ETV Bharat / bharat

ಶತ್ರು ಹಡಗುಗಳ ಮೇಲೆ ಕಣ್ಗಾವಲಿಗೆ 2 ಪ್ರಿಡೇಟರ್‌ ಡ್ರೋನ್​​ ಬಳಕೆ: ನೌಕಾದಳ ಉಪ ಮುಖ್ಯಸ್ಥ ಅಶೋಕ್​​

author img

By

Published : Jun 19, 2021, 11:38 AM IST

ಹಿಂದೂ ಮಹಾಸಾಗರದಲ್ಲಿ ಕೆಲ ಹಡಗುಗಳು ಹಾದುಹೋಗುತ್ತವೆ. ಇವುಗಳ ಮೇಲೆ ನಿಗಾ ವಹಿಸಲು ಪ್ರಿಡೇಟರ್‌ (ಪರಭಕ್ಷಕ) ಡ್ರೋನ್​​ಗಳನ್ನು ಬಳಸಲಾಗುತ್ತಿದೆ ಎಂದು ನೌಕಾ ದಳದ ಉಪ ಮುಖ್ಯಸ್ಥ ಆಡ್ಮಿರಲ್‌ ಜಿ.ಅಶೋಕ್‌ ಕುಮಾರ್‌ ಹೇಳಿದ್ದಾರೆ.

Predator drones helping us to keep watch on 'vessels of interest': Indian Navy Vice Chief
ಶತ್ರು ಹಡಗುಗಳ ಮೇಲೆ ಕಣ್ಗಾವಲಿಗೆ 2 ಪ್ರಿಡೇಟರ್‌ ಡ್ರೋಣ್‌ಗಳ ಬಳಕೆ - ನೌಕಾದಳ ಉಪ ಮುಖ್ಯಸ್ಥ ಅಶೋಕ್

ನವದಹೆಲಿ: ಉತ್ತರ ಗಡಿಗಳಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಸಂಘರ್ಷದ ಬೆನ್ನಲ್ಲೇ ಭಾರತದ ನೌಕಾ ಪಡೆಯ 2 ಪ್ರಿಡೇಟರ್‌ (ಎಂಕ್ಯೂ -9 ಸೀ ಗಾರ್ಡಿಯನ್) ಡ್ರೋನ್​​ಗಳು ಹಿಂದೂ ಮಹಾಸಾಗರದಲ್ಲಿ ಸೇನೆಯ ಕಣ್ಗಾವಲು ಹೆಚ್ಚಿಸಲು ಸಹಕಾರಿಯಾಗಿವೆ ಎಂದು ನೌಕಾ ದಳದ ಉಪ ಮುಖ್ಯಸ್ಥ ಆಡ್ಮಿರಲ್‌ ಜಿ.ಅಶೋಕ್‌ ಕುಮಾರ್‌ ತಿಳಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಮಹಾಸಾಗರದಲ್ಲಿ ಕೆಲ ಹಡಗುಗಳು ಹಾದುಹೋಗುತ್ತವೆ. ಇವುಗಳ ಮೇಲೆ ನಿಗಾ ವಹಿಸಲು ಪ್ರಿಡೇಟರ್‌ (ಪರಭಕ್ಷಕ) ಡ್ರೋನ್​​ಗಳನ್ನು ಬಳಸಲಾಗುತ್ತದೆ ಎಂದು ಹೇಳಿದರು. ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆ ಬಳಿಕ ಎರಡು ಡ್ರೋನ್‌ಗಳನ್ನು ಅಮೆರಿಕದಿಂದ ಭಾರತೀಯ ನೌಕಾಪಡೆಯು ಗುತ್ತಿಗೆಗೆ ಪಡೆದಿದ್ದು, ಚೀನಾದ ಯುದ್ಧನೌಕೆಗಳು ಮತ್ತು ಇತರ ಅನುಮಾನಾಸ್ಪದ ಹಡಗುಗಳ ಚಲನವನಗಳನ್ನು ಸೂಕ್ಷ್ಮವಾಗಿ ಗಮನಿಸಲು ಸಹಾಯ ಮಾಡುತ್ತವೆ ಎಂದರು.

ನೌಕಾದಳ ಉಪ ಮುಖ್ಯಸ್ಥ ಅಶೋಕ್

MQ-9 ಸೀ ಗಾರ್ಡಿಯನ್ ಡ್ರೋನ್‌ಗಳು ವಿಶಾಲವಾದ ಪ್ರದೇಶದ ಮೇಲೆ ನಿಗಾ ಇಡಲು ಅನುವು ಮಾಡುತ್ತವೆ. ಜೊತೆಗೆ ಜಾಗೃತಗೊಳ್ಳಲು ನೆರವಾಗಿವೆ. ದೇಶದ ಜಲಗಡಿ ಪ್ರದೇಶವಾದ ಅರೇಬಿಯನ್‌ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಕಾರ್ಯನಿರ್ವಹಿಸುವ ಯಾವುದೇ ಹಡಗಿನ ಕಾಣ್ಗಾವಲಿಗೆ ಪರಭಕ್ಷಕ ಡ್ರೋನ್‌ಗಳ ಮೂಲಕ ತುಂಬಾ ಸ್ಪಷ್ಟವಾಗಿ ಸಮೀಪದಿಂದ ನೋಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕುಂಭಮೇಳ ವೇಳೆ ನಕಲಿ ಕೋವಿಡ್ ಟೆಸ್ಟ್​: ವಿಶೇಷ ತನಿಖಾ ದಳ ರಚಿಸಿದ ಉತ್ತರಾಖಂಡ್​​​ ಸರ್ಕಾರ

ವಿರೋಧಿಗಳ ಸಂಭವನೀಯ ದಾಳಿ ಮೇಲೆನಿಗಾ ಇಡಲು ಡ್ರೋನ್‌ಗಳನ್ನು ಬಳಸುತ್ತೇವೆ. ನಿಯಮಗಳನ್ನು ಉಲ್ಲಂಘಿಸುವ ಚೀನಾ, ಜಪಾನ್‌ ಯಾವುದೇ ದೇಶದ ಹಡಗುಗಳ ಮೇಲೆ ಕಾಣ್ಗಾವಲು ಇದ್ದೇ ಇರುತ್ತದೆ.

ಅಮೆರಿಕದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಎರಡು ಡ್ರೋನ್​​ಗಳನ್ನು ಲೀಸ್‌ಗೆ ತಂದಿರುವುದು ದೇಶದ ಮೂರು ಸೇನೆಗಳ ಪೈಕಿ ನೌಕಾದಳ ಮೊದಲ ಸೇನೆಯಾಗಿದೆ. ಈ ಡ್ರೋನ್​​ಗಳು 35 ಗಂಟೆಗಳಿಗೂ ಅಧಿಕ ಕಾಲ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿವೆ. ಹಡಗಿನ ಚಲನವಲನ ಗಮನಿಸುತ್ತೆ ಎಂದು ಆಡ್ಮಿರಲ್‌ ವಿವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.