ETV Bharat / bharat

ಕೊಯಮತ್ತೂರು ಸಿಲಿಂಡರ್ ಸ್ಪೋಟ ಪ್ರಕರಣ: ಎನ್ಐಎ ತನಿಖೆಗೆ ಸ್ಟಾಲಿನ್ ಶಿಫಾರಸು

ಕೊಯಮತ್ತೂರು ನಗರದ ದೇವಸ್ಥಾನದ ಮುಂಭಾಗದಲ್ಲಿ ಭಾನುವಾರ ನಡೆದ ಕಾರಿಗೆ ಅಳವಡಿಸಿದ್ದ ಎಲ್‌ಪಿಜಿ ಸಿಲಿಂಡರ್ ಸ್ಫೋಟದಲ್ಲಿ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದ ಪ್ರಕರಣವನ್ನು ಎನ್‌ಐಎ ಹೆಚ್ಚಿನ ತನಿಖೆಗೆ ಆದೇಶಿಸಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶಿಫಾರಸು ಮಾಡಿದ್ದಾರೆ.

A case of cylinder explosion
ಸಿಲಿಂಡರ್ ಸ್ಫೋಟ ಪ್ರಕರಣ
author img

By

Published : Oct 26, 2022, 4:27 PM IST

Updated : Oct 26, 2022, 4:38 PM IST

ಕೊಯಮತ್ತೂರು (ತಮಿಳುನಾಡು): ಕೊಯಮತ್ತೂರು ನಗರದ ದೇವಸ್ಥಾನದ ಮುಂಭಾಗದಲ್ಲಿ ಭಾನುವಾರ ನಡೆದ ಕಾರಿಗೆ ಅಳವಡಿಸಿದ್ದ ಎಲ್‌ಪಿಜಿ ಸಿಲಿಂಡರ್ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಸಿಲಿಂಡರ್ ಸ್ಪೋಟ ಪ್ರಕರಣ: ಕೊಯಮತ್ತೂರು ನಗರದಲ್ಲಿ ನಡೆದ ಕಾರ್ ಸಿಲಿಂಡರ್ ಸ್ಫೋಟದಲ್ಲಿ 29 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದರು. ಈ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದರು. ವಾಹನದಲ್ಲಿದ್ದ ಎಲ್‌ಪಿಜಿ ಸಿಲಿಂಡರ್‌ನಿಂದ ಸ್ಫೋಟ ಸಂಭವಿಸಿರಬಹುದು ಎಂದು ಮೊದಲಿಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಉಕ್ಕಡಂನ ಕೊಟ್ಟೈಮೇಡು ಪ್ರದೇಶದಲ್ಲಿ ಜೇಮ್ಸಾ ಮುಬಿನ್ ಎಂಬವರ ನಿವಾಸದಲ್ಲಿ ಶೋಧ ನಡೆಸಿದಾಗ ಪೊಲೀಸರು ಕಚ್ಚಾ ಬಾಂಬ್ ತಯಾರಿಸಲು ಬಳಸುವ ಪೊಟಾಶಿಯಂ ನೈಟ್ರೇಟ್, ಅಲ್ಯೂಮಿನಿಯಂ ಮತ್ತು ಸಲ್ಫರ್‌ನಂತಹ ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಪೊಲೀಸರು ಐವರನ್ನು ಬಂಧಿಸಿದ್ದರು.

ಮೊಹಮ್ಮದ್ ತಳಕಾ, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ರಿಯಾಸ್, ಫಿರೋಜ್ ಇಸ್ಮಾಯಿಲ್ ಮತ್ತು ಮೊಹಮ್ಮದ್ ನವಾಜ್ ಇಸ್ಮಾಯಿಲ್ ಬಂಧಿತರಾಗಿದ್ದರು. ಈ ಸಂದರ್ಭದಲ್ಲಿ ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿರುವ ಕಾರಣ ರಾಷ್ಟ್ರೀಯ ತನಿಖಾ ತಂಡದ (ಎನ್‌ಐಎ) ಅಗತ್ಯವಿಲ್ಲ ಎಂದು ಡಿಜಿಪಿ ಸೈಲೇಂದ್ರ ಬಾಬು ತಿಳಿಸಿದ್ದರು. ಆದರೆ ಇದೀಗ ಮುಖ್ಯಮಂತ್ರಿ ಸ್ಟಾಲಿನ್ ಎನ್ಐಎ ತನಿಖೆಗೆ ಶಿಫಾರಸು ಮಾಡಿದ್ದಾರೆ.

ಇದನ್ನೂ ಓದಿ: ಕೊಯಮತ್ತೂರು ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಐವರ ಬಂಧನ: ಇದು ಆತ್ಮಹತ್ಯಾ ದಾಳಿಯೇ?

Last Updated : Oct 26, 2022, 4:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.