ನವದೆಹಲಿ : ನಾಲ್ಕು ಗಂಟೆಗಳ ರಾಷ್ಟ್ರವ್ಯಾಪಿ ರೈಲು ತಡೆ ಚಳವಳಿಯನ್ನು 'ಶಾಂತಿಯುತ ಮತ್ತು ಯಶಸ್ವಿ' ಎಂದು ಹೇಳಿರುವ ರೈತ ಸಂಘಟನೆಗಳು, ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಲೇಬೇಕಿದೆ ಎಂದು ಹೇಳಿದೆ.
ರೈಲ್ ತಡೆ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ರೈಲ್ ರೋಖೋ, ಇದು ಶಾಂತಿಯುತ ಮತ್ತು ಯಶಸ್ವಿಯಾಗಿದೆ. ರೈತರ ಕೋಪ ತೀವ್ರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದು ಸರ್ಕಾರಕ್ಕೆ ಅನಿವಾರ್ಯ.
ರೈತರ ಚಳವಳಿಯ ಬಗ್ಗೆ ಕೇಂದ್ರದ ಮನೋಭಾವವನ್ನು ಭಾರತದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ವಿರೋಧಿಸಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ: ಪಾಕ್ ಸೇರಿ ಕೋವಿಡ್ ನಿರ್ವಹಣೆ ಕುರಿತು ಪಿಎಂ ಮೋದಿ ಪ್ರಸ್ತಾಪಗಳನ್ನು ಶ್ಲಾಘಿಸಿದ ನೆರೆಯ ರಾಷ್ಟ್ರಗಳು
ಕರ್ನಾಟಕ, ಪಂಜಾಬ್, ಹರಿಯಾಣ ಸೇರಿ ದೇಶದ ವಿವಿಧೆಡೆ ರೈತರು ನಿನ್ನೆ ಮಧ್ಯಾಹ್ನ 12 ರಿಂದ ಸಂಜೆ 4ರವರೆಗೆ ರೈಲುಗಳನ್ನು ತಡೆದು ಪ್ರತಿಭಟಿಸಿದ್ದರು.