ETV Bharat / bharat

10 ಬಾರಿ ಶಾಸಕ, 7 ಬಾರಿ ಸಂಸದ, 3 ಬಾರಿ ಸಿಎಂ.. ತೃತೀಯ ರಂಗ ಮಾಂತ್ರಿಕನ ರಾಜಕೀಯದ ​ಏಳು-ಬೀಳು - ಮುಲಾಯಂ ಸಿಂಗ್​ರ ಅಧಿಕಾರದ ಹಾದಿ

ಉತ್ತರಪ್ರದೇಶ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದರು ಮುಲಾಯಂ ಸಿಂಗ್​ ಯಾದವ್​ ಅವರದ್ದು ಮುತ್ಸದ್ಧಿ ರಾಜಕೀಯ. ಮೂರು ಬಾರಿ ರಾಜ್ಯದ ಸಿಎಂ ಆಗಿದ್ದಲ್ಲದೇ, 10 ಬಾರಿ ಶಾಸಕರಾಗಿ, 7 ಬಾರಿ ಸಂಸದರಾಗಿ, ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿಯೂ ಕೆಲಸ ಮಾಡಿದ್ದಾರೆ.

political-journey-of-mulayam-singh-yadav
ಉತ್ತರಪ್ರದೇಶದ ರಾಜಕೀಯ ಮಾಂತ್ರಿಕನ ​ಏಳು-ಬೀಳು
author img

By

Published : Oct 10, 2022, 11:50 AM IST

ಹೈದರಾಬಾದ್​: ಜಿಸ್ಕಾ ಜಲವಾ ಕಾಯಂ ಹೈ, ಉಸ್ಕಾ ನಾಮ್ ಮುಲಾಯಂ ಹೈ.. ಅಂದರೆ ಯಾರ ವರ್ಚಸ್ಸು ಈಗಲೂ ಇದೆಯೋ ಅವರೇ ಮುಲಾಯಂ ಸಿಂಗ್ ಯಾದವ್​. ರಾಜಕೀಯದ ಮಾಂತ್ರಿಕ ಶಕ್ತಿ ಎಂದು ಹೆಸರಾಗಿದ್ದ ಸಮಾಜವಾದಿ ಪಕ್ಷ ಸಂಸ್ಥಾಪಕ ಮುಲಾಯಂ ಅವರು ಕುಸ್ತಿ ಅಖಾಡದಿಂದ ಮೂರು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿ ಗಾದಿ ಏರಿದ್ದರು.

ಅಧಿಕಾರದ ಹಾದಿ: 1967 ರಲ್ಲಿ ರಾಜಕೀಯಕ್ಕೆ ಧುಮುಕಿದ ಮುಲಾಯಂ ಸಿಂಗ್​ ಅವರು 10 ಬಾರಿ ಶಾಸಕ, 7 ಬಾರಿ ಸಂಸದರಾದರು. ಅಲ್ಲದೇ ಮೂರು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿ ಆಡಳಿತ ನಡೆಸಿದ ಅನುಭವ ಮುಲಾಯಂ ಸಿಂಗ್​ರದ್ದಾಗಿದೆ.

ಕುಸ್ತಿ ಪಟುವಾಗಿದ್ದ ಮುಲಾಯಂ ಸಿಂಗ್ ಅವರು 1962 ರಲ್ಲಿ ಕುಸ್ತಿಯಾಡುತ್ತಿದ್ದ ವೇಳೆ ಒಕ್ಕೂಟ ಸಮಾಜವಾದಿ ಪಕ್ಷ ನಾಥು ಸಿಂಗ್​ ಭೇಟಿಯಾಗಿ ರಾಜಕೀಯಕ್ಕೆ ಆಹ್ವಾನಿಸಿದರು. ಬಳಿಕ ಮುಲಾಯಂಗೆ 1967 ರಲ್ಲಿ ವಿಧಾನಸಭೆ ಟಿಕೆಟ್​ ಕೂಡ ನೀಡಿದರು.

ಮೊದಲ ಚುನಾವಣೆಯಲ್ಲಿ ಗೆದ್ದ ಮುಲಾಯಂ ಬಳಿಕ 10 ಬಾರಿ ಶಾಸಕರಾಗಿ ಆಯ್ಕೆಯಾದರು. ರಾಜಕೀಯದಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದರು. ಇದಲ್ಲದೇ, ಲೋಕಸಭೆಗೂ ಕಾಲಿಟ್ಟ ಮುಲಾಯಂ 7 ಬಾರಿ ಸಂಸದರಾಗಿಯೂ ಆಯ್ಕೆಯಾದರು.

ಉತ್ತರಪ್ರದೇಶದ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಮುಲಾಯಂ ಅವರು 1989 ರಲ್ಲಿ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. 1990 ರಲ್ಲಿ ಕೇಂದ್ರದ V. P. ಸಿಂಗ್ ಸರ್ಕಾರದ ಪತನ ಹೊಂದಿತು. ಬಳಿಕ ಯಾದವ್ ಅವರು ಚಂದ್ರಶೇಖರ್ ಅವರ ಜನತಾದಳ (ಸಮಾಜವಾದಿ) ಪಕ್ಷವನ್ನು ಸೇರಿದರು. ಅವರ ಬೆಂಬಲದೊಂದಿಗೆ ಸಿಎಂ ಆಗಿ ಅಧಿಕಾರದಲ್ಲಿ ಮುಂದುವರಿದರು.

1991 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಮುಲಾಯಂ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿದ್ದರಿಂದ ಸರ್ಕಾರ ಪತನವಾಯಿತು. 1991 ರ ಮಧ್ಯದಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆಗಳು ನಡೆದು ಕಲ್ಯಾಣ ಸಿಂಗ್​ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು.

1991 ರ ಡಿಸೆಂಬರ್​ 6 ರಂದು ಕರಸೇವಕರು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದರು. ಸಿಎಂ ಕಲ್ಯಾಣ್ ಸಿಂಗ್ ರಾಜೀನಾಮೆ ನೀಡಬೇಕಾಗಿ ಬಂತು. ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು.

1992 ರಲ್ಲಿ ಸಮಾಜವಾದಿ ಪಕ್ಷ ಸ್ಥಾಪನೆ: ಒಕ್ಕೂಟ ಸಮಾಜವಾದಿ ಪಕ್ಷದ ಚಂದ್ರಶೇಖರ್​ ಅವರು ಬೆಂಬಲ ವಾಪಸ್​ ಪಡೆದ ಕಾರಣ ಅಧಿಕಾರ ಕಳೆದುಕೊಂಡ ಮುಲಾಯಂ ಸಿಂಗ್​ ಅವರು ತಮ್ಮದೇ ಹೊಸ ಸಮಾಜವಾದಿ ಪಕ್ಷ ಘೋಷಿಸಿದರು.

1993 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ರಾಜಕೀಯ ಮಾಂತ್ರಿಕ ಮುಲಾಯಂ ಸಿಂಗ್​, ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷದೊಂದಿಗೆ ಸೇರಿಕೊಂಡು ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ನೀಡಿದರು. ಹಿಂದೂ ಮತ್ತು ಮುಸ್ಲಿಂ ಮತಗಳಿಂದ ಯಾದವ್ ಎರಡನೇ ಬಾರಿಗೆ ಸಿಎಂ ಆದರು.

ಬಳಿಕ ಬಿಎಸ್‌ಪಿ ಬೆಂಬಲದೊಂದಿಗೇ ಮೂರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು. ಎಚ್​ಡಿ ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿಯೂ ಕೆಲಸ ಮಾಡಿದ್ದಾರೆ.

ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡರ ಜೊತೆ ಮುಲಾಯಂ ಸಿಂಗ್​ ಯಾದವ್​

ಬಳಿಕ ಪುತ್ರ ಅಖಿಲೇಶ್​ ಯಾದವ್​ ಮುನ್ನೆಲೆಗೆ ಬಂದು ಕೌಟುಂಬಿಕ ಕಲಹ ಉಂಟಾಯಿತು. 2012 ರಲ್ಲಿ ಯುವ ನಾಯಕ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಸಿಎಂ ಆದರು. ಈ ವೇಳೆ ಮುಲಾಯಂ ಅವರು ಸಹೋದರ ಶಿವಪಾಲ್ ಸಿಂಗ್ ಅವರನ್ನು ರಾಜಕೀಯದಲ್ಲಿ ಬೆಳೆಸಿದರು.

ಓದಿ: ಜೀವನದ ಅಂತಿಮ ಕುಸ್ತಿಯಲ್ಲಿ ಸೋತ ನೇತಾಜಿ.. ಮುಲಾಯಂ ಸಿಂಗ್​ ಇನ್ನಿಲ್ಲ...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.