ETV Bharat / bharat

ಒಮಿಕ್ರಾನ್ ಸೋಂಕು ಬೇರೆ ರೂಪಾಂತರಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿದೆ: ಐಸಿಎಂಆರ್

author img

By

Published : Jan 27, 2022, 12:49 PM IST

ಒಮಿಕ್ರಾನ್ ಸೋಂಕು ಡೆಲ್ಟಾ ರೂಪಾಂತರ ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ. ಒಮ್ಮೆ ಒಮಿಕ್ರಾನ್ ಸೋಂಕು ತಗುಲಿದ ವ್ಯಕ್ತಿ ಮತ್ತೊಮ್ಮೆ ಸೋಂಕು ತಗುಲುವ ಪ್ರಮಾಣ ಕಡಿಮೆ ಇದೆ ಎಂದು ಐಸಿಎಂಆರ್​ ಅಧ್ಯಯನದಿಂದ ತಿಳಿದು ಬಂದಿದೆ.

Omicron infection can neutralise variants of concern: ICMR
ಒಮಿಕ್ರಾನ್ ಸೋಂಕು ಬೇರೆ ರೂಪಾಂತರಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿದೆ: ಐಸಿಎಂಆರ್

ನವದೆಹಲಿ: ಕೊರೊನಾ ಕುರಿತಾದ ಸಂಶೋಧನೆಗಳು ಇನ್ನೂ ನಡೆಯುತ್ತಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್​) ನಡೆಸಿದ ಸಂಶೋಧನೆಯೊಂದು ಒಮಿಕ್ರಾನ್ ಸೋಂಕು ಬೇರೆ ರೂಪಾಂತರಿಗಳನ್ನು ನಿಷ್ಕ್ರಿಯಗೊಳಿಸುತ್ತದೆ ಅಥವಾ ತಟಸ್ಥಗೊಳಿಸುತ್ತದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ.

ಒಮಿಕ್ರಾನ್ ಸೋಂಕಿಗೆ ಒಳಗಾದ ವ್ಯಕ್ತಿಗಳು ಪ್ರಭಾವಶಾಲಿ ರೋಗ ನಿರೋಧಕ ಶಕ್ತಿಯನ್ನು ಉತ್ಪಾದನೆ ಮಾಡಲಿದ್ದು, ಇದು ಕೋವಿಡ್​ ರೂಪಾಂತರಗಳಾದ ಬಿ.1, ಆಲ್ಫಾ, ಬೀಟಾ, ಡೆಲ್ಟಾ ಸೇರಿದಂತೆ ಉಳಿದ ರೂಪಾಂತರ ವೈರಸ್​ಗಳ ಪ್ರತಿಕಾಯಗಳ ವಿರುದ್ಧ ಹೋರಾಡುತ್ತದೆ ಎಂದು ಅಧ್ಯಯನದಲ್ಲಿ ಸ್ಪಷ್ಟವಾಗಿದೆ.

ಇಮ್ಯುನೊಗ್ಲೊಬ್ಯುಲಿನ್ (ಒಂದು ರೀತಿಯ ಪ್ರತಿಕಾಯ) ಮತ್ತು ಇತರ ಪ್ರತಿಕಾಯಗಳು ಒಮಿಕ್ರಾನ್ ರೂಪಾಂತರ ವೈರಸ್​ಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದ್ದು, ಡೆಲ್ಟಾ ರೂಪಾಂತರವನ್ನು ಪರಿಣಾಮಕಾರಿಯಾಗಿ ತಟಸ್ಥಗೊಳಿಸುತ್ತದೆ. ಒಮ್ಮೆ ಒಮಿಕ್ರಾನ್ ಸೋಂಕು ತಗುಲಿದ ವ್ಯಕ್ತಿ ಮತ್ತೊಮ್ಮೆ ಸೋಂಕು ತಗುಲುವ ಪ್ರಮಾಣ ಕಡಿಮೆ ಇದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಸುಮಾರು 39 ಒಮಿಕ್ರಾನ್ ಸೋಂಕಿತ ವ್ಯಕ್ತಿಗಳ ಮೇಲೆ ಅಧ್ಯಯನ ನಡೆಸಲಾಗಿತ್ತು. ಅದರಲ್ಲಿ 25 ಜನರು ಅಸ್ಟ್ರಾಜೆನೆಕಾ ಲಸಿಕೆಯನ್ನು ತೆಗೆದುಕೊಂಡಿದ್ದು, ಎಂಟು ಮಂದಿ ಫೈಜರ್ ಲಸಿಕೆಯನ್ನು ಎರಡು ಬಾರಿ ತೆಗೆದುಕೊಂಡಿದ್ದರು. ಆರು ಮಂದಿಗೆ ಲಸಿಕೆ ನೀಡಿರಲಿಲ್ಲ.

ಈ ಅಧ್ಯಯನದಿಂದ ಒಮಿಕ್ರಾನ್ ಬೇರೆ ರೂಪಾಂತರಿಗಳನ್ನು ತಟಸ್ಥಗೊಳಿಸುತ್ತದೆ ಎಂಬುದು ಗೊತ್ತಾಗಿದ್ದು, ಮುಂದಿನ ಸಂಶೋಧನೆಗಳಿಗೆ ಮಾರ್ಗದರ್ಶಿಯಾಗಲಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ನೀಡಲು ಭಾರತ ಬದ್ಧ: ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.