ನವದೆಹಲಿ: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ 79ನೇ ಜನ್ಮದಿನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಇಂದು ಬೆಳಗ್ಗೆ ದೆಹಲಿಯ 'ವೀರ ಭೂಮಿ'ಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ಮಗಳು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪತಿ ರಾಬರ್ಟ್ ವಾದ್ರಾ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಮಾಜಿ ಪ್ರಧಾನಿಯ ಸಮಾಧಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ವೀರಭೂಮಿಯ ಹೊರಗೆ ರಾಜೀವ್ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸದ್ಯ ಲಡಾಖ್ ಪ್ರವಾಸದಲ್ಲಿದ್ದು ತಮ್ಮ ತಂದೆಯನ್ನು ಸ್ಮರಿಸಿದ್ದಾರೆ. ಅಧಿಕೃತ 'X' ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, "ಅಪ್ಪಾ, ನೀವು ಭಾರತದ ಬಗ್ಗೆ ಕಂಡ ಕನಸುಗಳನ್ನು, ಅಮೂಲ್ಯ ನೆನಪುಗಳನ್ನಿಲ್ಲಿ (ಹಾಕಿರುವ ವಿಡಿಯೋ) ತೋರಿಸಲಾಗಿದೆ. ನಿಮ್ಮ ಗುರುತು ನನ್ನ ದಾರಿ. ಪ್ರತಿಯೊಬ್ಬ ಭಾರತೀಯನ ಹೋರಾಟ ಮತ್ತು ಕನಸುಗಳನ್ನು ಅರ್ಥಮಾಡಿಕೊಳ್ಳುವುದು, ಭಾರತಮಾತೆಯ ಧ್ವನಿಯನ್ನು ಆಲಿಸುವುದು ನೀವು ಹಾಕಿಕೊಟ್ಟ ಮಾರ್ಗ" ಎಂದು ಬರೆದಿದ್ದಾರೆ.
ಪ್ಯಾಂಗೊಂಗ್ ಸರೋವರ ದಡದಲ್ಲಿ ರಾಹುಲ್ ಗಾಂಧಿ: ರಾಜೀವ್ ಗಾಂಧಿ ಜನ್ಮದಿನದ ಅಂಗವಾಗಿ ಇಂದು ಪ್ಯಾಂಗೊಂಗ್ ಸರೋವರ ದಡದಲ್ಲಿ ಪ್ರಾರ್ಥನಾ ಸಭೆ ನಡೆಯಿತು. ರಾಹುಲ್ ಗಾಂಧಿ ತಮ್ಮ ತಂದೆಯ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ಈ ಸರೋವರಕ್ಕೆ ಬೈಕ್ ರೈಡ್ ಮೂಲಕ ಆಗಮಿಸಿದ್ದಾರೆ.
-
पापा, आपकी आंखों में भारत के लिए जो सपने थे, इन अनमोल यादों से छलकते हैं।
— Rahul Gandhi (@RahulGandhi) August 20, 2023 " class="align-text-top noRightClick twitterSection" data="
आपके निशान मेरा रास्ता हैं - हर हिंदुस्तानी के संघर्षों और सपनों को समझ रहा हूं, भारत मां की आवाज़ सुन रहा हूं। pic.twitter.com/VqkbxoPP7l
">पापा, आपकी आंखों में भारत के लिए जो सपने थे, इन अनमोल यादों से छलकते हैं।
— Rahul Gandhi (@RahulGandhi) August 20, 2023
आपके निशान मेरा रास्ता हैं - हर हिंदुस्तानी के संघर्षों और सपनों को समझ रहा हूं, भारत मां की आवाज़ सुन रहा हूं। pic.twitter.com/VqkbxoPP7lपापा, आपकी आंखों में भारत के लिए जो सपने थे, इन अनमोल यादों से छलकते हैं।
— Rahul Gandhi (@RahulGandhi) August 20, 2023
आपके निशान मेरा रास्ता हैं - हर हिंदुस्तानी के संघर्षों और सपनों को समझ रहा हूं, भारत मां की आवाज़ सुन रहा हूं। pic.twitter.com/VqkbxoPP7l
ಇದಕ್ಕೂ ಮುನ್ನ, ಲಡಾಕ್‌ನ ಫೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. "ನಾವು ಹೋಗುತ್ತಿರುವ ಪ್ಯಾಂಗಾಂಗ್ ಸರೋವರ ಪ್ರಪಂಚದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದು ನನ್ನ ತಂದೆ ಹೇಳುತ್ತಿದ್ದರು" ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದರು. ರಾಹುಲ್ 2 ದಿನಗಳ ಭೇಟಿಗಾಗಿ ಲಡಾಖ್‌ಗೆ ಬಂದಿದ್ದರು. ಆದರೆ ಈ ಪ್ರವಾಸವನ್ನು ಆಗಸ್ಟ್ 25 ರವರೆಗೆ ವಿಸ್ತರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜೀವ್ ಗಾಂಧಿ ಕುರಿತು..: ರಾಜೀವ್ ಗಾಂಧಿ ತಮ್ಮ ತಾಯಿ ಹಾಗು ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಹತ್ಯೆಯ ನಂತರ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದರು. ಅಕ್ಟೋಬರ್ 1984ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಇವರ ವಯಸ್ಸು ಕೇವಲ 40 ವರ್ಷ. ಹೀಗಾಗಿ ಭಾರತದ ಅತ್ಯಂತ ಕಿರಿಯ ಪ್ರಧಾನಿ ಎಂದೆನಿಸಿದರು. ಡಿಸೆಂಬರ್ 2, 1989 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೇ 21, 1991ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ರ್‍ಯಾಲಿಯ ವೇಳೆ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್ಟಿಟಿಇ) ಆತ್ಮಾಹುತಿ ಬಾಂಬರ್‌ನಿಂದ ರಾಜೀವ್ ಗಾಂಧಿ ಹತ್ಯೆಗೀಡಾದರು.
ಇದನ್ನೂ ಓದಿ: 'ಯೋಧರ ಸೇವೆ ಸದಾ ಸ್ಮರಣೀಯ..': ಲಡಾಖ್ ದುರಂತಕ್ಕೆ ಮೋದಿ, ಖರ್ಗೆ, ರಾಹುಲ್ ಸೇರಿದಂತೆ ಗಣ್ಯರ ಸಂತಾಪ