ಪಿಲಿಭಿತ್(ಉತ್ತರ ಪ್ರದೇಶ): ಪಿಲಿಭಿತ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವರುಣ್ ಗಾಂಧಿ ಸ್ವತಃ ತಮ್ಮದೇ ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ವರುಣ್ ಟ್ವಿಟರ್ ಮೂಲಕ ನಿರಂತರವಾಗಿ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಇದೀಗ ಕಳೆದ 4 ವರ್ಷಗಳಿಂದ ಯುಪಿ ಪೊಲೀಸ್ ಇಲಾಖೆಗೆ ನೇಮಕಾತಿ ಆಗದಿರುವ ವಿಷಯವನ್ನು ಪ್ರಸ್ತಾಪಿಸಿ, ಉದ್ಯೋಗಾಕಾಂಕ್ಷಿಗಳ ಅಸಮಾಧಾನವನ್ನು ಸರ್ಕಾರದ ಮುಂದೆ ಇಡುವ ಕೆಲಸ ಮಾಡಿದ್ದಾರೆ.
ಈ ಬಗ್ಗೆ ವರುಣ್ ಶನಿವಾರ ಟ್ವೀಟ್ ಮಾಡಿದ್ದು, ಕಳೆದ 4 ವರ್ಷಗಳಿಂದ ಯುಪಿ ಪೊಲೀಸ್ ನೇಮಕಾತಿಗಾಗಿ ಕಾಯುತ್ತಿರುವ ಲಕ್ಷ ಲಕ್ಷ ಉದ್ಯೋಗಾಕಾಂಕ್ಷಿಗಳ ವಯಸ್ಸು ಮೀರುತ್ತಿದೆ. ಈ ಆಕಾಂಕ್ಷಿಗಳ ನೇಮಕಾತಿಯೂ ಆಗುತ್ತಿಲ್ಲ, ಇವರಿಗೆ ಯಾವುದೇ ಭರವಸೆಯೂ ಸಿಗುತ್ತಿಲ್ಲ. ವಿದ್ಯಾರ್ಥಿಗಳು ತಮ್ಮ ನೋವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ ಎಂದು ಬರೆದಿದ್ದಾರೆ. ಆದರೆ ಅವರ ಗೋಳನ್ನು ಯಾರೂ ಕೇಳುತ್ತಿಲ್ಲ. ಅಷ್ಟೇ ಅಲ್ಲದೆ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆಗೆ ರಸ್ತೆಗೆ ಬಂದರೆ ಅವರ ಮೇಲೆ ದಂಗೆಯ ಆರೋಪ ಹೊರಿಸಲಾಗುತ್ತಿದೆ ಎಂದು ವರುಣ್ ಗಾಂಧಿ ಆರೋಪಿಸಿದ್ದಾರೆ.
-
4 साल से यूपी पुलिस की भर्ती का इंतजार कर रहे लाखों छात्र ओवर-एज हो चुके। ना भर्ती मिली, ना कोई उम्मीद।
— Varun Gandhi (@varungandhi80) October 29, 2022 " class="align-text-top noRightClick twitterSection" data="
सोशल मीडिया पर वह लगातार अपनी आवाज उठा रहे हैं पर सुनवाई नहीं है। यही छात्र जब सड़क पर आएँगे तब उनपर ‘उपद्रवी’ होने का आरोप लगेगा।
क्या यह अन्याय नहीं है?#UP_POLICE_VACANCY
">4 साल से यूपी पुलिस की भर्ती का इंतजार कर रहे लाखों छात्र ओवर-एज हो चुके। ना भर्ती मिली, ना कोई उम्मीद।
— Varun Gandhi (@varungandhi80) October 29, 2022
सोशल मीडिया पर वह लगातार अपनी आवाज उठा रहे हैं पर सुनवाई नहीं है। यही छात्र जब सड़क पर आएँगे तब उनपर ‘उपद्रवी’ होने का आरोप लगेगा।
क्या यह अन्याय नहीं है?#UP_POLICE_VACANCY4 साल से यूपी पुलिस की भर्ती का इंतजार कर रहे लाखों छात्र ओवर-एज हो चुके। ना भर्ती मिली, ना कोई उम्मीद।
— Varun Gandhi (@varungandhi80) October 29, 2022
सोशल मीडिया पर वह लगातार अपनी आवाज उठा रहे हैं पर सुनवाई नहीं है। यही छात्र जब सड़क पर आएँगे तब उनपर ‘उपद्रवी’ होने का आरोप लगेगा।
क्या यह अन्याय नहीं है?#UP_POLICE_VACANCY
ಸಂಸದ ವರುಣ್ ಗಾಂಧಿ ಭಾರತೀಯ ಸೇನೆ ಸೇರಿದಂತೆ ಇತರ ಹಲವು ಇಲಾಖೆಗಳಲ್ಲಿನ ನೇಮಕಾತಿ ವಿಷಯವನ್ನು ಹಲವಾರು ವರ್ಷಗಳಿಂದ ಎತ್ತುತ್ತ ಬಂದಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಹಲವು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಅಂಕಿ-ಅಂಶಗಳನ್ನು ಟ್ವಿಟರ್ ಮೂಲಕ ಜನರ ಮುಂದಿಡುತ್ತಿದ್ದಾರೆ. ಈ ಹಿಂದೆ ನಿರುದ್ಯೋಗದ ಸಂಕಷ್ಟ ಎದುರಿಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಟ್ವಿಟರ್ ಮೂಲಕ ಬೆಂಬಲ ನೀಡಿದ್ದರು.
ಇದನ್ನೂ ಓದಿ: 8 ವರ್ಷದಲ್ಲಿ 22 ಕೋಟಿ ಯುವಕರಿಂದ ಅರ್ಜಿ.. ದೇಶದಲ್ಲಿನ ನಿರುದ್ಯೋಗ ತೆರೆದಿಟ್ಟ ವರುಣ್ ಗಾಂಧಿ!