ರಾಂಬನ್, ಜಮ್ಮು ಕಾಶ್ಮೀರ : ಕಂದಕದೊಳಗೆ ವಾಹನ ಉರುಳಿ ಐದು ಮಂದಿ ಮೃತಪಟ್ಟಿರುವ ಘಟನೆ ಜಮ್ಮು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಇನ್ನೂ ಐದು ಮಂದಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಂಬನ್ನ ರಾಜ್ಯ ಹೆದ್ದಾರಿ 44ರಲ್ಲಿ ಪ್ಯಾಸೆಂಜರ್ ವಾಹನವೊಂದು ಮತ್ತೊಂದು ಪ್ಯಾಸೆಂಜರ್ ವಾಹನಕ್ಕೆ ಡಿಕ್ಕಿಯಾಗಿ, ಆಳ ಕಂದರಕ್ಕೆ ಬಿದ್ದು ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
Pained by the loss of lives due to an accident in Ramban, Jammu and Kashmir. Condolences to those who lost their loved ones. I pray that the injured recover soon: PM @narendramodi
— PMO India (@PMOIndia) July 2, 2021 " class="align-text-top noRightClick twitterSection" data="
">Pained by the loss of lives due to an accident in Ramban, Jammu and Kashmir. Condolences to those who lost their loved ones. I pray that the injured recover soon: PM @narendramodi
— PMO India (@PMOIndia) July 2, 2021Pained by the loss of lives due to an accident in Ramban, Jammu and Kashmir. Condolences to those who lost their loved ones. I pray that the injured recover soon: PM @narendramodi
— PMO India (@PMOIndia) July 2, 2021
ಘಟನೆಯ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಗಳ ಕಚೇರಿ ದುರಂತದಲ್ಲಿ ಮೃತಪಟ್ಟರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸಿದ್ದಾರೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: ಮಾನಹಾನಿಕಾರಕ ವರದಿ ಪ್ರಕಟಿಸದಂತೆ ತಡೆಯಾಜ್ಞೆ ತರಲು ಕಾರಣ ಬಹಿರಂಗಪಡಿಸಿದ ಡಿವಿಎಸ್