ನವದೆಹಲಿ: ಟೆಲಿಕಾಂ ಕಂಪನಿ ಏರ್ಟೆಲ್ಗೆ ಸುಮಾರು 932 ಕೋಟಿ ರೂಪಾಯಿ ಜಿಎಸ್ಟಿ ಮರುಪಾವತಿಗಾಗಿ ಆದೇಶಿಸಿದ್ದ ದೆಹಲಿ ಹೈಕೋರ್ಟ್ನ ಆದೇಶವನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಎತ್ತಿ ಹಿಡಿದಿದೆ.
2017ರ ಜುಲೈನಿಂದ ಸೆಪ್ಟೆಂಬರ್ವರೆಗಿನ ಜಿಎಸ್ಟಿಯ ಸುಮಾರು 932 ಕೋಟಿ ರೂಪಾಯಿ ಮರುಪಾವತಿ ಮಾಡಬೇಕೆಂದು ದೆಹಲಿ ಹೈಕೋರ್ಟ್ 2020ರ ಮೇ 5ರಂದು ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಈ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.
ದೆಹಲಿ ಹೈಕೋರ್ಟ್ನ ದ್ವಿಸದಸ್ಯ ಪೀಠ ಜಿಎಸ್ಟಿ ಮರು ಪಾವತಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಕೇಂದ್ರ ಸರ್ಕಾರದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ಪೀಠ ಮೇಲ್ಮನವಿಯನ್ನು ಊರ್ಜಿತಗೊಳಿಸಿದ್ದು, ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: ಶಿವಾಜಿ ಮಹಾರಾಜರ ನಾಡಿನಲ್ಲಿ ನಮಗೆ ಪ್ರತಿದಿನ ಅವಮಾನ, ರಕ್ಷಿಸಿ: ಸಮೀರ್ ವಾಂಖೆಡೆ ಪತ್ನಿ ಮನವಿ