ETV Bharat / bharat

ಕಾಂಗ್ರೆಸ್​​ನಲ್ಲಿದ್ದಿದ್ದರೆ ಮುಂದೆ ಸಿಎಂ ಆಗ್ತಿದ್ದರು.. ಬಿಜೆಪಿಯಲ್ಲಿ ಸಿಂದಿಯಾ ಈಗ ಹಿಂದಿನ ಬೆಂಚಿನ ವಿದ್ಯಾರ್ಥಿ: ರಾಹುಲ್​ ವ್ಯಂಗ್ಯ

ಕಳೆದ ವರ್ಷ ಸಿಂದಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅಷ್ಟೇ ಅಲ್ಲ ಕಮಲನಾಥ್ ನೇತೃತ್ವದ ಕಾಂಗ್ರೆಸ್​ ಸರ್ಕಾರವನ್ನ ಉರುಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಿಂದಿಯಾ ನೆರವು ನೀಡಿದ್ದರು.

Rahul Gandhi
ರಾಹುಲ್​ ಗಾಂಧಿ
author img

By

Published : Mar 9, 2021, 8:39 AM IST

ನವದೆಹಲಿ: ಜ್ಯೋತಿರಾಧಿತ್ಯ ಸಿಂದಿಯಾ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಮರುಕ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ನಲ್ಲಿ ಇದ್ದಿದ್ದರೆ ಸಿಎಂ ಆಗ್ತಿದ್ದರು.. ಆದರೆ ಬಿಜೆಪಿಗೆ ಹೋಗಿ ಲಾಸ್ಟ್​​ ಬೆಂಚರ್​ ಆಗಿದ್ದಾರೆ ಎಂದು ರಾಹುಲ್​ ವ್ಯಂಗ್ಯವಾಡಿದ್ದಾರೆ. ಯುವ ಕಾಂಗ್ರೆಸ್​ ಕೋರ್​ ಕಮಿಟಿ ಸಭೆಯಲ್ಲಿ ಮಾತನಾಡಿರುವ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯುವ ಕಾಂಗ್ರೆಸ್​​​ ಸಭೆಯಲ್ಲಿ ಈ ಬಗ್ಗೆ ಮಾತನಾಡಿರುವ ರಾಹುಲ್​ ಗಾಂಧಿ, ನಾನು ಅವನಿಗೆ ಹೇಳಿದ್ದೇ ನೀನು ಮುಂದೆ ಸಿಎಂ ಆಗುತ್ತಿಯಾ ಎಂದು ಆದರೆ, ಆತ ಬೇರೆ ಮಾರ್ಗವನ್ನು ಆಯ್ಕೆ ಮಾಡಿಕೊಂಡ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಮುಂದುವರಿದ ಮಾತನಾಡಿರುವ ಅವರು, ಬರೆದು ಇಟ್ಟುಕೊಳ್ಳಿ ಅವರು ಮುಂದೆ ಯಾವುದೇ ಕಾರಣಕ್ಕೂ ಸಿಎಂ ಆಗುವುದಿಲ್ಲ. ಒಂದೊಮ್ಮೆ ಅವರು ವಾಪಸ್ ಬಂದರೆ ಆಹಬಹುದು ಎಂದು ಹೇಳಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇದೇ ವೇಳೆ, ಆರ್‌ಎಸ್‌ಎಸ್‌ನ ಸಿದ್ಧಾಂತದ ವಿರುದ್ಧ ಹೋರಾಡಲು ಯಾರಿಗೂ ಹೆದರಬೇಡಿ ಎಂದು ಪಕ್ಷದ ಯುವ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಓದಿ : ಎಐಸಿಸಿ ಅಧ್ಯಕ್ಷರಾಗಿ ರಾಹುಲ್​​​​ರನ್ನ ಮತ್ತೆ ನೇಮಿಸಬೇಕೆಂಬ ನಿರ್ಣಯ ಮಂಡಿಸಿದ ಯುವ ಕಾಂಗ್ರೆಸ್

ಅಂದ ಹಾಗೆ ಕಳೆದ ವರ್ಷ ಸಿಂದಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅಷ್ಟೇ ಅಲ್ಲ ಕಮಲನಾಥ್ ನೇತೃತ್ವದ ಕಾಂಗ್ರೆಸ್​ ಸರ್ಕಾರವನ್ನ ಉರುಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಿಂದಿಯಾ ನೆರವು ನೀಡಿದ್ದರು. ಅಷ್ಟೇ ಅಲ್ಲ ಅವರು ಬಿಜೆಪಿಯಿಂದು ಈಗ ರಾಜ್ಯ ಸಭೆಗೆ ಆಯ್ಕೆ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.