ETV Bharat / bharat

100 ಕೋಟಿ ಡೋಸ್​ ವ್ಯಾಕ್ಸಿನೇಷನ್: ಸರ್ಕಾರದ ಬಗ್ಗೆ ತರೂರ್ 'ರಚನಾತ್ಮಕ ಟೀಕೆ'..

ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಹಾಗೂ ಲಸಿಕೆ ವಿಚಾರದಲ್ಲಿ ಅಸರ್ಮಪಕ ನಿರ್ವಹಣೆಯ ದೋಷದಿಂದ ಇದೀಗ ಕೇಂದ್ರ ಸರ್ಕಾರಕ್ಕೆ ಭಾಗಶಃ ಮುಕ್ತಿ ದೊರೆತಿದೆ. ಆದರೆ, ಹಿಂದಿನ ವೈಫಲ್ಯಗಳಿಗೆ ಇನ್ನೂ ಸರ್ಕಾರ ಹೊಣೆಯಾಗಿರುತ್ತದೆ ಎಂದು ಶಶಿ ತರೂರ್ ಟ್ವೀಟ್​ ಮಾಡಿದ್ದಾರೆ.

Shashi Tharoor
Shashi Tharoor
author img

By

Published : Oct 21, 2021, 3:34 PM IST

ನವದೆಹಲಿ: ಭಾರತದ ಕೋವಿಡ್​​ ಲಸಿಕಾಭಿಯಾನವು ದಾಖಲೆಯ 100 ಕೋಟಿ ಡೋಸ್​ ವ್ಯಾಕ್ಸಿನ್​ ನೀಡುವಲ್ಲಿ ಯಶಸ್ವಿಯಾಗಿದ್ದು, ಈ ಕುರಿತು ಕಾಂಗ್ರೆಸ್​ ನಾಯಕ ಶಶಿ ತರೂರ್​ 'ರಚನಾತ್ಮಕ ಟೀಕೆ' ವ್ಯಕ್ತಪಡಿಸಿದ್ದಾರೆ.

"ಇದು ಎಲ್ಲ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಇದಕ್ಕಾಗಿ ನಾವು ಸರ್ಕಾರಕ್ಕೆ ಕ್ರೆಡಿಟ್ ನೀಡೋಣ. ಆದರೆ ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಹಾಗೂ ಲಸಿಕೆ ವಿಚಾರದಲ್ಲಿ ಸರ್ಕಾರದ ಅಸರ್ಮಪಕ ನಿರ್ವಹಣೆಯ ದೋಷದಿಂದ ಇದೀಗ ಭಾಗಶಃ ಮುಕ್ತಿ ದೊರೆತಿದೆ. ಆದರೆ ಈ ಹಿಂದಿನ ವೈಫಲ್ಯಗಳಿಗೆ ಇನ್ನೂ ಸರ್ಕಾರ ಹೊಣೆಯಾಗಿರುತ್ತದೆ" ಎಂದು ತರೂರ್​ ಟ್ವೀಟ್​ ಮಾಡಿದ್ದಾರೆ.

  • This is a matter of pride for all Indians. Let’s give the Government credit. After severe mismanagement of the second #Covid wave & botching the vaccination orders that might have prevented it, Govt has now partly redeemed itself. It remains accountable for its earlier failures. https://t.co/34UHRWKfDa

    — Shashi Tharoor (@ShashiTharoor) October 21, 2021 " class="align-text-top noRightClick twitterSection" data=" ">

ಇದನ್ನೂ ಓದಿ: COVID19 Vaccine Century! 100 ಕೋಟಿ ಡೋಸ್‌ ಕೋವಿಡ್​ ಲಸಿಕೆ ವಿತರಿಸಿದ ಭಾರತ

2021ರ ಜನವರಿ 16ರಂದು ದೇಶಾದ್ಯಂತ ಕೊರೊನಾ ವ್ಯಾಕ್ಸಿನೇಷನ್ ಡ್ರೈವ್​ ಆರಂಭಿಸಲಾಗಿತ್ತು. ಆರಂಭದಲ್ಲಿ ನಮಗೆ ಲಸಿಕೆ ಕೊರತೆ ಇರುವ ವೇಳೆ ಬೇರೆ ರಾಷ್ಟ್ರಗಳಿಗೆ ಲಸಿಕೆ ರಫ್ತು ಮಾಡಿ ಕೇಂದ್ರ ಸರ್ಕಾರ ಟೀಕೆಗೆ ಗುರಿಯಾಗಿತ್ತು. ಇದೀಗ ಕೋವಿಡ್​ ಲಸಿಕೆಯ100 ಕೋಟಿ ಡೋಸ್​ ಅನ್ನು ಜನರಿಗೆ ನೀಡಲಾಗಿದೆ. ಈ ಪೈಕಿ ಶೇ.74ರಷ್ಟು ಜನರು ಮೊದಲ ಡೋಸ್ ಹಾಗೂ ಶೇ.31 ಮಂದಿ ಎರಡೂ ಡೋಸ್​ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.