ETV Bharat / bharat

ಟೀನಾ ದಾಬಿಗೆ ಆರ್ಶೀವದಿಸಿದ ಪಾಕಿಸ್ತಾನಿ ಹಿಂದೂ ವಲಸಿಗರು! - ಪಾಕಿಸ್ತಾನಿ ವಲಸಿಗ ಹಿಂದೂ

ಡಿಸಿ ಟೀನಾ ದಾಬಿ ಅವರು ಇಂದು ದಾಬಿ ಮುಳಸಾಗರ ಗ್ರಾಮಕ್ಕೆ ತೆರಳಿ ಪಾಕ್ ನಿರಾಶ್ರಿತರನ್ನು ಭೇಟಿ ಮಾಡಿ ನಿವೇಶನ ನೀಡುವ ಕುರಿತು ಚರ್ಚಿಸಿದ್ದಾರೆ.

ಡಿಸಿ ಟೀನಾ ದಾಬಿ  ಅವರಿಗೆ ಹೂವಿನ ಹಾರ ಹಾಕಿದ ಜನರು

author img

By

Published : May 25, 2023, 7:39 PM IST

ಡಿಸಿ ಟೀನಾ ದಾಬಿ ಅವರು ಮಾತನಾಡಿದರು

ರಾಜಸ್ಥಾನ: ಕಳೆದ ಕೆಲವು ದಿನಗಳಿಂದ ಜೈಸಲ್ಮೇರ್‌ನಲ್ಲಿ ಪಾಕಿಸ್ತಾನಿ ವಲಸಿಗರ ಮನೆಗಳನ್ನು ಧ್ವಂಸಗೊಳಿಸಿದ ಘಟನೆ ವಿವಾದಕ್ಕೆ ತಿರುಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಟೀಕೆಗೆ ಗುರಿಯಾದ ಜೈಸಲ್ಮೇರ್ ಕಲೆಕ್ಟರ್ ಟೀನಾ ದಾಬಿ ಬುಧವಾರ ಸಂಜೆ ಈ ಸ್ಥಳಾಂತರಗೊಂಡ ಜನರನ್ನು ಭೇಟಿಯಾದರು.

ಜಿಲ್ಲಾಧಿಕಾರಿ ದಾಬಿ ಮುಳಸಾಗರ ಗ್ರಾಮಕ್ಕೆ ತೆರಳಿ ಪಾಕ್ ನಿರಾಶ್ರಿತರನ್ನು ಭೇಟಿ ಮಾಡಿ ನಿವೇಶನ ನೀಡುವ ಕುರಿತು ಚರ್ಚಿಸಿದರು. ಅಷ್ಟರಲ್ಲಿ ಅವರ ಮಧ್ಯದಲ್ಲಿದ್ದ ಜಿಲ್ಲಾಧಿಕಾರಿಯನ್ನು ನೋಡಿ ಪಾಕ್ ವಲಸಿಗರ ಮುಖ ಅರಳಿತು. ಸ್ಥಳಕ್ಕಾಗಮಿಸಿದ ಎಲ್ಲ ಕುಟುಂಬಗಳು ಮೈದಾನದಲ್ಲಿ ಕೂತು ಜಿಲ್ಲಾಧಿಕಾರಿಯ ಯೋಗಕ್ಷೇಮ ಕೇಳಿ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಟೀನಾ ದಾಬಿಗೆ ಹೂವಿನ ಹಾರ ಹಾಕಿ ಆಶೀರ್ವಾದ ಮಾಡಿದರು.

ನಿರಾಶ್ರಿತ ಕುಟುಂಬಗಳಿಗೆ 40 ಬಿಘಾ ಭೂಮಿ: ಜೈಸಲ್ಮೇರ್ ಯುಐಟಿಯು ಪಾಕಿಸ್ತಾನದಿಂದ ನಿರಾಶ್ರಿತ ಕುಟುಂಬಗಳಿಗೆ ಆಶ್ರಯ ನೀಡುವ ಉದ್ದೇಶದಿಂದ 40 ಬಿಘಾ ಭೂಮಿಯನ್ನು ಒದಗಿಸಿದೆ. ಈ ಸಂತಸದ ಸುದ್ದಿ ತಿಳಿದ ನಂತರ ಒಂದು ಕಡೆ ನಿರಾಶ್ರಿತ ಕುಟುಂಬಗಳು ಸಂತಸಗೊಂಡವು. ಮತ್ತೊಂದೆಡೆ ಕಲೆಕ್ಟರ್ ಟೀನಾ ದಾಬಿಗೆ ಈ ಉಡುಗೊರೆಗಾಗಿ ಪಾಕಿಸ್ತಾನದಿಂದ ಬಂದ ವೃದ್ಧೆಯೊಬ್ಬರು ಸುಗ್ನಿ ದೇವಿ ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿದರು.

ಇದನ್ನೂ ಓದಿ: ಅಪಘಾತದಲ್ಲಿ ಬಲಗೈ ಕಳೆದುಕೊಂಡಿದ್ದ ಯುವತಿ.. UPSC ಪರೀಕ್ಷೆಯಲ್ಲಿ 760ನೇ ರ‍್ಯಾಂಕ್‌ ಪಡೆದ ಛಲಗಾತಿ!

ನಿರಾಶ್ರಿತರು ನೆಮ್ಮದಿಯ ಜೀವನ ನಡೆಸಬಹುದು: ಸುಗ್ನಿ ದೇವಿಯು ಟೀನಾ ದಾಬಿಗೆ ತಾಯಿಯಾಗುವಂತೆ ಆಶೀರ್ವದಿಸಿದಳು. ಈ ಕುರಿತು ಜಿಲ್ಲಾಧಿಕಾರಿ ದಾಬಿ ಮಾತನಾಡಿ, ಜಿಲ್ಲಾಡಳಿತ ನಿಮಗೆ ನೀಡಿದ ಭರವಸೆಯನ್ನು ಏಳು ದಿನದಲ್ಲಿ ಈಡೇರಿಸಿದೆ. ಇದರೊಂದಿಗೆ ಈಗ ಸರ್ಕಾರದ ನೀತಿಯ ಪ್ರಕಾರ ಪಾಕಿಸ್ತಾನದ ನಿರಾಶ್ರಿತ ಜನರು ಆರಾಮವಾಗಿ ಬದುಕಬಹುದು ಎಂದು ಹೇಳಿದರು. ಜೈಸಲ್ಮೇರ್‌ನ ಅಮರ್ ಸಾಗರ್ ಗ್ರಾಮದಿಂದ ಪಾಕ್ ನಿರಾಶ್ರಿತರನ್ನು ಅತಿಕ್ರಮಣ ಆರೋಪದ ಮೇಲೆ ಹೊರಹಾಕಲಾಗಿತ್ತು. ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ಆರೋಪಿಸಿ ಪಾಕಿಸ್ತಾನದಿಂದ ನಿರಾಶ್ರಿತ ಹಿಂದೂಗಳು ವಲಸೆ ಬಂದಿದ್ದರು. ತದನಂತರ ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲಾಧಿಕಾರಿ ಟೀನಾ ದಾಬಿ ವಲಸಿಗರ 150 ಮನೆಗಳನ್ನು ನೆಲಸಮಗೊಳಿಸಲು ಆದೇಶಿಸಿ ಟೀಕೆಗೆ ಒಳಗಾಗಿದ್ದರು.

ಇದನ್ನೂ ಓದಿ: ಪಾಕಿಸ್ತಾನಿ ಸೇನೆ ಕೈಗೆ ಸಿಕ್ಕಿಬಿದ್ದ ಭದೋಹಿ ವ್ಯಕ್ತಿ: ತಾಯ್ನಾಡಿಗೆ ಕರೆ ತರುವಂತೆ ಸಿಎಂ ಯೋಗಿಗೆ ಕುಟುಂಬದ ಮನವಿ

ಸ್ಥಳಾವಕಾಶ ನೀಡುವಂತೆ ಒತ್ತಾಯಿಸಿದ್ದ ವಲಸಿಗರು: ಡಿಸಿ ಟೀನಾ ಆದೇಶದ ಮೇರೆಗೆ ಅಮನ್‌ ಸಾಗರ್‌ ಪ್ರದೇಶದಲ್ಲಿನ ಹಿಂದೂ ವಲಸಿಗರು ವಾಸವಿದ್ದ 50 ಮನೆಗಳನ್ನು ಬುಲ್ಡೋಜರ್‌ನಿಂದ ನೆಲಸಮಗೊಳಿಸಲಾಗಿತ್ತು. ಇದನ್ನು ವಿರೋಧಿಸಿರುವ ಪಾಕಿಸ್ತಾನಿ ವಲಸಿಗ ಹಿಂದೂಗಳು ಟೀನಾ ಕಚೇರಿ ಮುಂದೆ ಗುಡಿಸಲುಗಳನ್ನು ಹಾಕಿ ಪ್ರತಿಭಟನೆ ನಡೆಸಿದ್ದರು. ನಮಗೆ ಮರಳಿ ಅದೇ ಜಾಗದಲ್ಲಿ ಸ್ಥಳಾವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.