ETV Bharat / bharat

ಅನಾರೋಗ್ಯ: ಮುಲಾಯಂ ಸಿಂಗ್ ಯಾದವ್ ಆಸ್ಪತ್ರೆಗೆ ದಾಖಲು

author img

By

Published : Jul 1, 2021, 12:28 PM IST

ಅನಾರೋಗ್ಯ ಹಿನ್ನೆಲೆ ಸಮಾಜವಾದಿ ಪಕ್ಷದ ಸಂಸ್ಥಾಪಕ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

mulayam singh
ಮುಲಾಯಂ ಸಿಂಗ್ ಯಾದವ್ ಆಸ್ಪತ್ರೆಗೆ ದಾಖಲು

ಲಖನೌ (ಉತ್ತರ ಪ್ರದೇಶ): ಹಠಾತ್ತನೆ ಆರೋಗ್ಯ ಹದಗೆಟ್ಟ ಕಾರಣ ಸಮಾಜವಾದಿ ಪಕ್ಷ (ಎಸ್ಪಿ)ದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ (82) ಅವರನ್ನು ಗುರುಗ್ರಾಮ್‌ನ ಮೇದಾಂತ್ ಆಸ್ಪತ್ರೆಗೆ ದಾಖಲಿಸಲಾಗಿದೆ.

2020ರ ಅಕ್ಟೋಬರ್​ನಲ್ಲಿ ಕೋವಿಡ್​ ಸೋಂಕು ತಗುಲಿ ಅದರಿಂದ ಮುಲಾಯಂ ಸಿಂಗ್ ಗುಣಮುಖರಾಗಿದ್ದರು. ಜೂನ್ 7 ರಂದು ಕೊರೊನಾ ಲಸಿಕೆಯ ಮೊದಲ ಡೋಸ್​ ಹಾಕಿಸಿಕೊಂಡಿದ್ದರು. ಆದರೆ, ಕಳೆದೆರಡು ತಿಂಗಳಿನಿಂದ ಅನಾರೋಗ್ಯದ ಹಿನ್ನೆಲೆ ಅನೇಕ ಬಾರಿ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದ್ದ ಮುಲಾಯಂ ಸಿಂಗ್ ಯಾದವ್, ಮೂರು ಬಾರಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಹಾಗೂ ಹೆಚ್​ ಡಿ ದೇವೇಗೌಡ ಅವರು ಪ್ರಧಾನಿಯಾಗಿದ್ದ ವೇಳೆ ಕೇಂದ್ರ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.