ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ(ಪಿಎಂಜಿಕೆಎವೈ) ಅಡಿಯಲ್ಲಿ ವಿತರಣೆ ಮಾಡಲಾಗುತ್ತಿರುವ ಉಚಿತ ಪಡಿತರವನ್ನ ಸೆಪ್ಟೆಂಬರ್ವರೆಗೆ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಂದು ನಡೆದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
-
Pradhan Mantri Garib Kalyan Anna Yojana extended for 6 months, till September 2022. pic.twitter.com/MQdbOCAQln
— ANI (@ANI) March 26, 2022 " class="align-text-top noRightClick twitterSection" data="
">Pradhan Mantri Garib Kalyan Anna Yojana extended for 6 months, till September 2022. pic.twitter.com/MQdbOCAQln
— ANI (@ANI) March 26, 2022Pradhan Mantri Garib Kalyan Anna Yojana extended for 6 months, till September 2022. pic.twitter.com/MQdbOCAQln
— ANI (@ANI) March 26, 2022
ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದ ಕಾರಣಕ್ಕಾಗಿ 2020ರ ಮಾರ್ಚ್ ತಿಂಗಳಲ್ಲಿ ಉಚಿತವಾಗಿ ಪಡಿತರ ವಿತರಣೆ ಘೋಷಣೆ ಮಾಡಲಾಗಿತ್ತು. ಆರಂಭದಲ್ಲಿ 2020ರ ಜೂನ್ವರೆಗೆ ನಿಗದಿ ಮಾಡಿದ್ದ ಈ ಯೋಜನೆಯನ್ನ ನಂತರ ವಿಸ್ತರಣೆ ಮಾಡಲಾಗಿತ್ತು. ಆದರೆ, ಇದೀಗ ಮತ್ತೊಮ್ಮೆ ಮುಂದಿನ ಆರು ತಿಂಗಳ ಕಾಲ ಯೋಜನೆ ವಿಸ್ತರಣೆಯಾಗಿದೆ. ಹೀಗಾಗಿ ದೇಶದ 80 ಕೋಟಿ ಪಡಿತರ ಕಾರ್ಡ್ದಾರರಿಗೆ ಉಚಿತವಾಗಿ ರೇಷನ್ ಸಿಗಲಿದೆ.
ಇದನ್ನೂ ಓದಿ: ವಯಸ್ಸು 81, 66 ಆದ್ರೂ ಸ್ನಾತಕೋತ್ತರ ಪದವಿ ಪರೀಕ್ಷೆ ಬರೆದ್ರು.. ವಿಜಯಪುರದಲ್ಲಿ ವೃದ್ಧರಿಬ್ಬರ ದಾಖಲೆ!
ಒಟ್ಟು 80 ಕೋಟಿ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಪ್ರತಿ ತಿಂಗಳು ಉಚಿತ ಆಹಾರ ಧಾನ್ಯ ವಿತರಣೆ ಮಾಡಲಾಗ್ತಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಉತ್ತರ ಪ್ರದೇಶ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಯೋಗಿ ಆದಿತ್ಯನಾಥ್ ಕೂಡ ಮುಂದಿನ ಮೂರು ತಿಂಗಳ ಕಾಲ ಉಚಿತವಾಗಿ ಪಡಿತರ ನೀಡುವ ಘೋಷಣೆ ಮಾಡಿದ್ದು, ಜೂನ್ 30ರವರೆಗೆ ಇದು ವಿಸ್ತರಣೆಗೊಂಡಿದೆ.