ETV Bharat / bharat

21 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಸಗಟು ಹಣದುಬ್ಬರ - fuel

ಆಹಾರ, ಇಂಧನ ಮತ್ತು ತಯಾರಿಕಾ ವಸ್ತುಗಳ ಬೆಲೆ ಕಡಿಮೆಯಾದ ಕಾರಣ ಸಗಟು ಹಣದುಬ್ಬರವು ನವೆಂಬರ್​ನಲ್ಲಿ 21 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

nov-wpi-inflation-hits-21-month-low-of-5-dot-85-pc
21 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಸಗಟು ಹಣದುಬ್ಬರ
author img

By

Published : Dec 14, 2022, 5:07 PM IST

ನವ ದೆಹಲಿ: ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಆಧಾರಿತ ಹಣದುಬ್ಬರವು 21 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ನವೆಂಬರ್‌ನಲ್ಲಿ ಶೇ.5.85ಕ್ಕೆ ಇಳಿದಿದೆ. ಮೇ ತಿಂಗಳಿನಿಂದ ನಿರಂತರವಾಗಿ ಕುಸಿತ ಕಾಣುತ್ತಿದ್ದು, ಅಕ್ಟೋಬರ್‌ನಲ್ಲಿ ಒಂದಂಕಿ ಎಂದರೆ ಶೇ.8.39ಕ್ಕೆ ಇಳಿಕೆಯಾಗಿತ್ತು.

ಆಹಾರ, ಇಂಧನ ಮತ್ತು ತಯಾರಿಕಾ ವಸ್ತುಗಳ ಬೆಲೆ ಕಡಿಮೆಯಾದ ಕಾರಣ ಸಗಟು ಹಣದುಬ್ಬರ ಇಳಿಕೆಯಾಗಿದೆ. ಕಳೆದ 2021ರ ಫೆಬ್ರವರಿಯಲ್ಲಿ ಶೇ.4.83ರಷ್ಟು ಅಂದರೆ, ಅತ್ಯಂತ ಕನಿಷ್ಟ ಮಟ್ಟದ ಹಣದುಬ್ಬರ ದಾಖಲಾಗಿತ್ತು.

ನವೆಂಬರ್​ನಲ್ಲಿ ಹಣದುಬ್ಬರ ಕುಸಿತಕ್ಕೆ ಆಹಾರ ಪದಾರ್ಥಗಳು, ಲೋಹಗಳು, ಜವಳಿ, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳು, ಕಾಗದ ಮತ್ತು ಕಾಗದದ ಉತ್ಪನ್ನಗಳ ಬೆಲೆಗಳ ಕುಸಿತ ಕಾರಣವಾಗಿದೆ. ಹಣದುಬ್ಬರವನ್ನು ಮತ್ತಷ್ಟು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತದೆ ಎಂದು ಲೋಕಸಭೆಯಲ್ಲಿಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅಕ್ಟೋಬರ್​ನಲ್ಲಿ ಆಹಾರ ಪದಾರ್ಥಗಳ ಹಣದುಬ್ಬರವು ಶೇ.8.33ರಷ್ಟಿತ್ತು. ನವೆಂಬರ್‌ನಲ್ಲಿ ಶೇ.1.07ಕ್ಕೆ ಕಡಿಮೆಯಾಗಿದೆ. ಅದೇ ರೀತಿಯಾಗಿ ತರಕಾರಿಗಳ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇ.17.61ರಷ್ಟು ಇತ್ತು. ಈಗ ನವೆಂಬರ್​ನಲ್ಲಿ ಮೈನಸ್​ 20.08ಕ್ಕೆ ಇಳಿಕೆಯಾಗಿದೆ.

ಇತ್ತೀಚಿಗೆ ಹಣ್ಣುಗಳು, ತರಕಾರಿ ಬೆಲೆಗಳು ಇಳಿಕೆಯಾಗಿವೆ. ಅದರಲ್ಲೂ ಟೊಮೆಟೊ ಮತ್ತು ಆಲೂಗಡ್ಡೆ ಬೆಲೆ ಸಾಕಷ್ಟು ಕುಸಿದಿದೆ. ಇತ್ತ ಗೋಧಿ, ಬೇಳೆ ಕಾಳುಗಳು ಮತ್ತು ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗಿದೆ.

ಇದನ್ನೂ ಓದಿ: ಪ್ರಸಕ್ತ ವರ್ಷ ಭಾರತದ ಜಿಡಿಪಿ ಬೆಳವಣಿಗೆ ದರ ಶೇ 7ರಷ್ಟಿರಲಿದೆ: ಎಡಿಬಿ ಅಂದಾಜು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.