ಕಠ್ಮಂಡು: ಭಾರತ ಸೇರಿದಂತೆ ನೆರೆಯ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ತೀವ್ರ ಏರಿಕೆ ಹಿನ್ನೆಲೆ ನೇಪಾಳ ಸರ್ಕಾರ ಭಾರತದೊಂದಿಗಿನ 22 ಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದೆ.
ಸದ್ಯ ನೇಪಾಳ ಮತ್ತು ಭಾರತದ ನಡುವಿನ 13 ಗಡಿ ಭಾಗಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ದಕ್ಷಿಣ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ನೇಪಾಳ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ನಿತ್ಯ ನಾಲ್ಕು ಲಕ್ಷಗಳ ಗಡಿ ದಾಟುತ್ತಿದ್ದು, ನೇಪಾಳ ಮುನ್ನೆಚ್ಚರಿಕಾ ಕ್ರಮವಾಗಿ ಭಾರತದೊಂದಿಗಿನ ಗಡಿ ಬಂದ್ ಮಾಡಲು ತೀರ್ಮಾನಿಸಿದೆ.
ನೇಪಾಳದಲ್ಲಿ ಇದುವರೆಗೆ ಸುಮಾರು 323,187 ಕೋವಿಡ್ -19 ಪ್ರಕರಣಗಳು ಮತ್ತು 3,279 ಕೋವಿಡ್ ಸೋಂಕಿತರ ಸಾವುಗಳು ವರದಿಯಾಗಿವೆ.