ಗುರುಗ್ರಾಮ್(ಹರಿಯಾಣ) : ಗುರುಗ್ರಾಮ್‌ನ ಗುರುದ್ವಾರ ಸಿಂಗ್ ಸಭಾ ಸಮಿತಿ(Gurudwara Singh Sabha Committee of Gurugram) ಶುಕ್ರವಾರ ನಮಾಜ್ ಮಾಡಲು ಮುಸ್ಲಿಂ ಸಮುದಾಯಕ್ಕೆ ಬಾಗಿಲು ತೆರೆಯುವುದಾಗಿ ಘೋಷಿಸಿತ್ತು. ಬಳಿಕ ಒಂದು ದಿನದ ನಂತರ, ಮಿಲೇನಿಯಂ ನಗರದ ಯಾವುದೇ ಗುರುದ್ವಾರದಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸಿಲ್ಲ.
ಗುರುಪುರಬ್ ಆಚರಣೆ(ಗುರುನಾನಕ್ ಅವರ ಜನ್ಮ ದಿನ)ಯಿಂದಾಗಿ ಸಂಘರ್ಷವನ್ನು ತಪ್ಪಿಸಲು ಶುಕ್ರವಾರ ಪ್ರಾರ್ಥನೆ ಮಾಡಲು ನಿರಾಕರಿಸಿ, ಮುಂದಿನ ವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಮಿತಿ ತಿಳಿಸಿದೆ.
ಈ ವಿಷಯದ ಕುರಿತು ಮಾತನಾಡಿದ ಗುರುದ್ವಾರ ನಿರ್ವಹಣಾ ಸಮಿತಿಯ ವಕ್ತಾರ ದಯಾ ಸಿಂಗ್, "ಮುಸ್ಲಿಮರು ಸಮಸ್ಯೆ ಎದುರಿಸುತ್ತಿದ್ದರಿಂದ ನಮಾಜ್ ಮಾಡಲು ಅವಕಾಶ ನೀಡಿದ್ದೇವೆ. ಗುರುಪುರಬ್ ಕಾರಣ, ಮುಸ್ಲಿಮರು ಸ್ವತಃ ನಿರಾಕರಿಸಿದರು.
ಆದರೆ, ಘರ್ಷಣೆಯನ್ನು ತಪ್ಪಿಸಲು ನಮಾಜ್ ಮಾಡುವಂತೆ ತಿಳಿಸಿದ್ದು, ನಾವು ಮುಂದಿನ ವಾರ ಪ್ರಾರ್ಥನೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ನಾವು ಕನ್ವರ್ ಯಾತ್ರೆ ಮಾಡುವಾಗ ಸಾರ್ವಜನಿಕ ಅಥವಾ ತೆರೆದ ಜಾಗದಲ್ಲಿ ನಮಾಜ್ ಮಾಡುವುದರಿಂದ ತೊಂದರೆ ಏನು?. 1984ರ ಗಲಭೆಯಲ್ಲಿ, ಮುಸ್ಲಿಮರು ಸಾವಿರಾರು ಸಿಖ್ಖರ ಜೀವ ಉಳಿಸುವ ಮೂಲಕ ಸಹೋದರತ್ವದ ಸಂದೇಶವನ್ನು ನೀಡಿದ್ದರು ಎಂದು ಅವರು ಸ್ಮರಿಸಿದರು.
ನ.18ರಂದು ಗುರುಗ್ರಾಮ್‌ನ ಸದರ್ ಬಜಾರ್‌ನ ಗುರುದ್ವಾರ ಅಸೋಸಿಯೇಷನ್ ಸಾರ್ವಜನಿಕ ಮತ್ತು ತೆರೆದ ಸ್ಥಳಗಳಲ್ಲಿ ನಮಾಜ್ ಮಾಡುವ ಬಗ್ಗೆ ಆಕ್ಷೇಪಣೆಗಳ ನಂತರ ಶುಕ್ರವಾರದ ಪ್ರಾರ್ಥನೆಗೆ ತನ್ನ ಆವರಣವನ್ನು ನೀಡಲು ನಿರ್ಧರಿಸಿತ್ತು. ಗುರುಗ್ರಾಮ್ ಆಡಳಿತ 37 ಗೊತ್ತುಪಡಿಸಿದ ಸ್ಥಳಗಳಲ್ಲಿ 8 ಪ್ರದೇಶದಲ್ಲಿ ನಮಾಜ್ ಮಾಡಲು ಅನುಮತಿಯನ್ನು ಹಿಂಪಡೆದಿದೆ.
ಜಿಲ್ಲಾಡಳಿತದ ಅಧಿಕೃತ ಹೇಳಿಕೆಯ ಪ್ರಕಾರ, ಸ್ಥಳೀಯ ಜನರು ಮತ್ತು ನಿವಾಸಿ ಕಲ್ಯಾಣ ಸಂಘದ (ಆರ್‌ಡಬ್ಲ್ಯೂಎ) ಆಕ್ಷೇಪಣೆಯ ನಂತರ ಅನುಮತಿಯನ್ನು ರದ್ದುಗೊಳಿಸಲಾಗಿದೆ. ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಗುರುಗ್ರಾಮ್ ನಿವಾಸಿಗಳು ಸಾರ್ವಜನಿಕ ಮೈದಾನದಲ್ಲಿ ನಮಾಜ್ಗೆ ಅವಕಾಶ ನೀಡುವುದರ ವಿರುದ್ಧ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ದೇಶಾದ್ಯಂತ ‘ಕಿಸಾನ್ ವಿಜಯ್ ದಿವಸ್’ ಆಚರಿಸುತ್ತಿರುವ ಕಾಂಗ್ರೆಸ್