ETV Bharat / bharat

ಮಹಾರಾಷ್ಟ್ರದಲ್ಲೂ 18-44 ವರ್ಷದವರಿಗೆ ಉಚಿತ ಲಸಿಕೆ: ನಾಳಿನ ಸಭೆ ಬಳಿಕ ಅಂತಿಮ ನಿರ್ಧಾರ - free vaccine distribution in maharastra

ರಾಜ್ಯದಲ್ಲಿ ಲಸಿಕೆ ಕೊರತೆ ಇದ್ದು, ಕೇಂದ್ರದ ಜೊತೆ ಮಹಾ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಅಜಿತ್​ ಪವಾರ್ ತಿಳಿಸಿದ್ದಾರೆ.

ajit-pawar
ಉಪ ಮುಖ್ಯಮಂತ್ರಿ ಅಜಿತ್​ ಪವಾರ್
author img

By

Published : Apr 27, 2021, 7:37 PM IST

ಮುಂಬೈ: ಭಾರತವನ್ನು ಕೋವಿಡ್​ ಖೆಡ್ಡಾಕ್ಕೆ ಕೆಡವಿರುವ ಮಹಾರಾಷ್ಟ್ರದಲ್ಲಿ ದಿನ ದಿನಕ್ಕೂ ಪಾಸಿಟಿವ್​​ ಕೇಸ್​ಗಳು ಹೆಚ್ಚುತ್ತಲೇ ಇವೆ. ಈ ನಡುವೆ ಅಲ್ಲಿನ ಸರ್ಕಾರ 18 ರಿಂದ 44 ವರ್ಷ ವಯಸ್ಸಿನವರಿಗೆ ಉಚಿತ ಲಸಿಕೆ ನೀಡಲು ನಿರ್ಧರಿಸಿದೆ. ಈ ಸಂಬಂಧ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಅಜಿತ್​ ಪವಾರ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿರುವ ಅವರು, ಮೇ 1 ರಿಂದ 18- 44 ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ಹಾಕಲಾಗುವುದು. ಆದರೆ, ಕೇಂದ್ರ ಸರ್ಕಾರ ಎಲ್ಲರಿಗೂ ಉಚಿತ ಲಸಿಕೆ ಹಾಕುವ ನಿರ್ಧಾರ ತೆಗೆದುಕೊಳ್ಳುತ್ತಾ ಎಂಬುದೇ ಎಲ್ಲರ ಮುಂದಿರುವ ಪ್ರಶ್ನೆ ಎಂದಿರುವ ಪವಾರ್​, ಈ ಸಂಬಂಧ ನಾಳೆ ನಡೆಯಲಿರುವ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದಿದ್ದಾರೆ.

ಕೇಂದ್ರ ಸರ್ಕಾರ ರೆಮ್ಡೆಸಿವಿರ್​ ಪೂರೈಕೆ ಮಾಡುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಲಸಿಕೆ ಕೊರತೆ ಇದ್ದು, ಕೇಂದ್ರದ ಜೊತೆ ಮಹಾ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಕೇಂದ್ರದಿಂದ ಲಸಿಕೆ ಪೂರೈಕೆ ಕಡಿಮೆ ಇದ್ದು, ರಾಜ್ಯದಲ್ಲಿ ರೆಮ್ಡೆಸಿವಿರ್​ ಲಸಿಕೆ ಕೊರತೆ ಎದುರಾಗಿದೆ. ಹೀಗಾಗಿ, ಈ ನಡುವೆ ಮಹಾ ಸರ್ಕಾರ 8-10 ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳುವ ಮಾತುಕತೆ ನಡೆಸುತ್ತಿದೆ ಎಂಬ ಸುಳಿವನ್ನೂ ಪವಾರ್​ ನೀಡಿದ್ದಾರೆ. ಆದರೆ, ಲಸಿಕೆ ಬಗ್ಗೆ ಕೇಂದ್ರ ಸರ್ಕಾರದಿಂದ ಹಸಿರು ನಿಶಾನೆ ಸಿಗಬೇಕು ಎನ್ನುವ ಮೂಲಕ ಸಮಸ್ಯೆಯನ್ನ ಮೋದಿ ಸರ್ಕಾರದ ಅಂಗಳಕ್ಕೆ ಎಸೆದಿದ್ದಾರೆ.

ಓದಿ: ಕೋವಿಡ್​ನಿಂದ ಅಕ್ರಮ -ನಕಲಿ ಔಷಧಗಳ ಹಾವಳಿ ಹೆಚ್ಚಳ : ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.