ETV Bharat / bharat

ಐತಿಹಾಸಿಕ ಥಾಮಸ್ ಕಪ್ ಗೆದ್ದ ಬ್ಯಾಡ್ಮಿಂಟನ್ ಚಾಂಪಿಯನ್​ಗಳೊಂದಿಗೆ ಮೋದಿ ಸಂವಾದ - ಪ್ರಧಾನಿ ನರೇಂದ್ರ ಮೋದಿ

ಇಂದು ಪ್ರಧಾನಿ ನರೇಂದ್ರ ಮೋದಿ ಭಾರರತದ ಬ್ಯಾಡ್ಮಿಂಟನ್ ಚಾಂಪಿಯನ್​ಗಳೊಂದಿಗೆ ಸಂವಾದ ನಡೆಸಿ, ಥಾಮಸ್ ಕಪ್ ಮತ್ತು ಉಬರ್ ಕಪ್‌ನ ಅನುಭವಗಳನ್ನು ಹಂಚಿಕೊಂಡರು..

ಬ್ಯಾಡ್ಮಿಂಟನ್ ಚಾಂಪಿಯನ್​ಗಳೊಂದಿಗೆ ಮೋದಿ ಸಂವಾದ

author img

By

Published : May 22, 2022, 1:05 PM IST

ನವದೆಹಲಿ : ಮೇ 15ರಂದು ಐತಿಹಾಸಿಕ ಪ್ರಸಿದ್ಧ 'ಥಾಮಸ್ ಕಪ್' ಗೆಲ್ಲುವ ಮೂಲಕ ಭಾರತ ಹೊಸದೊಂದು ಇತಿಹಾಸ ನಿರ್ಮಿಸಿತ್ತು. ಈ ಹಿನ್ನೆಲೆ ಕ್ರೀಡಾಪಟುಗಳನ್ನು ಮತ್ತಷ್ಟು ಉತ್ತೇಜಿಸುವ ಸಲುವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಬ್ಯಾಡ್ಮಿಂಟನ್ ಚಾಂಪಿಯನ್​ಗಳೊಂದಿಗೆ ಸಂವಾದ ನಡೆಸಿ, ಥಾಮಸ್ ಕಪ್ ಮತ್ತು ಉಬರ್ ಕಪ್‌ನ ಅನುಭವಗಳನ್ನು ಹಂಚಿಕೊಂಡರು.

ಬ್ಯಾಂಕಾಕ್‌ನಲ್ಲಿ ನಡೆದ ಥಾಮಸ್ ಮತ್ತು ಉಬರ್ ಕಪ್‌ನ ಫೈನಲ್‌ನಲ್ಲಿ ಇಂಡೋನೇಷ್ಯಾವನ್ನು 3-0 ಗೋಲುಗಳಿಂದ ಸೋಲಿಸಿ ಇತಿಹಾಸ ಬರೆದ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡದ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆ ಲಕ್ಷ್ಯಸೇನ್, ಕಿಡಂಬಿ ಶ್ರೀಕಾಂತ್ ಮತ್ತು ವಿಶ್ವದ 8ನೇ ಶ್ರೇಯಾಂಕದ ಡಬಲ್ಸ್ ಜೋಡಿಯಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಸ್ಪೂರ್ತಿದಾಯಕ ಪ್ರಯತ್ನದೊಂದಿಗೆ ಎದುರಾಳಿಯ ವಿರುದ್ಧ ಪ್ರಬಲ ಪ್ರದರ್ಶನ ನೀಡಿದರು.

  • #WATCH "I congratulate the whole team on behalf of the nation. This is not a small feat," says PM Narendra Modi during his interaction with badminton champions of the Thomas Cup and Uber Cup

    (Source: DD) pic.twitter.com/dlCv6jYrzm

    — ANI (@ANI) May 22, 2022 " class="align-text-top noRightClick twitterSection" data=" ">

ಅಷ್ಟು ದೊಡ್ಡ ವೇದಿಕೆಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವಾಗ ನಿಮ್ಮ ಮನಸ್ಥಿತಿ ಹೇಗಿತ್ತು? ಎಂದು ಪ್ರಧಾನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀಕಾಂತ್, "ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ, ಯಾವ ರೀತಿ ಆಟವಾಡಬೇಕು ಎಂಬುದರ ಕುರಿತು ನಾವು ನಮ್ಮೊಳಗೆ ಸಣ್ಣ ಚರ್ಚೆಗಳನ್ನು ನಡೆಸುತ್ತಿದ್ದೆವು. ಎಲ್ಲರೂ ಒಗ್ಗಟ್ಟಿನಿಂದ ಆಟವಾಡಿ ಗೆಲುವು ಸಾಧಿಸಬೇಕು ಎಂಬುದೇ ನಮ್ಮ ಗುರಿಯಾಗಿತ್ತು. ತಂಡದಲ್ಲಿ ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರಿಂದ ನಾಯಕನಾಗಿ ನಾನು ಹೆಚ್ಚು ಮಾಡಬೇಕಾಗಿಲ್ಲ" ಎಂದರು.

"ಟೀಂ ಇಂಡಿಯಾವನ್ನು ಫೈನಲ್‌ಗೆ ಕೊಂಡೊಯ್ಯುವುದು ನನಗೆ ಬಹಳ ವಿಶೇಷವಾಗಿತ್ತು. ಕೊನೆಯ ನಿರ್ಣಾಯಕ ಆಟವನ್ನು ನಾನೇ ಆಡಬೇಕಾಯಿತು. ಭಾರತವನ್ನು ಪ್ರತಿನಿಧಿಸಲು ನನಗೆ ಸಿಕ್ಕ ದೊಡ್ಡ ಅವಕಾಶವಾಗಿದ್ದರಿಂದ ಅತ್ಯುತ್ತಮ ಪ್ರದರ್ಶನ ನೀಡಿದೆ' ಎಂದು ಕಿಡಂಬಿ ಶ್ರೀಕಾಂತ್ ಹೇಳಿದರು.

ಇದೇ ವೇಳೆ 73 ವರ್ಷಗಳ ನಂತರ ಥಾಮಸ್ ಕಪ್ ಅನ್ನು ಮರಳಿ ಭಾರತಕ್ಕೆ ತಂದಿದ್ದಕ್ಕಾಗಿ ಪ್ರಧಾನಿ ಮೋದಿಯವರು ದೇಶದ ಪರವಾಗಿ ಟೀಮ್ ಇಂಡಿಯಾವನ್ನು ಅಭಿನಂದಿಸಿದರು. ಇದಕ್ಕೂ ಮೊದಲು ಮೇ 15ರಂದು, ಥಾಮಸ್ ಕಪ್‌ನ ಫೈನಲ್‌ನಲ್ಲಿ ಭಾರತ ಗೆಲುವು ಸಾಧಿಸಿದ ತಕ್ಷಣ ಭಾರತ ತಂಡದೊಂದಿಗೆ ಪ್ರಧಾನಿ ದೂರವಾಣಿ ಸಂಭಾಷಣೆ ನಡೆಸಿದ್ದರು.

ಇದನ್ನೂ ಓದಿ: ಥಾಮಸ್ ಕಪ್ ಚಾಂಪಿಯನ್ಸ್​ಗೆ ಪ್ರಧಾನಿ ಫೋನ್​ ಕಾಲ್​.. ಕ್ರೀಡಾ ಸಚಿವಾಲಯದಿಂದ ₹ 1 ಕೋಟಿ ಬಹುಮಾನ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.