದರದ ದೇವಸ್ಥಾನದ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಕಾರ್ಯಕ್ರಮ ನಡೆಯಬೇಕಾಗಿದೆ. ವಿಶೇಷವೆಂದರೆ ಆರತಕ್ಷತೆ, ಮೆಹಂದಿ ಸೇರಿದಂತೆ ತಾಳಿ ಕಟ್ಟುವ ಮುಹೂರ್ತ ಸಹ ಇದರಲ್ಲಿ ನಡೆಯಬೇಕಾಗಿದೆ. ಆದರೆ, ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಕಾರಣ, ಮುಂದೆ ಏನಾಗಲಿದೆ ಎಂಬ ಕುತೂಹಲ ಮೂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.