ಬಟಿಂಡಾ(ಪಂಜಾಬ್): ಪಂಜಾಬ್ ಆಮ್ ಆದ್ಮಿ ಪಕ್ಷದ ಶಾಸಕಿ ಬಲ್ಜಿಂದರ್ ಕೌರ್ ಅವರಿಗೆ ಆಕೆಯ ಶಾಸಕ ಪತಿ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆಡಳಿತ ಪಕ್ಷದ ನಾಯಕರೂ ಆಗಿರುವ ಅವರ ಪತಿ ಕಪಾಳಕ್ಕೆ ಹೊಡೆದಿದ್ದಾರೆ. ಈ ಘಟನೆ ಜುಲೈ 10ರಂದು ನಡೆದಿದೆ.
ಪಂಜಾಬ್ನ ತಲ್ವಾಂಡಿ ಸಾಬೋ ಕ್ಷೇತ್ರದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾಗಿರುವ ಸುಖರಾಜ್ ಸಿಂಗ್ ಅವರೊಂದಿಗೆ ಪತ್ನಿ ಬಲ್ಜಿಂದರ್ ಕೌರ್ ವಾದ ಮಾಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಈ ಸಂದರ್ಭದಲ್ಲಿ ಆಕ್ರೋಶಗೊಂಡಿರುವ ಸುಖರಾಜ್ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ಕೊಳಕು ಬೆಡ್ ಮೇಲೆ ಮಲಗಿಸಿದ ಆರೋಗ್ಯ ಸಚಿವ: ಹುದ್ದೆಗೆ ರಾಜೀನಾಮೆ ನೀಡಿದ ವೈದ್ಯಕೀಯ ವಿವಿ ಕುಲಪತಿ
ಘಟನೆ ನಡೆದಾಗ ಕೆಲವರು ಮಧ್ಯಪ್ರವೇಶಿಸಿ ಎಲ್ಲರನ್ನೂ ದೂರ ತಳ್ಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ. ಪಂಜಾಬ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮನೀಶಾ ಗುಲಾಟಿ ಪ್ರಕರಣದ ಬಗ್ಗೆ ಸ್ವಯಂಪ್ರೇರಿತವಾಗಿ ನೋಟಿಸ್ ನೀಡುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ. ಬಲ್ಜಿಂದರ್ ಕೌರ್ ಹಾಗೂ ಸುಖರಾಜ್ ಸಿಂಗ್ 2019ರ ಫೆಬ್ರವರಿ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.