ಚಂಡೀಗಢ: ಪಂಜಾಬ್‌ನಲ್ಲಿ ಬಂದೂಕು ಸಂಸ್ಕೃತಿಯ ವಿರುದ್ಧ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದ ನಂತರ ಅಮೃತಸರದಲ್ಲಿ 10 ವರ್ಷದ ಮಗುವಿನ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕುರಿತು ಹಿರಿಯ ಅಕಾಲಿದಳದ ನಾಯಕ ಬಿಕ್ರಮ್ ಮಜಿಥಿಯಾ ಅವರು ಸಿಎಂ ಭಗವಂತ್ ಮಾನ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
-
Mittran nu shonk hathiaran da?
— Bikram Singh Majithia (@bsmajithia) November 27, 2022 " class="align-text-top noRightClick twitterSection" data="
ਪਰ ਪਰਚੇ ਬੱਚਿਆਂ ਤੇ ਹੋ ਰਹੇ ਨੇ 🤔 @BhagwantMann pic.twitter.com/81vHcdWtlf
">Mittran nu shonk hathiaran da?
— Bikram Singh Majithia (@bsmajithia) November 27, 2022
ਪਰ ਪਰਚੇ ਬੱਚਿਆਂ ਤੇ ਹੋ ਰਹੇ ਨੇ 🤔 @BhagwantMann pic.twitter.com/81vHcdWtlfMittran nu shonk hathiaran da?
— Bikram Singh Majithia (@bsmajithia) November 27, 2022
ਪਰ ਪਰਚੇ ਬੱਚਿਆਂ ਤੇ ਹੋ ਰਹੇ ਨੇ 🤔 @BhagwantMann pic.twitter.com/81vHcdWtlf
ಸಿಎಂ ಭಗವಂತ್ ಮಾನ್ ಬಂದೂಕು ಹಿಡಿದಿರುವ ಹಳೆಯ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವರು ಚಿತ್ರಕ್ಕೆ 'ಸ್ನೇಹಿತರು ಆಯುಧಗಳನ್ನು ಇಷ್ಟಪಡುತ್ತಾರೆಯೇ'? ಎಂದು ಶೀರ್ಷಿಕೆ ನೀಡಿದ್ದಾರೆ. ಚಿತ್ರದಲ್ಲಿ ಭಗವಂತ್ ಮಾನ್ ಡಬಲ್ ಬ್ಯಾರಲ್ ಗನ್ ಹಿಡಿದುಕೊಂಡು ಗುಂಡು ಹಾರಿಸುತ್ತಿರುವುದನ್ನು ಕಾಣಬಹುದು. ಟ್ವೀಟ್‌ನಲ್ಲಿ ಮಜಿಥಿಯಾ ಅವರು ಸಿಎಂ ಮಾನ್ ಅವರನ್ನು ಟ್ಯಾಗ್ ಮಾಡಿ, 'ಸ್ನೇಹಿತರು ಬಂದೂಕುಗಳನ್ನು ಇಷ್ಟಪಡುತ್ತಾರೆ. ಆದರೆ ಮಕ್ಕಳ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ' ಎಂದು ಬರೆದಿದ್ದಾರೆ.
-
Due to negligence/oversight a case was registered against the child, though his name is not mentioned in the #FIR. Let us assure all, The child would not be treated as an accused. NO #action will be taken against any innocent.#TuhadiSevaSaadaFarz pic.twitter.com/rzhOb52uMz
— Amritsar Rural Police (@AmritsarRPolice) November 25, 2022 " class="align-text-top noRightClick twitterSection" data="
">Due to negligence/oversight a case was registered against the child, though his name is not mentioned in the #FIR. Let us assure all, The child would not be treated as an accused. NO #action will be taken against any innocent.#TuhadiSevaSaadaFarz pic.twitter.com/rzhOb52uMz
— Amritsar Rural Police (@AmritsarRPolice) November 25, 2022Due to negligence/oversight a case was registered against the child, though his name is not mentioned in the #FIR. Let us assure all, The child would not be treated as an accused. NO #action will be taken against any innocent.#TuhadiSevaSaadaFarz pic.twitter.com/rzhOb52uMz
— Amritsar Rural Police (@AmritsarRPolice) November 25, 2022
10 ವರ್ಷದ ಮಗುವಿನ ಮೇಲೆ ಎಫ್‌ಐಆರ್: ಕೆಲ ದಿನಗಳ ಹಿಂದೆ 10 ವರ್ಷದ ಮಗುವಿನ ಮೇಲೆ ಬಂದೂಕು ಸಂಸ್ಕೃತಿಗೆ ಪ್ರೋತ್ಸಾಹ ನೀಡಿದ ಆರೋಪದಡಿ ಹಲ್ಕಾ ಮಜಿತದ ಕಥುನಂಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಆ ಚಿತ್ರ ಹಳೆಯದಾಗಿದ್ದು, ಆ ಮಗುವಿಗೆ ಆಗ 4 ವರ್ಷ. ಈ ಚಿತ್ರವನ್ನು 6 ವರ್ಷಗಳ ಹಿಂದೆ ಮಗುವಿನ ತಂದೆ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಮಗುವಿನ ಹೆಸರನ್ನು ಉಲ್ಲೇಖಿಸದಿದ್ದರೂ ನಿರ್ಲಕ್ಷ್ಯದ ಕಾರಣ ಮಗುವಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಅಮೃತಸರ ಗ್ರಾಮಾಂತರ ಪೊಲೀಸರು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿಲ್ಲ ಮಗುವನ್ನು ಆರೋಪಿ ಎಂದು ಪರಿಗಣಿಸುವುದಿಲ್ಲ ಎಂದು ಭರವಸೆ ನೀಡಿದ್ದರು.
-
Appeal to Everyone to voluntarily remove any objectionable content from their Social Media handles in the next 72 hours.
— DGP Punjab Police (@DGPPunjabPolice) November 26, 2022 " class="align-text-top noRightClick twitterSection" data="
CM Punjab has directed that no FIRs for glorifying weapons will be registered for the next 3 days in Punjab to allow people to remove content on their own. pic.twitter.com/JwkrYVhN3N
">Appeal to Everyone to voluntarily remove any objectionable content from their Social Media handles in the next 72 hours.
— DGP Punjab Police (@DGPPunjabPolice) November 26, 2022
CM Punjab has directed that no FIRs for glorifying weapons will be registered for the next 3 days in Punjab to allow people to remove content on their own. pic.twitter.com/JwkrYVhN3NAppeal to Everyone to voluntarily remove any objectionable content from their Social Media handles in the next 72 hours.
— DGP Punjab Police (@DGPPunjabPolice) November 26, 2022
CM Punjab has directed that no FIRs for glorifying weapons will be registered for the next 3 days in Punjab to allow people to remove content on their own. pic.twitter.com/JwkrYVhN3N
ಮಜಿಥಿಯಾ ವಿರುದ್ಧ ಕ್ರಮ?: ಪಂಜಾಬ್ ಪೊಲೀಸರು ಶಸ್ತ್ರಾಸ್ತ್ರಗಳನ್ನು ವೈಭವೀಕರಿಸುವ ಛಾಯಾಚಿತ್ರಗಳನ್ನು ತೆಗೆದುಹಾಕಲು ಮೂರು ದಿನಗಳ ಕಾಲಾವಕಾಶ ನೀಡಿದ್ದಾರೆ. ಈ ಆದೇಶವು ನಾಳೆ ಸಂಜೆಯವರೆಗೆ ಅನ್ವಯಿಸುತ್ತದೆ. ಆದರೆ ಬಿಕ್ರಮ್ ಮಜಿಥಿಯಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸಿಎಂ ಭಗವಂತ್ ಮಾನ್ ಅವರ ಚಿತ್ರವನ್ನು ವೈರಲ್ ಮಾಡಿದ್ದಾರೆ. ಇದಕ್ಕಾಗಿ ಅಕಾಲಿದಳದ ನಾಯಕ ಬಿಕ್ರಮ್ ಮಜಿಥಿಯಾ ವಿರುದ್ಧ ಸಿಎಂ ಭಗವಂತ್ ಮಾನ್ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ವಿರೋಧ ಪಕ್ಷಗಳ ಟೀಕೆಗಳ ನಡುವೆಯೇ ಪಂಜಾಬ್ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಗನ್ ಸಂಸ್ಕೃತಿ ಮತ್ತು ಹಿಂಸೆಯನ್ನು ಉತ್ತೇಜಿಸುವ ಬಂದೂಕುಗಳು ಮತ್ತು ಹಾಡುಗಳ ಸಾರ್ವಜನಿಕ ಪ್ರದರ್ಶನಕ್ಕೆ ನಿಷೇಧ ಹೇರಿದೆ. ಅಧಿಕೃತ ಆದೇಶದ ಪ್ರಕಾರ, ರಾಜ್ಯ ಸರ್ಕಾರವು ಮುಂದಿನ ಮೂರು ತಿಂಗಳಲ್ಲಿ ಶಸ್ತ್ರಾಸ್ತ್ರ ಪರವಾನಗಿಗಳ ಮರುಪರಿಶೀಲನೆಗೆ ಆದೇಶಿಸಿದೆ.
ಇದನ್ನೂ ಓದಿ: ಜಾಲತಾಣಗಳಲ್ಲಿ ಆಯುಧದೊಂದಿಗೆ ಫೋಟೋ ಹಾಕುವಂತಿಲ್ಲ: ಬಂದೂಕು ಸಂಸ್ಕೃತಿಗೆ ಕಡಿವಾಣ