ETV Bharat / bharat

ಶಶಿಕಲಾ ಸೇರಿ ಆಕೆ ಕುಟುಂಬಕ್ಕೆ ಎಂದಿಗೂ ಎಐಎಡಿಎಂಕೆಗೆ ಪ್ರವೇಶವಿಲ್ಲ: ಮಾಜಿ ಸಚಿವ ಷಣ್ಮುಖಂ - ಎಐಎಡಿಎಂಕೆ

ವಿ.ಕೆ. ಶಶಿಕಲಾ ಮತ್ತು ಅವಳ ಕುಟುಂಬ ಸದಸ್ಯರಿಗೆ ಎಂದಿಗೂ ಎಐಎಡಿಎಂಕೆ ಪಕ್ಷಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಎಐಎಡಿಎಂಕೆ ವಿಲ್ಲುಪುರಂ ಜಿಲ್ಲಾ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಷಣ್ಮುಖಂ ಹೇಳಿದ್ದಾರೆ.

Sasikala
ವಿ.ಕೆ. ಶಶಿಕಲಾ
author img

By

Published : Jun 17, 2021, 9:25 PM IST

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ದೀರ್ಘಕಾಲದ ಒಡನಾಡಿ ವಿ.ಕೆ. ಶಶಿಕಲಾ ಮತ್ತು ಅವಳ ಕುಟುಂಬ ಸದಸ್ಯರಿಗೆ ಎಂದಿಗೂ ಎಐಎಡಿಎಂಕೆ ಪಕ್ಷಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಷಣ್ಮುಖಂ ಹೇಳಿದ್ದಾರೆ. ಎಐಎಡಿಎಂಕೆ ವಿಲ್ಲುಪುರಂ ಜಿಲ್ಲಾ ಕಾರ್ಯದರ್ಶಿ ಮತ್ತು ಮಾಜಿ ಸಚಿವರಾದ ಷಣ್ಮುಖಂ, ಎಐಎಡಿಎಂಕೆಗೆ ಶಶಿಕಲಾ ಅವರ ಪ್ರವೇಶದ ವಿರುದ್ಧ ಜಿಲ್ಲಾ ಘಟಕವು ನಿರ್ಣಯವನ್ನು ಅಂಗೀಕರಿಸಿದೆ ಎಂದು ಹೇಳಿದ್ದಾರೆ.

ಅವರು ಪಕ್ಷಕ್ಕೆ ಹಿಂತಿರುಗಿ ನಮ್ಮನ್ನು ನಿಯಂತ್ರಿಸುತ್ತಾರೆ ಎಂದು ಶಶಿಕಲಾ ಅವರಿಗೆ ಕೆಟ್ಟ ಭಾವನೆಯಿತ್ತು. ಅಂತಹ ಕ್ರಮವನ್ನು ಯಾವುದೇ ಪಕ್ಷದ ಕಾರ್ಯಕರ್ತರು ಬೆಂಬಲಿಸುವುದಿಲ್ಲ. ಶಶಿಕಲಾ ಅವರ "ಕುತಂತ್ರಗಳು" ದಿವಂಗತ ಮುಖ್ಯಮಂತ್ರಿ ಜಯಲಲಿತಾರನ್ನು ಜೂಲು ಶಿಕ್ಷೆಗೆ ಗುರಿಮಾಡಿದೆ. ಯಾವುದೇ ಪಕ್ಷದ ಕಾರ್ಯಕರ್ತರು ಶಶಿಕಲಾ ಅವರನ್ನು ಪಕ್ಷಕ್ಕೆ ಹಿಂದಿರುಗಿಸುವುದನ್ನು ಒಪ್ಪುವುದಿಲ್ಲ ಎಂದು ಹೇಳಿದರು.

ಇದನ್ನು ಓದಿ: ಒಣ ಮೀನು ಕೂಡ ಜೀವಂತವಾಗಿ ಬರಬಹುದು..ಆದರೆ ಶಶಿಕಲಾ ಅವರು ಪಕ್ಷಕ್ಕೆ ಮರಳಲು ಸಾಧ್ಯವಿಲ್ಲ: ಎಐಡಿಎಂಕೆ

ಎಐಎಡಿಎಂಕೆಯಲ್ಲಿ ಶಶಿಕಲಾಗೆ ಸ್ವಾಗತವಿಲ್ಲ. ಪಕ್ಷಕ್ಕೆ ಪ್ರವೇಶಿಸಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಷಣ್ಮುಖಂ ಈ ಹಿಂದೆ ಹೇಳಿದ್ದರು. ಇದರ ಬೆನ್ನಲ್ಲೇ ತನಗೆ ಹಲವಾರು ಬೆದರಿಕೆ ಕರೆಗಳು ಬಂದಿದ್ದು, ತನಗೆ ಬೆದರಿಕೆ ಹಾಕಿದ್ದಕ್ಕಾಗಿ ಶಶಿಕಲಾ ಮತ್ತು ಆಕೆಯ ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.