ETV Bharat / bharat

Project Tiger: ತಮಿಳುನಾಡಿನ ಕಾಡುಗಳಲ್ಲಿರುವ ಹುಲಿಗಳ ಸಂಖ್ಯೆ 306; 16 ವರ್ಷಗಳಲ್ಲಿ ಸಂತತಿ 4 ಪಟ್ಟು ಹೆಚ್ಚಳ - ತಮಿಳುನಾಡಿನ ಐದು ಹುಲಿ ಸಂರಕ್ಷಿತ ಪ್ರದೇಶ

TN registers increase in Tiger population: ತಮಿಳುನಾಡಿನ ಕಾಡುಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಸದ್ಯ ಈ ರಾಜ್ಯದಲ್ಲಿ 306 ಹುಲಿಗಳಿವೆ ಎಂದು ವರದಿ ತಿಳಿಸಿದೆ.

TN registers four fold increase in tiger population in 16 years

author img

By

Published : Jul 30, 2023, 1:01 PM IST

ಚೆನ್ನೈ : ತಮಿಳುನಾಡಿನಲ್ಲಿ ಹುಲಿಗಳ ಸಂತತಿ ವ್ಯಾಪಕವಾಗಿ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಹುಲಿಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. 2006ರಲ್ಲಿ 76 ಹುಲಿಗಳಿದ್ದು, ಪ್ರಸ್ತುತ ಇವುಗಳ ಸಂಖ್ಯೆ 306 ಆಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಮತ್ತು ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (WII) ಶನಿವಾರ ಜಾಗತಿಕ ಹುಲಿ ದಿನದ ಸಂದರ್ಭದಲ್ಲಿ ಹುಲಿಗಳ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.

2018 ರ ಕೊನೆಯಲ್ಲಿ ನಡೆದಿದ್ದ ಹುಲಿ ಗಣತಿಯಲ್ಲಿ ತಮಿಳುನಾಡು ಅರಣ್ಯಗಳಲ್ಲಿ 264 ಹುಲಿಗಳಿರುವುದು ಕಂಡು ಬಂದಿತ್ತು. ಆದರೆ ಇತ್ತೀಚಿನ ಗಣತಿಯಲ್ಲಿ ಈ ಸಂಖ್ಯೆ 306 ಕ್ಕೆ ತಲುಪಿದೆ. ಅನಮಲೈ ಹುಲಿ ಸಂರಕ್ಷಿತ ಪ್ರದೇಶ, ಕಲಕ್ಕಾಡ್ -ಮುಂಡಂತುರೈ ಹುಲಿ ಸಂರಕ್ಷಿತ ಪ್ರದೇಶ (KMTR), ಮುದುಮಲೈ ಹುಲಿ ಸಂರಕ್ಷಿತ ಪ್ರದೇಶ (MTR), ಶ್ರೀವಿಲ್ಲಿಪುತ್ತೂರ್ ಮೇಗಮಲೈ ಹುಲಿ ಸಂರಕ್ಷಿತ ಪ್ರದೇಶ (SMTR) ಮತ್ತು ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶ (STR) ಹೀಗೆರಾಜ್ಯವು ಐದು ಹುಲಿ ಸಂರಕ್ಷಿತ ಪ್ರದೇಶಗಳನ್ನು ಹೊಂದಿದೆ.

ತಮಿಳುನಾಡಿನ ಐದು ಹುಲಿ ಸಂರಕ್ಷಿತ ಪ್ರದೇಶಗಳ ಪೈಕಿ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶ (MTR) ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ. ಜನಗಣತಿಯ ಪ್ರಕಾರ, ಎಂಟಿಆರ್‌ನಲ್ಲಿ ವಾಸಿಸುವ ಹುಲಿಗಳ ಸಂಖ್ಯೆ 114 ಆಗಿದೆ. ಇನ್ನು 167 ಹುಲಿಗಳು ಈ ಮೀಸಲು ಪ್ರದೇಶದ ಒಳಗೆ ಮತ್ತು ಹೊರಗೆ ಚಲಿಸುತ್ತಿರುತ್ತವೆ. ಅರಣ್ಯ ಮೀಸಲು ವ್ಯಾಪ್ತಿ ಹೆಚ್ಚಳ, ಬೇಟೆ ತಡೆ ಕ್ರಮಗಳು ಮತ್ತು ಬೇಟೆಯ ವಿರುದ್ಧ ಜಾಗೃತಿ ಮುಂತಾದ ಕ್ರಮಗಳಿಂದ ಹುಲಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹಿರಿಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಹುಲಿಗಳ ಸಂಖ್ಯೆ ಅತ್ಯಧಿಕ ಮಟ್ಟವನ್ನು ತಲುಪಿರುವುದರಿಂದ ಮುಂದಿನ ಗಣತಿಯಲ್ಲಿ ಹುಲಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಮಾಹಿತಿ ನೀಡಿದ ಪಿಸಿಸಿಎಫ್ (ಪ್ರಾಜೆಕ್ಟ್ ಟೈಗರ್) ಆಕಾಶ್ ದೀಪ್ ಬರುವಾ, ತಮಿಳುನಾಡಿನಲ್ಲಿ ಈಗ 902 ಬೇಟೆ ತಡೆಗಟ್ಟುವ ಕಾವಲುಗಾರರು ಕೆಲಸ ಮಾಡುತ್ತಿದ್ದು, ಇವರು ಐದು ಹುಲಿ ಸಂರಕ್ಷಿತ ಪ್ರದೇಶಗಳ 238 ಬೇಟೆ ವಿರೋಧಿ ಶಿಬಿರಗಳಲ್ಲಿ ಹರಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹುಲಿಗಳ ಬೇಟೆ ತಡೆಗೆ ತಮಿಳುನಾಡು ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳು ಅವುಗಳ ಹತ್ಯೆ ತಡೆಯಲು ಸಹಕಾರಿಯಾಗಿವೆ ಎಂದರು.

ನೈಸರ್ಗಿಕ ಸಸ್ಯ, ಪ್ರಾಣಿ, ಮಣ್ಣು ಮತ್ತು ಒಟ್ಟಾರೆ ಆವಾಸಸ್ಥಾನವನ್ನು ರಕ್ಷಿಸಲು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆಕ್ರಮಣಕಾರಿ ಜಾತಿಯ ಸಸ್ಯಗಳ ಹರಡುವಿಕೆಯನ್ನು ತಡೆಗಟ್ಟುವ ತುರ್ತು ಅಗತ್ಯವಿದೆ ಎಂದು ಎನ್‌ಟಿಸಿಎ ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿನ ಹುಲಿಗಳು ಮತ್ತು ಇತರ ಕಾಡು ಪ್ರಭೇದಗಳ ಉಳಿವಿಗಾಗಿ ಮಾನವ-ಪ್ರಾಣಿ ಸಂಘರ್ಷವನ್ನು ಕೊನೆಗಾಣಿಸುವುದು ಬಹಳ ಮುಖ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : S Jaishankar: ತಂತ್ರಜ್ಞಾನದ ವ್ಯಾಪಾರ ರಾಜಕೀಯವನ್ನೂ ಒಳಗೊಂಡಿದೆ- ವಿದೇಶಾಂಗ ಸಚಿವ ಎಸ್.ಜೈಶಂಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.