ETV Bharat / bharat

ಗರ್ಭ ಧರಿಸದೇ ನಿತ್ಯ 4 ಲೀಟರ್​ ಹಾಲು ಕೊಡುತ್ತಿರುವ ಹಸು! ವಿಡಿಯೋ - ಕರು ಹಾಕದೇ ಹಾಲು ನೋಡುವ ಮೂಲಕ ಅಚ್ಚರಿ

ಉತ್ತರ ಪ್ರದೇಶದಲ್ಲಿ ಹಸುವೊಂದು ಕರು ಹಾಕದೇ ಹಾಲು ಕೊಡುತ್ತಿದ್ದು ಜನತೆ ಪವಾಡವೆಂದೇ ಭಾವಿಸಿ ಪೂಜೆ ಸಲ್ಲಿಸುತ್ತಿದ್ದಾರೆ.

one-year-old-calf-giving-milk-in-gorakhpur
ನಿತ್ಯ 4 ಲೀಟರ್​ ಹಾಲು ಕೊಡುತ್ತಿರುವ ಒಂದು ವರ್ಷದ ಹಸು: ವಿಡಿಯೋ
author img

By

Published : Dec 6, 2022, 10:00 PM IST

ಗೋರಖ್​ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ಹಸುವೊಂದು ಕರು ಹಾಕದೇ ಹಾಲು ಕೊಡುವ ಮೂಲಕ ಅಚ್ಚರಿ ಮೂಡಿಸಿದೆ. ನಿತ್ಯವೂ ನಾಲ್ಕು ಲೀಟರ್​ವರೆಗೆ ಹಾಲು ಕೊಡುತ್ತಿದ್ದು, ಇದೊಂದು ಪವಾಡವೆಂದೇ ತಿಳಿದು ಪೂಜಿಸಲಾಗುತ್ತಿದೆ.

ಇಲ್ಲಿನ ಝರ್ವಾ ನಿವಾಸಿ ಗಿರಿ ನಿಶಾದ್ ಎಂಬುವವರು ಸುಮಾರು 15 ದಿನಗಳ ಹಿಂದೆ ಈ ಹಸುವನ್ನು ಖರೀದಿಸಿ ತಮ್ಮ ಮನೆಗೆ ತಂದಿದ್ದರು. 5-6 ದಿನಗಳಿಂದಲೂ ಇದು ಹಾಲು ಕೊಡಲಾರಂಭಿಸಿದೆ. ಆರಂಭದಲ್ಲಿ ಹಾಲು ಕಡಿಮೆ ಕೊಡುತ್ತಿತ್ತು. ಈಗ ನಾಲ್ಕು ಲೀಟರ್‌ಗೆ ಏರಿಕೆಯಾಗಿದೆ. ಹೀಗಾಗಿಯೇ ಹಸುವನ್ನು ನೋಡಲು ಗ್ರಾಮಸ್ಥರ ದಂಡೇ ಬರುತ್ತಿದೆ.

ನಾವು ಇದನ್ನು ಪವಾಡವೆಂದೇ ಭಾವಿಸಿದ್ದೇವೆ. ಅಲ್ಲದೇ, ಕುಟುಂಬಸ್ಥರು ಹಾಗೂ ಇತರ ಗ್ರಾಮಸ್ಥರು ಸಹ ಹಸುವಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಕೆಲವರು ತಾವೇ ಸ್ವತಃ ಹಾಲು ಕರೆದು ತಮ್ಮ ಅನುಮಾನ ಪರಿಹರಿಸಿಕೊಳ್ಳುತ್ತಿದ್ದಾರೆ. ಯಾರಿಗೂ ಈ ಆಕಳು ವಿರೋಧ ವ್ಯಕ್ತಪಡಿಸುತ್ತಿಲ್ಲ ಎನ್ನುತ್ತಾರೆ ಗಿರಿ ನಿಶಾದ್.

ಪಶುವೈದ್ಯ ಡಾ.ಯೋಗೇಶ್ ಸಿಂಗ್ ಮಾತನಾಡಿ, ಗರ್ಭ ಧರಿಸದೆ ಹಾಲು ನೀಡುವುದು ಹಾರ್ಮೋನ್ ಬದಲಾವಣೆಗೆ ಕಾರಣ. ಈ ಹಿಂದೆ ಹಸುವಿಗೆ ಚಿಕಿತ್ಸೆ ನೀಡಿರುವ ಸಂದರ್ಭದಲ್ಲಿ ಬಳಸಿದ ಔಷಧಿಗಳ ಪರಿಣಾಮ ಬೀರಬಹುದು. ಈ ಬಗ್ಗೆ ವೈದ್ಯಕೀಯ ಪರೀಕ್ಷೆ ಅಗತ್ಯ. ಜೊತೆಗೆ ಹಸುವಿನ ಹಾಲು ಜನರಿಗೆ ಪ್ರಯೋಜನಕಾರಿಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಲ್ಲಿದ್ದಲು ಗಣಿ ಕಚೇರಿ ಮುಂದೆ ಎತ್ತು ಮೂತ್ರ ಮಾಡಿದ್ದಕ್ಕೆ ರೈತನಿಗೆ ಬಿತ್ತು ದಂಡ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.