ETV Bharat / bharat

ಜಮ್ಮುನಲ್ಲಿ ಅವಳಿ ಸ್ಫೋಟ ಪ್ರಕರಣ: ಘಟನಾ ಸ್ಥಳಕ್ಕೆ ಎನ್‌ಐಎ ತಂಡ ಭೇಟಿ - ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ

ಜಮ್ಮುವಿನ ನರ್ವಾಲ್ ಕೈಗಾರಿಕಾ ಪ್ರದೇಶದ ಎರಡು ಐಇಡಿ ಸ್ಫೋಟ ಪ್ರಕರಣದ ಕುರಿತ ತನಿಖೆಗಾಗಿ ಎನ್‌ಐಎ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

narwal-twin-blasts-nia-team-reaches-jammu-to-hold-investigation
ಜಮ್ಮುನಲ್ಲಿ ಅವಳಿ ಸ್ಫೋಟ ಪ್ರಕರಣ: ಘಟನಾ ಸ್ಥಳಕ್ಕೆ ಎನ್‌ಐಎ ತಂಡ ಭೇಟಿ
author img

By

Published : Jan 22, 2023, 5:37 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ನರ್ವಾಲ್‌ ಪ್ರದೇಶದಲ್ಲಿ ಶನಿವಾರ ನಡೆದ ಅವಳಿ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೈಗೆತ್ತಿಕೊಂಡಿದೆ. ಕೈಗಾರಿಕಾ ಪ್ರದೇಶದಲ್ಲಿ ಎರಡು ಸ್ಫೋಟಗಳು ಸಂಭವಿಸಿದ ಸ್ಥಳದಲ್ಲಿ ತನಿಖೆ ನಡೆಸಲು ಎನ್‌ಐಎ ಅಧಿಕಾರಿಗಳ ತಂಡವು ಭಾನುವಾರ ಜಮ್ಮುವಿಗೆ ತಲುಪಿದೆ.

ಶನಿವಾರ ಬೆಳಗ್ಗೆ ಜಮ್ಮುವಿನ ಕೈಗಾರಿಕಾ ಪ್ರದೇಶದಲ್ಲಿ ಅವಳಿ ಸ್ಫೋಟ ಸಂಭವಿಸಿ ಕನಿಷ್ಠ ಒಂಬತ್ತು ಜನರು ಗಾಯಗೊಂಡಿದ್ದಾರೆ. ಮೊದಲ ಸ್ಟೋಟದಲ್ಲಿ ಐವರು ಮತ್ತು ಎರಡನೇ ಸ್ಫೋಟದಲ್ಲಿ ನಾಲ್ವರು ಗಾಯಾಗೊಂಡಿದ್ದಾರೆ. ಎಲ್ಲ ಒಂಬತ್ತು ಜನ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ, ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ತನಿಖಾ ಸಂಸ್ಥೆಗಳ ಭೇಟಿ: ಗಣರಾಜ್ಯೋತ್ಸವ ಪೂರ್ವದಲ್ಲಿ ಈ ಸ್ಫೋಟಗಳು ಜರುಗಿರುವುದರಿಂದ ಆತಂಕಕ್ಕೆ ಕಾರಣವಾಗಿದೆ. ಈ ಅವಳು ಸ್ಫೋಟಗಳು ಕೇವಲ 50 ಮೀಟರ್​ ಅಂತರದಲ್ಲಿ ಸಂಭವಿಸಿವೆ. ಆದ್ದರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ, ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಹಾಗೂ ಭದ್ರತಾ ಪರಿಣಾಮ ವಿಶ್ಲೇಷಣೆ (ಎಸ್‌ಐಎ) ತಂಡದ ಅಧಿಕಾರಿಗಳು ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮತ್ತೊಂದೆಡೆ ಈ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡು ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಸ್ಥಳದಲ್ಲಿ ಶೋಧ ಕಾರ್ಯದ ಭಾಗವಾಗಿ ವಾಹನಗಳನ್ನೂ ತಪಾಸಣೆ ನಡೆಸಲಾಗುತ್ತಿದೆ.

ಸ್ಫೋಟದ ಮಾದರಿಗಳ ಸಂಗ್ರಹ: ಈ ಸ್ಫೋಟದ ಬಗ್ಗೆ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಖೇಶ್ ಸಿಂಗ್ ಮತ್ತು ಜಮ್ಮು ಡಿಐಜಿ ಶಕ್ತಿ ಪಾಠಕ್ ಸಹ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈ ಎರಡು ಸ್ಫೋಟಗಳ ಹಿನ್ನೆಲೆ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ತನಿಖೆಯ ಭಾಗವಾಗಿ ವಿಧಿವಿಜ್ಞಾನ ತಂಡವು ಸ್ಫೋಟದ ಪ್ರದೇಶದಿಂದ ಮಾದರಿಗಳನ್ನು ಸಂಗ್ರಹಿಸಿದೆ ಎಂದು ಡಿಐಜಿ ಶಕ್ತಿ ಪಾಠಕ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ನರ್ವಾಲ್ ಪ್ರದೇಶದಲ್ಲಿ ನಡೆದ ಸ್ಫೋಟಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಇಂದು ಬೆಳಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಫೋಟ ಮತ್ತು ತನಿಖೆಯ ಸ್ಥಿತಿ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಅವರಿಗೆ ವಿವರಿಸಿದ್ದಾರೆ. ಇದೇ ವೇಳೆ ಇಂತಹ ಕ್ರೂರ ಕೃತ್ಯಗಳು ಹತಾಶೆ ಹಾಗೂ ಹೇಡಿತನವನ್ನು ಎತ್ತಿ ತೋರಿಸುತ್ತವೆ. ತಪ್ಪಿತಸ್ಥರನ್ನು ತಕ್ಷಣ ಪತ್ತೆ ಕಠಿಣ ಹಚ್ಚಿ ಕ್ರಮಕೈಗೊಳ್ಳಬೇಕೆಂದು ಭದ್ರತಾ ಅಧಿಕಾರಿಗಳಿಗೆ ಲೆಫ್ಟಿನೆಂಟ್ ಗವರ್ನರ್ ಸೂಚಿಸಿದ್ದಾರೆ.

ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ: ಅವಳಿ ಸ್ಫೋಟ ಪ್ರಕರಣಗಳಲ್ಲಿ ಗಾಯಗೊಂಡ ಒಂಬತ್ತು ಜನರಿಗೆ ಪರಿಹಾರ ಘೋಷಿಸಲಾಗಿದೆ. ತಲಾ ಒಬ್ಬ ಗಾಯಾಳುವಿಗೂ 50 ಸಾವಿರ ರೂಪಾಯಿ ಪರಿಹಾರವನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಘೋಷಿಸಿದ್ದಾರೆ. ಅಲ್ಲದೇ, ಎಲ್ಲ ಗಾಯಾಳುಗಳಿಗೆ ಆಡಳಿತವು ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆಯನ್ನು ಖಾತ್ರಿ ಪಡಿಸುತ್ತದೆ. ಜೊತೆಗೆ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ ಎಂದು ಲೆಫ್ಟಿನೆಂಟ್ ಗವರ್ನರ್ ಅಭಯ ನೀಡಿದ್ದಾರೆ.

ಇದನ್ನೂ ಓದಿ: ಗಣತಂತ್ರ ದಿನಕ್ಕೆ ಮುನ್ನ ಜಮ್ಮುವಿನಲ್ಲಿ ಸ್ಫೋಟ, 9 ಮಂದಿಗೆ ಗಾಯ; ಭದ್ರತಾ ಪಡೆಗಳಿಂದ ಕಟ್ಟೆಚ್ಚರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.