ಸಿಲ್ವಾನಿ (ಮಧ್ಯಪ್ರದೇಶ): 2021 ರ ಜನವರಿಯಲ್ಲಿ ಎರಡು ತೇಗದ ಮರಗಳನ್ನು ಅಕ್ರಮವಾಗಿ ಕತ್ತರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಅರಣ್ಯ ಉಲಾಖೆ ಅಧಿಕಾರಿಗಳು 1.20 ಕೋಟಿ ರೂ. ದಂಡ ವಿಧಿಸಲಾಗಿದೆ.
ಮರದ ಮೂಲ ವೆಚ್ಚದ ಜೊತೆಗೆ, ಮರದ ಪ್ರಯೋಜನಗಳನ್ನು ಸಹ ಲೆಕ್ಕಹಾಕಿ ದಂಡದ ಮೊತ್ತವನ್ನು ಆ ಆಧಾರದ ಮೇಲೆ ನಿರ್ಧರಿಸಲಾಗಿದೆ.

ಜನವರಿ 2021 ರಲ್ಲಿ, ಸಿಲ್ವಾನಿ ತಹಸಿಲ್‌ನ ಬಮ್‌ಹೋರಿ ಬಳಿಯ ವೆಲ್ಗಾಂವ್ ನಿವಾಸಿ ಆರೋಪಿ ಛೋಟೆ ಲಾಲ್ ಸಿಂಘೌರಿ ಅಭಯಾರಣ್ಯದಲ್ಲಿ ಎರಡು ತೇಗದ ಮರಗಳನ್ನು ಕಡಿದಿದ್ದಾರೆ ಎಂದು ಆರೋಪಿಸಲಾಗಿದೆ. ಅಂದಿನಿಂದ ಆರೋಪಿ ಪರಾರಿಯಾಗಿದ್ದ. 4 ತಿಂಗಳ ನಂತರ ಆರೋಪಿಯನ್ನು ಅರಣ್ಯ ಇಲಾಖೆ ಬಂಧಿಸಿ 1,21,07,700 ರೂ.ಗಳ ದಂಡವಿಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ.
ಬಮ್ಹೌರಿ ಅರಣ್ಯ ಅಧಿಕಾರಿ ಮಹೇಂದ್ರ ಕುಮಾರ್ ಪಾಲೆಚಾ, ಅವರು ಪ್ರತಿಕ್ರಿಯಿಸಿದ್ದು, ಮರದ ಸರಾಸರಿ ವಯಸ್ಸು 50 ವರ್ಷಗಳು. ಈ 50 ವರ್ಷಗಳಲ್ಲಿ ಒಂದು ಮರವು 52,00,400 ರೂ. ಬೆಲೆ ಬಾಳುತ್ತದೆ ಎಂದು ತಿಳಿಸಿದ್ದಾರೆ.