ETV Bharat / bharat

ಫಾರ್ಮಸಿ ಶಿಕ್ಷಣದ 6 ಸಂಸ್ಥೆಗಳಿಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಥಾನಮಾನ.. ತಿದ್ದುಪಡಿ ಮಸೂದೆಗೆ ಸಂಸತ್ತು ಅಂಗೀಕಾರ - ತಿದ್ದುಪಡಿ ಮಸೂದೆಗೆ ಸಂಸತ್ತು ಅಂಗೀಕಾರ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್(ತಿದ್ದುಪಡಿ) ಮಸೂದೆ 2021 ಅನ್ನು ರಾಜ್ಯಸಭೆಯಲ್ಲಿ ಧ್ವನಿ ಮತದೊಂದಿಗೆ ಅಂಗೀಕರಿಸಲಾಯಿತು. ಡಿಸೆಂಬರ್ 6 ರಂದು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗಿತ್ತು.

pharma
ಫಾರ್ಮಸಿ ಶಿಕ್ಷಣ
author img

By

Published : Dec 9, 2021, 8:45 PM IST

ನವದೆಹಲಿ: ಫಾರ್ಮಸಿ ಶಿಕ್ಷಣ ಮತ್ತು ಸಂಶೋಧನೆಯ 6 ಸಂಸ್ಥೆಗಳಿಗೆ ರಾಷ್ಟ್ರೀಯ ಸ್ಥಾನಮಾನ ನೀಡುವ ಮತ್ತು ಅವುಗಳಿಗೆ ಸಲಹಾ ಮಂಡಳಿಯನ್ನು ಸ್ಥಾಪಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಗುರುವಾರ ಅಂಗೀಕರಿಸಲಾಗಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್(ತಿದ್ದುಪಡಿ) ಮಸೂದೆ 2021 ಅನ್ನು ರಾಜ್ಯಸಭೆಯಲ್ಲಿ ಧ್ವನಿ ಮತದೊಂದಿಗೆ ಅಂಗೀಕರಿಸಲಾಯಿತು. ಡಿಸೆಂಬರ್ 6 ರಂದು ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗಿತ್ತು.

ಫಾರ್ಮಸಿ ಶಿಕ್ಷಣ ಮತ್ತು ಸಂಶೋಧನೆಯ 6 ಸಂಸ್ಥೆಗಳಿಗೆ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಥಾನಮಾನ ಮತ್ತು ಹೊಸ ಕೋರ್ಸ್‌ಗಳ ಪ್ರಾರಂಭ ಮತ್ತು ಆಯಾ ಸಂಸ್ಥೆಗಳಿಗೆ ಸಲಹಾ ಮಂಡಳಿಯನ್ನು ರಚನೆ ಮಾಡುವುದು ಇದರ ಉದ್ದೇಶವಾಗಿದೆ.

ಮಸೂದೆಯ ಮೇಲೆ ನಡೆದ ಚರ್ಚೆಯ ವೇಳೆ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, 6 ಎನ್ಐಪಿಇಆರ್‌ಗಳನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳಾಗಿ ಬಡ್ತಿ ಮತ್ತು ಪದವಿಪೂರ್ವ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ಪರಿಚಯಿಸುವ 4 ತಿದ್ದುಪಡಿಗಳೊಂದಿಗೆ ಮಸೂದೆಯನ್ನು ಮಂಡಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್​ ಪತನ: ತನಿಖೆ ನೇತೃತ್ವ ವಹಿಸಿಕೊಂಡ ಏರ್​​​ ಮಾರ್ಷಲ್​​ ಮನ್ವಿಂದರ್​​ ಸಿಂಗ್​ ಬಗ್ಗೆ ನಿಮಗೆಷ್ಟು ಗೊತ್ತು!?

ಪಂಜಾಬ್​ನ ಮೊಹಾಲಿ NIPERಗೆ ರಾಷ್ಟ್ರೀಯ ಸಂಸ್ಥೆಯ ಅರ್ಹತೆ ನೀಡಲಾಗಿದೆ. ಇದರ ನಂತರ, ಇನ್ನೂ 6 ಎನ್ಐಪಿಇಆರ್‌ಗಳನ್ನು ಸ್ಥಾಪಿಸಲಾಯಿತು. ಅವು ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪಡೆಯುವ ಅರ್ಹತೆ ಹೊಂದಿವೆಯೇ ಇಲ್ಲವೇ ಎಂಬುದರ ಬಗ್ಗೆ ಸ್ಪಷ್ಟೀಕರಣವಿಲ್ಲ. ಇದನ್ನು ತಿಳಿದುಕೊಳ್ಳಲು ಮತ್ತು ಆ ಸಂಸ್ಥೆಗಳಿಗೆ ರಾಷ್ಟ್ರೀಯ ಪ್ರಾಮುಖ್ಯತೆ ನೀಡುವುದು ತಿದ್ದುಪಡಿ ಮಸೂದೆಯ ಧ್ಯೇಯವಾಗಿದೆ ಎಂದು ಮಾಂಡವೀಯ ತಿಳಿಸಿದರು.

ಅಹಮದಾಬಾದ್, ಗುವಾಹಟಿ, ಹಾಜಿಪುರ, ಹೈದರಾಬಾದ್, ಕೋಲ್ಕತ್ತಾ ಮತ್ತು ರಾಯ್​ಬರೇಲಿಯಲ್ಲಿನ ಸಂಸ್ಥೆಗಳನ್ನು ತಿದ್ದುಪಡಿಯ ಮೂಲಕ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳಾಗಿ ಘೋಷಿಸಲಾಗುತ್ತಿದೆ. ಅಲ್ಲದೇ, ಪ್ರತಿ ಸಂಸ್ಥೆಯ ವ್ಯವಹಾರಗಳನ್ನು ನಿರ್ವಹಿಸುತ್ತಿರುವ ಆಡಳಿತ ಮಂಡಳಿಯ ಸದಸ್ಯತ್ವವನ್ನು 23 ರಿಂದ 12 ಕ್ಕೆ ಇಳಿಸಲು ತಿದ್ದುಪಡಿ ಮಸೂದೆ ಪ್ರಸ್ತಾಪಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.