ETV Bharat / bharat

ಎಲುರು ಆಸ್ಪತ್ರೆಗೆ ಎಡಪಕ್ಷದ ಮುಖಂಡರ ಭೇಟಿ, ರೋಗದ ತನಿಖೆಗೆ ಆಗ್ರಹ

author img

By

Published : Dec 9, 2020, 12:23 PM IST

ಇಲ್ಲಿ 500ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಸರ್ಕಾರವು ಎಲೂರಿನಲ್ಲಿ ಈ ರೋಗದ ಬಗ್ಗೆ ತನಿಖೆ ನಡೆಸಬೇಕು. ಜೊತೆಗೆ ಮೃತ ವ್ಯಕ್ತಿಯ ಕುಟುಂಬಕ್ಕೆ 50 ಲಕ್ಷ ರೂ ಮತ್ತು ಆಸ್ಪತ್ರೆಗೆ ದಾಖಲಾದವರಿಗೆ 50,000 ರೂ. ಪರಿಹಾರ ನೀಡಬೇಕು ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಮಧು ಆಗ್ರಹಿಸಿದರು.

ಎಲುರು ಆಸ್ಪತ್ರೆಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮುಖಂಡರ ಭೇಟಿ

ಪಶ್ಚಿಮ ಗೋದಾವರಿ (ಆಂಧ್ರ ಪ್ರದೇಶ): ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ರಾಜ್ಯ ಕಾರ್ಯದರ್ಶಿ ಪಿ.ಮಧು ಮತ್ತು ಸಿಪಿಐ ರಾಜ್ಯ ಕಾರ್ಯದರ್ಶಿ ಕೆ.ರಾಮಕೃಷ್ಣ ಸೇರಿದಂತೆ ಎಡ ಪಕ್ಷದ ನಾಯಕರು ನಿಗೂಢ ಖಾಯಿಲೆಯಿಂದ ಸಂತ್ರಸ್ತರಾದ ಜನರು ದಾಖಲಾಗಿರುವ ಆಂಧ್ರಪ್ರದೇಶದ ಎಲುರು ಆಸ್ಪತ್ರೆಗೆ ಭೇಟಿ ನೀಡಿದರು.

ಇಲ್ಲಿ 500 ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಸರ್ಕಾರವು ಎಲೂರಿನಲ್ಲಿ ಈ ರೋಗದ ಬಗ್ಗೆ ತನಿಖೆ ನಡೆಸಬೇಕು. ಇಲ್ಲಿನ ಜನರು ನೈರ್ಮಲ್ಯದ ಬಗ್ಗೆ ದೂರು ನೀಡುತ್ತಿದ್ದಾರೆ. ಇದಕ್ಕೆ ಸರ್ಕಾರ ಕಾರಣವನ್ನು ಕಂಡುಹಿಡಿಯಬೇಕು ಎಂದು ಆಗ್ರಹಿಸಿದರು.

ಓದಿ: ಭಾರತ್ ಬಯೋಟೆಕ್​ಗೆ ಭೇಟಿ ನೀಡಲು 64 ವಿದೇಶಿ ರಾಯಭಾರಿಗಳ ಆಗಮನ

ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ ಸಿಪಿಐ ರಾಜ್ಯ ಕಾರ್ಯದರ್ಶಿ ಕೆ.ರಾಮಕೃಷ್ಣ, ಈ ಸುದ್ದಿ ಕೇಳಿ ಬಹಳ ಆಶ್ಚರ್ಯವಾಗಿದೆ. ಅದರಲ್ಲೂ ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆ ಕಳೆದ ಮೂರು-ನಾಲ್ಕು ದಿನಗಳಿಂದ ಜನರು ನಿಗೂಢ ರೋಗದಿಂದ ಬಳಲುತ್ತಿದ್ದಾರೆ. ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಮತ್ತು ಹಲವಾರು ಮಂದಿ ಆಸ್ಪತ್ರೆಯಲ್ಲಿದ್ದಾರೆ. ಸರ್ಕಾರವು ಮೃತ ವ್ಯಕ್ತಿಯ ಕುಟುಂಬಕ್ಕೆ 50 ಲಕ್ಷ ಮತ್ತು ಆಸ್ಪತ್ರೆಗೆ ದಾಖಲಾದವರಿಗೆ 50,000 ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಆಸ್ಪತ್ರೆಗೆ ಭೇಟಿ ನೀಡಿದ ನಂತರವೂ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದು ನರವೈಜ್ಞಾನಿಕ ಸಮಸ್ಯೆ ಎಂದು ಕೆಲವರು ಹೇಳುತ್ತಿದ್ದಾರೆ. ಎಲೂರು ವಿಜಯವಾಡ ಮತ್ತು ಗುಂಟೂರಿಗೆ ಬಹಳ ಹತ್ತಿರದಲ್ಲಿದ್ದರೂ, ಜನರು ಅಗತ್ಯವಾದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿಲ್ಲ. ನರಶಸ್ತ್ರಚಿಕಿತ್ಸಕರು ರೋಗಿಗಳನ್ನು ಪರೀಕ್ಷಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಅವರು ತಿಳಿಸಿದರು.

ಓದಿ: ‘ಫೆಬ್ರವರಿ ವೇಳೆಗೆ ಕೊವಾಕ್ಸಿನ್ ಸಾರ್ವಜನಿಕ ಬಳಕೆಗೆ ಲಭ್ಯ ಸಾಧ್ಯತೆ’

ಕೊನೆಯ ವರದಿಗಳು ಬಂದಾಗ ಮಂಗಳವಾರ ತಡರಾತ್ರಿಯವರೆಗೆ 77 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಪ್ರಕರಣಗಳು ಕಡಿಮೆಯಾಗುತ್ತಿವೆ. ರೋಗಲಕ್ಷಣಗಳ ತೀವ್ರತೆಯೂ ಕಡಿಮೆಯಾಗುತ್ತಿದೆ ಎಂದು ಎಲುರು ಆಸ್ಪತ್ರೆಯ ವೈದ್ಯ ಡಾ.ಮೋಹನ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.