ETV Bharat / bharat

ಜಮ್ಮು ಮತ್ತು ಕಾಶ್ಮೀರ: ಭದ್ರತಾ ಪಡೆಗಳಿಂದ ಮೂವರು ಉಗ್ರರ ಹತ್ಯೆ

ಶ್ರೀನಗರ ಜಿಲ್ಲೆಯಲ್ಲಿ ಮಂಗಳವಾರ ಆರಂಭವಾದ ದೀರ್ಘ ಕಾರ್ಯಾಚರಣೆಯಲ್ಲಿ ಒಟ್ಟು ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ಮುಂದುವರೆದಿದೆ.

Militant killed in Lawaypora encounter
ಲಾವೆಪೊರಾದಲ್ಲಿ ಓರ್ವ ಉಗ್ರನ ಹತ್ಯೆ
author img

By

Published : Dec 30, 2020, 11:58 AM IST

Updated : Dec 30, 2020, 12:05 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಶ್ರೀನಗರದ ಹೊರವಲಯದಲ್ಲಿರುವ ಲಾವೆಪೊರಾ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಕನಿಷ್ಠ ಮೂವರು ಉಗ್ರರನ್ನು ಕೊಲ್ಲಲಾಗಿದೆ.

  • Two more unidentified terrorists neutralised; total 3 terrorists neutralised so far, in Lawaypora area of Srinagar. Search underway: Kashmir Zone Police https://t.co/6wIG8YgOEp

    — ANI (@ANI) December 30, 2020 " class="align-text-top noRightClick twitterSection" data=" ">

ಇದು ಈ ವರ್ಷ ಲಾವೆಪೊರಾ ಪ್ರದೇಶದಲ್ಲಿ ನಡೆದ ಎರಡನೇ ಗುಂಡಿನ ಕಾಳಗವಾಗಿದೆ. 2020 ರಲ್ಲಿ ಶ್ರೀನಗರ ಜಿಲ್ಲೆಯಲ್ಲಿ 10 ಬಾರಿ ಗುಂಡಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ.

ಈ ಪ್ರದೇಶದಲ್ಲಿ ಕನಿಷ್ಠ ಮೂವರು ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಪಡೆದ ನಂತರ ಈ ಕಾರ್ಯಾಚರಣೆ ಪ್ರಾರಂಭವಾಗಿದ್ದು, ಮಂಗಳವಾರ ಸಂಜೆ ಸೇನೆಯ 2ನೇ ರಾಷ್ಟ್ರೀಯ ರೈಫಲ್ಸ್, ಜಮ್ಮು ಮತ್ತು ಕಾಶ್ಮೀರ ವಿಶೇಷ ಕಾರ್ಯಾಚರಣೆ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Last Updated : Dec 30, 2020, 12:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.