ETV Bharat / bharat

ಮುಲಾಯಂ ಸಿಂಗ್​ ಅಂತ್ಯಕ್ರಿಯೆ.. ಪ್ರಧಾನಿ ಮೋದಿ, ಕೆಸಿಆರ್​ ಸೇರಿ ವಿವಿಧ ಗಣ್ಯರು ಭಾಗಿ - Mulayam Singh Yadavs Funeral today

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್​ ಯಾದವ್​ ಅವರ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ನಾಯಕರು ಭಾಗವಹಿಸಲಿದ್ದಾರೆ.

mulayam-singh-yadavs-funeral-today
ಮುಲಾಯಂ ಸಿಂಗ್​ ಅಂತ್ಯಕ್ರಿಯೆ ಇಂದು
author img

By

Published : Oct 11, 2022, 10:27 AM IST

ಲಖನೌ(ಉತ್ತರಪ್ರದೇಶ): ಸಮಾಜವಾದಿ ಪಕ್ಷದ ಸಂಸ್ಥಾಪಕ ನೇತಾರ ಮುಲಾಯಂ ಸಿಂಗ್​ ಯಾದವ್ ಅವರು ಸೋಮವಾರ ಅನಾರೋಗ್ಯದಿಂದ ವಿಧಿವಶರಾಗಿದ್ದು, ಉತ್ತರಪ್ರದೇಶದ ತಮ್ಮ ಹುಟ್ಟೂರಾದ ಸೈಫೈನಲ್ಲಿ ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಯಾದವ್​ರ ಪಾರ್ಥಿವ ಶರೀರ ನಿನ್ನೆ ಸಂಜೆಯೇ ಗ್ರಾಮಕ್ಕೆ ತಲುಪಿದ್ದು, ಪ್ರಧಾನಿ ಮೋದಿ ಸೇರಿದಂತೆ ದೇಶದ ವಿವಿಧ ನಾಯಕರು ಅಂತಿಮ ವಿಧಿವಿಧಾನದಲ್ಲಿ ಭಾಗವಹಿಸಲಿದ್ದಾರೆ.

ಸಮಾಜವಾದಿ ನಾಯಕನ ಅಂತಿಮ ದರ್ಶನಕ್ಕಾಗಿ ಉತ್ತರ ಪ್ರದೇಶದ ಉದ್ದಗಲದಿಂದಲೂ ಜನರು ಆಗಮಿಸುತ್ತಿದ್ದಾರೆ. ನೇತಾಜಿ ಅಮರ್ ರಹೇ ಘೋಷಣೆಗಳು ಸೈಫೈ ಗ್ರಾಮದಾದ್ಯಂತ ಪ್ರತಿಧ್ವನಿಸುತ್ತಿವೆ.

ಮುಲಾಯಂ ಸಿಂಗ್​ ಯಾದವ್​ರ ಅಂತಿಮ ದರ್ಶನಕ್ಕೆ ಬಂದ ಜನರು

ಅಪಾರ ಸಂಖ್ಯೆಯ ಕಾರ್ಯಕರ್ತರು, ಮುಖಂಡರು ಮತ್ತು ಅಭಿಮಾನಿಗಳು ನಿರಂತರವಾಗಿ ಸೈಫೈ ಗ್ರಾಮಕ್ಕೆ ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲು ಬರುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಧಾನಿ ಮೋದಿ ಭಾಗಿ ಸಾಧ್ಯತೆ: ಮುಲಾಯಂ ಸಿಂಗ್ ಯಾದವ್ ಅವರ ಅಂತ್ಯಕ್ರಿಯೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸುವ ಸಾಧ್ಯತೆ ಇದೆ. ಮಧ್ಯಪ್ರದೇಶದಲ್ಲಿ ಇಂದು ಮಹಾಕಾಲ ಕಾರಿಡಾರ್​ ಉದ್ಘಾಟನೆ ನೆರವೇರಿಸುವ ಕಾರಣಕ್ಕಾಗಿ ಅವರು ಸೈಫೈಗೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಅಲ್ಲಿಂದ ತೆರಳಲಿದ್ದಾರೆ ಎಂದು ಹೇಳಲಾಗ್ತಿದೆ.

ಅಲ್ಲದೇ ಉತ್ತರಪ್ರದೇಶದಲ್ಲಿ ಭಾರೀ ಸುರಿಯುತ್ತಿರುವ ಕಾರಣ ಹವಾಮಾನ ಪ್ರತಿಕೂಲ ವಾತಾವರಣ ತಿಳಿಯಾದಲ್ಲಿ ಮಾತ್ರ ಅವರು ಸೈಫೈಗೆ ಬರಲಿದ್ದಾರೆ ಎಂದು ಹೇಳಲಾಗ್ತಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್, ಮತ್ತು ತೆಲಂಗಾಣದ ಕೆ ಚಂದ್ರಶೇಖರ್​ರಾವ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಉಪಸ್ಥಿತರಿರಲಿದ್ದಾರೆ ಎಂದು ತಿಳಿದುಬಂದಿದೆ.

ಮೂರು ದಿನ ಶೋಕಾಚರಣೆ: ಮೂರು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಮುಲಾಯಂ ಸಿಂಗ್​ ಅವರ ನಿಧನದಿಂದ ಉತ್ತರಪ್ರದೇಶದಲ್ಲಿ ಮೂರು ದಿನ ಶೋಕಾಚರಣೆ ನಡೆಸಲಾಗುತ್ತಿದೆ. ಯಾದವ್​ರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್​ ನಿನ್ನೆಯೇ ಘೋಷಿಸಿದ್ದರು.

ಓದಿ: 10 ಬಾರಿ ಶಾಸಕ, 7 ಬಾರಿ ಸಂಸದ, 3 ಬಾರಿ ಸಿಎಂ.. ತೃತೀಯ ರಂಗ ಮಾಂತ್ರಿಕನ ರಾಜಕೀಯದ ​ಏಳು-ಬೀಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.