ETV Bharat / bharat

ಹಣ ಕದಿಯಲು ಎಟಿಎಂಗೆ ನುಗ್ಗಿದ ಖದೀಮ: ಸೆಕ್ಯೂರಿಟಿ ಗಾರ್ಡ್ ಮಾಡಿದ್ದೇನು? ವಿಡಿಯೋ

ರಾತ್ರಿ ವೇಳೆ ಹೆಲ್ಮೆಟ್ ಧರಿಸಿದ ಅಪರಿಚಿತ ವ್ಯಕ್ತಿವೋರ್ವ ಎಟಿಎಂ ಒಳಗೆ ನುಗ್ಗಿ ಹಣ ಕದಿಯಲು ಪ್ರಯತ್ನಿಸಿದ್ದ. ಈತನ ಯತ್ನವನ್ನು ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್​ ಧೈರ್ಯದಿಂದ ಆತನನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡಿನಲ್ಲಿ ಈ ಘಟನೆ ನಡೆದಿದೆ.

ಎಟಿಎಂಗೆ ನುಗ್ಗಿ ಹಣ ಕದಿಯಲು ಯತ್ನ
ಎಟಿಎಂಗೆ ನುಗ್ಗಿ ಹಣ ಕದಿಯಲು ಯತ್ನ
author img

By

Published : Dec 10, 2020, 9:10 AM IST

ತಮಿಳುನಾಡು: ಎಟಿಎಂನಲ್ಲಿ ಹಣ ಕದಿಯಲು ಪ್ರಯತ್ನಿಸಿದ ಅಪರಿಚಿತ ವ್ಯಕ್ತಿಯನ್ನು ಸೆಕ್ಯೂರಿಟಿ ಗಾರ್ಡ್​ವೊಬ್ಬರು ಧೈರ್ಯದಿಂದ ಹಿಂದಕ್ಕೆ ಓಡಿಸಿರುವ ಘಟನೆ ರಾಮನಾಧಪುರಂ ಜಿಲ್ಲೆಯ ರೋಮನ್ ಚರ್ಚ್ ಬಳಿಯ ಖಾಸಗಿ ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ.

ಎಟಿಎಂಗೆ ನುಗ್ಗಿ ಹಣ ಕದಿಯಲು ಯತ್ನ

ಎಟಿಎಂ ಕೇಂದ್ರದಲ್ಲಿ ರುದ್ರಪತಿ (50) ಎಂಬುವರು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ರಾತ್ರಿ ವೇಳೆ ಹೆಲ್ಮೆಟ್ ಧರಿಸಿದ ಅಪರಿಚಿತ ವ್ಯಕ್ತಿವೋರ್ವ ಎಟಿಎಂ ಒಳಗೆ ನುಗ್ಗಿದ್ದ. ಇದನ್ನು ಗಮನಿಸಿದ ರುದ್ರಪತಿ ಆತನನ್ನು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಖದೀಮ ಕಬ್ಬಿಣದ ರಾಡ್​ನಿಂದ ರುದ್ರಪತಿಗೆ ಹೊಡೆಯಲು ಮುಂದಾಗಿದ್ದಾನೆ. ಕೆಲ ಕಾಲ ಭದ್ರತಾ ಸಿಬ್ಬಂದಿ ಮತ್ತು ಕಳ್ಳನ ನಡುವೆ ಜಗಳ ಮುಂದುವರೆದಿದ್ದು, ನಂತರ ಅಪರಿಚಿತ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆ ಕುರಿತಂತೆ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.