ETV Bharat / bharat

ನ್ಯಾಯಾಧೀಶ ದಂಪತಿ ಮೇಲೆ ಹಲ್ಲೆ: ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ.. ಲೈಸನ್ಸ್ ರಿವಾಲ್ವರ್ - ರೈಫಲ್​ ದರೋಡೆ - ನ್ಯಾಯಾಧೀಶ ದಂಪತಿ ಮೇಲೆ ಹಲ್ಲೆ

ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶ ದಂಪತಿ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳ ತಂಡ, ಪತ್ನಿಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿರುವ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.

lucknow-para-judge-plot-case-dabangs-beat-up-judge-and-his-wife-in-lucknow-para
ನ್ಯಾಯಾಧೀಶ ದಂಪತಿ ಮೇಲೆ ಹಲ್ಲೆ: ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ... ಲೈಸನ್ಸ್ ರಿವಾಲ್ವರ್ - ರೈಫಲ್​ ದರೋಡೆ
author img

By

Published : Nov 9, 2022, 9:35 PM IST

Updated : Nov 9, 2022, 11:07 PM IST

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕಾಂಪೌಂಡ್​ ಗೋಡೆ ವಿಚಾರವಾಗಿ ನ್ಯಾಯಾಧೀಶ ಮತ್ತು ಅವರ ಪತ್ನಿ ಮೇಲೆ ದಾಳಿ ಮಾಡಿ ಚಿನ್ನದ ಸರ, ಪರವಾನಗಿ ರಿವಾಲ್ವರ್ ಮತ್ತು ರೈಫಲ್​ ದೋಚಲಾಗಿದೆ.

ಇಲ್ಲಿನ ಪಾರಾ ಪ್ರದೇಶದಲ್ಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶ ಸೋಮನಾಥ್ ಸಿಂಗ್ ತಮ್ಮ ಪ್ಲಾಟ್‌ ಹೊಂದಿದ್ದು, ಕಾಂಪೌಂಡ್​ ನಿರ್ಮಿಸಿದ್ದಾರೆ. ಈ ಗೋಡೆಯನ್ನು ಮಂಗಳವಾರ ರಾತ್ರಿ ಅದರ ಪಕ್ಕದಲ್ಲಿಯೇ ವಾಸವಾಗಿರುವ ಅಬ್ಬಾಸ್, ಅಲಿ ಮೊಹಮ್ಮದ್, ಇರ್ಫಾನ್ ಸೇರಿದಂತೆ ಅನೇಕ ಸೇರಿಕೊಂಡು ಕಡೆವಿದ್ದಾರೆ.

ಅಲ್ಲದೇ, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ನ್ಯಾಯಾಧೀಶ ಸೋಮನಾಥ್ ಸಿಂಗ್ ಮತ್ತು ಪತ್ನಿ ಮೇಲೂ ದಾಳಿ ಮಾಡಿದ್ದಾರೆ. ಆಗ ಸ್ಥಳೀಯರು ನೆರವಿಗೆ ದಾವಿಸಿ ನ್ಯಾಯಾಧೀಶ ದಂಪತಿಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ನ್ಯಾಯಾಧೀಶರ ಪತ್ನಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ಹಿನ್ನೆಲೆ: ನ್ಯಾಯಾಧೀಶ ಸೋಮನಾಥ್ ಸಿಂಗ್ ಗಾಜಿಪುರದ ನಿವಾಸಿಯಾಗಿದ್ದು, ಪ್ರಸ್ತುತ ಪಾರಾ ಲಖನೌದಲ್ಲಿ ವಾಸಿಸುತ್ತಿದ್ದಾರೆ. 2012ರ ಸೆಪ್ಟೆಂಬರ್ 28ರಂದು ಪ್ಯಾರಾ ಲಖನೌದಲ್ಲಿ ಒಂದು ಪ್ಲಾಟ್ ಖರೀದಿಸಿದ್ದರು. ಇದೇ ನವೆಂಬರ್ 2ರಂದು ತಮ್ಮ ಪ್ಲಾಟ್‌ನಲ್ಲಿ ಸುಮಾರು 10 ಅಡಿಗಳ ಕಾಂಪೌಂಡ್​ ನಿರ್ಮಿಸಿದ್ದರು.

ನ್ಯಾಯಾಧೀಶ ದಂಪತಿ ಮೇಲೆ ಹಲ್ಲೆ: ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ.. ಲೈಸನ್ಸ್ ರಿವಾಲ್ವರ್ - ರೈಫಲ್​ ದರೋಡೆ

ಆದರೆ, ಅದೇ ದಿನವೇ ಕಾಂಪೌಂಡ್​ ಗೋಡೆಗೆ ಹೊಂದಿಕೊಂಡಂತೆ ವಾಸವಿದ್ದ ಅಬ್ಬಾಸ್ ಮತ್ತು ಅಲಿ ಮೊಹಮ್ಮದ್, ಇರ್ಫಾನ್ ಹಾಗೂ ಮತ್ತಿತರರು ರಾತ್ರಿ ವೇಳೆ ಈ ಗೋಡೆ ಕೆಡವಿದ್ದಾರೆ. ಜೊತೆಗೆ ನಿರ್ಮಾಣಕ್ಕೆ ಇಟ್ಟಿದ್ದ ಸುಮಾರು 60 ಮೂಟೆ ಸಿಮೆಂಟ್ ಹಾಗೂ ಇತ್ಯಾದಿ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆಯ ಬಗ್ಗೆ ನ್ಯಾಯಾಧೀಶ ದಂಪತಿ ಮರು ದಿನ ಬೆಳಗ್ಗೆ 9 ಗಂಟೆ ಸುಮಾರಿಗೆ ತಮ್ಮ ಪ್ಲಾಟ್‌ಗೆ ಬಂದಿದ್ದಾರೆ.

ಆಗ ಇದೇ ಆರೋಪಿಗಳು 20ರಿಂದ 25 ಜನರ ಅಪರಿಚಿತ ಗುಂಪು ಕಟ್ಟಿಕೊಂಡು ಶಸ್ತ್ರಾಸ್ತ್ರ ಮತ್ತು ದೊಣ್ಣೆಗಳೊಂದಿಗೆ ಬಂದಿದ್ದಾರೆ. ಜೊತೆಗೆ ನ್ಯಾಯಾಧೀಶ ಸೋಮನಾಥ್ ಸಿಂಗ್ ಮತ್ತು ಅವರ ಪತ್ನಿಯನ್ನು ಥಳಿಸಿದ್ದಾರೆ. ಇಷ್ಟೇ ಅಲ್ಲ, ನ್ಯಾಯಾಧೀಶರ ಪತ್ನಿಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿದ್ದಾರೆ. ನಿನ್ನ ಹೆಂಡತಿ ನಿನ್ನನ್ನು ಮತ್ತು ನಿನ್ನ ಮಗನನ್ನು ಕೊಲೆ ಮಾಡುತ್ತೇವೆ ಎಂದು ನ್ಯಾಯಾಧೀಶರಿಗೆ ಹೆದರಿಸಿದ್ದಾರೆ ಎಂದು ಹೇಳಲಾಗಿದೆ.

ತಡವಾಗಿ ಕೇಸ್​ ದಾಖಲಿಸಿದ ಪೊಲೀಸರು: ನ.3ರಂದು ಆರೋಪಿಗಳು ನಮ್ಮ ಮೇಲೆ ತೀವ್ರವಾಗಿ ದಾಳಿ ಮಾಡಿದ್ದಾರೆ. ಅಲ್ಲದೇ, ನಮ್ಮ ಬಳಿಯಿದ್ದ ಮೊಬೈಲ್, ಚಿನ್ನದ ಸರ, ಲೈಸನ್ಸ್ ಹೊಂದಿರುವ ರಿವಾಲ್ವರ್ ಹಾಗೂ ರೈಫಲ್ ದೋಚಿದ್ದರು. ಆರೋಪಿಗಳು ನಮ್ಮ ಮೇಲೆ ದಾಳಿ ಮಾಡಿದ ದಿನವೇ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಅಂದು ಯಾವುದೇ ಪ್ರಕರಣವನ್ನೂ ಪೊಲೀಸರು ದಾಖಲಿಸಿಕೊಂಡಿಲ್ಲ. ನ.7ರಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ನ್ಯಾಯಾಧೀಶ ಸೋಮನಾಥ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸಿಪಿ ವಿಕ್ರಮ್ ಸಿಂಗ್, ನ್ಯಾಯಾಧೀಶ ಸೋಮನಾಥ್ ಸಿಂಗ್ ದೂರಿನ ಮೇಲೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗ್ರಾನೈಟ್ ಹಗರಣ: ತೆಲಂಗಾಣ ಸಚಿವರ ಮನೆ, ಕಚೇರಿ ಸೇರಿ ಅನೇಕ ಕಡೆ ಇಡಿ - ಐಟಿ ಜಂಟಿ ದಾಳಿ

Last Updated : Nov 9, 2022, 11:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.