ETV Bharat / bharat

ನ್ಯಾಯಮೂರ್ತಿ ಎನ್.​ವಿ. ರಮಣ ನೀಡಿರುವ ಮಹತ್ವದ ತೀರ್ಪುಗಳು

author img

By

Published : Mar 27, 2021, 9:34 AM IST

Updated : Apr 6, 2021, 7:03 PM IST

2018 ರಲ್ಲಿ, ನ್ಯಾಯಮೂರ್ತಿ ಎನ್.ವಿ. ರಮಣ ಅವರು ಮಹಿಳಾ ಅಧಿಕಾರಿಗಳಿಗೆ ಸಶಸ್ತ್ರ ಪಡೆಗಳಲ್ಲಿ ಶಾಶ್ವತ ಆಯೋಗವನ್ನು ನೀಡದಿರುವ ಬಗ್ಗೆ ಕೇಂದ್ರವನ್ನು ದೂಷಿಸಿದ್ದರು. ಈ ನಿಟ್ಟಿನಲ್ಲಿ ತಾರತಮ್ಯದ ವಿಧಾನವನ್ನು ಅನುಸರಿಸದಂತೆ ಕೇಂದ್ರಕ್ಕೆ ಸೂಚಿಸಿದ್ದರು ಮತ್ತು ಕೇಂದ್ರದ ಕಿರು ಸೇವಾ ಆಯೋಗದಿಂದ (ಎಸ್‌ಎಸ್‌ಸಿ) ಶೀಘ್ರ ಪ್ರತಿಕ್ರಿಯೆ ಕೋರಿದ್ದರು.

Landmark judgements by NV Ramana
ಸಿಜೆಐ ಎನ್​ವಿ ರಮಣ ನೀಡಿರುವ ಮಹತ್ವದ ತೀರ್ಪುಗಳು ಸಿಜೆಐ ಎನ್​ವಿ ರಮಣ ನೀಡಿರುವ ಮಹತ್ವದ ತೀರ್ಪುಗಳು

ಹೈದರಾಬಾದ್​: ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.​ಎ. ಬೊಬ್ಡೆ ಅವರು ನ್ಯಾಯಮೂರ್ತಿ ಎನ್.ವಿ. ರಮಣ ಅವರನ್ನು ಹಿರಿತನ ಮತ್ತು ಅವರು ನೀಡಿರುವ ಐತಿಹಾಸಿಕ ತೀರ್ಪುಗಳ ಮಾನದಂಡಗಳಿಗೆ ಅನುಗುಣವಾಗಿ ಭಾರತದ 48ನೇ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿದ್ದಾರೆ. ಈ ಹಿನ್ನೆಲೆ ಎನ್.ವಿ. ರಮಣ ಅವರು ನೀಡಿರುವ ಕೆಲವು ಪ್ರಮುಖ ತೀರ್ಪುಗಳು ಇಂತಿವೆ.

ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಆದೇಶ:

ನ್ಯಾಯಮೂರ್ತಿ ಎನ್.‌ವಿ. ರಮಣ ನೇತೃತ್ವದ ನ್ಯಾಯಪೀಠವು 2019 ರ ಸೆಪ್ಟೆಂಬರ್ 17 ರಂದು, ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಪಟ್ಟಿ ಮಾಡಬೇಕಾಗಿದೆ ಎಂದು ಆದೇಶ ಹೊರಡಿಸಿತ್ತು.

ಗೃಹಿಣಿಯರ ಮನೆಕೆಲಸಗಳಿಗೂ ಮನ್ನಣೆ ನೀಡಿದ್ದು:

ಜನವರಿ 2021 ರಲ್ಲಿ, ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ಸೂರ್ಯಕಾಂತ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು ಮನೆಕೆಲಸ ಮಾಡುವ ಮಹಿಳೆಯ ಕೆಲಸವು ತನ್ನ ಗಂಡನ ಕಚೇರಿ ಕೆಲಸಕ್ಕಿಂತ ಕಡಿಮೆಯಿಲ್ಲ ಎಂದು ತೀರ್ಪು ನೀಡಿತ್ತು. 2001ರ ಲತಾ ವಾಧ್ವಾ ಪ್ರಕರಣದಲ್ಲಿ ಉನ್ನತ ನ್ಯಾಯಾಲಯವು ಹೇಳಿದ ವಿಚಾರಕ್ಕೆ ಮಹತ್ವ ನೀಡಿದ ನ್ಯಾಯಮೂರ್ತಿ ಎನ್.ವಿ. ರಮಣ, ಗೃಹಿಣಿಯರು ಮನೆಯಲ್ಲಿ ಸಲ್ಲಿಸಿದ ಸೇವೆಗಳ ಆಧಾರದ ಮೇಲೆ ಅವರೂ ಸಂಬಳ ಅಥವಾ ಹಣ ಪಡೆಯಬೇಕು ಎಂದಿದ್ದರು.

ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗ:

2018 ರಲ್ಲಿ, ನ್ಯಾಯಮೂರ್ತಿ ಎನ್.ವಿ. ರಮಣ ಅವರು ಮಹಿಳಾ ಅಧಿಕಾರಿಗಳಿಗೆ ಸಶಸ್ತ್ರ ಪಡೆಗಳಲ್ಲಿ ಶಾಶ್ವತ ಆಯೋಗವನ್ನು ನೀಡದಿರುವ ಬಗ್ಗೆ ಕೇಂದ್ರವನ್ನು ದೂಷಿಸಿದ್ದರು. ಈ ನಿಟ್ಟಿನಲ್ಲಿ ತಾರತಮ್ಯದ ವಿಧಾನವನ್ನು ಅನುಸರಿಸದಂತೆ ಕೇಂದ್ರಕ್ಕೆ ಸೂಚಿಸಿದ್ದರು ಮತ್ತು ಕೇಂದ್ರದ ಕಿರು ಸೇವಾ ಆಯೋಗದಿಂದ (ಎಸ್‌ಎಸ್‌ಸಿ) ಶೀಘ್ರ ಪ್ರತಿಕ್ರಿಯೆ ಕೋರಿದ್ದರು.

ಎಂಡಿ ಅನ್ವರ್ V/S ವಿ. ದೆಹಲಿಯ ಎನ್‌ಸಿಟಿ ರಾಜ್ಯ, 2020:

ಮಾನಸಿಕ ಅಸ್ವಸ್ಥತೆಯ ಕಾರಣದಿಂದ ಆರೋಪಿಯೊಬ್ಬ ಕಾನೂನು ಕ್ರಮದಿಂದ ರಕ್ಷಣೆ ಪಡೆಯಬೇಕಾದರೆ, ಐಪಿಸಿ ಸೆಕ್ಷನ್ 84ರ ಪ್ರಕಾರ ಆತ ಅಥವಾ ಆಕೆ ತಾನು ವಾಸ್ತವದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಬಗ್ಗೆ ಯಾವುದೇ ಸಂಶಯವಿರದಂತೆ ಸಾಬೀತು ಪಡಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಎನ್.ವಿ. ರಮಣ, ಎಸ್.ಎ. ನಜೀರ್ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಪೀಠವು ಹೇಳಿತ್ತು.

ಉನ್ನತ ನ್ಯಾಯಪೀಠಕ್ಕೆ 370 ನೇ ವಿಧಿ ಉಲ್ಲೇಖವನ್ನು ಕಳಿಸಲು ನಿರಾಕರಿಸಿದ್ದು:

ಡಾ. ಷಾ ಫಾಯಿಸಲ್ ಮತ್ತು ಇತರರಿಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜಯ್ ಕಿಶನ್ ಕೌಲ್, ಆರ್. ಸುಭಾಷ್ ರೆಡ್ಡಿ, ಬಿ.ಆರ್. ಗವಾಯಿ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ಪೀಠ, ಸಂವಿಧಾನದ 370 ನೇ ವಿಧಿ ಅನ್ವಯ ಜೆ & ಕೆ ನಲ್ಲಿ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ಯವರ ಆದೇಶಗಳನ್ನು ಪ್ರಶ್ನಿಸುವ ಅರ್ಜಿಗಳಿಗೆ ದೊಡ್ಡ ನ್ಯಾಯಪೀಠವನ್ನು ಉಲ್ಲೇಖಿಸುವ ಅಗತ್ಯವನ್ನು ಪೀಠ ನಿರಾಕರಿಸಿತ್ತು.

2012 ರ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆಯೇ ಸರಿ ಎಂದಿದ್ದು:

ಪವನ್ ಕುಮಾರ್ ಗುಪ್ತಾ ವರ್ಸಸ್ ಸ್ಟೇಟ್ ಆಫ್ ಎನ್‌ಸಿಟಿ ದೆಹಲಿ ಪ್ರಕರಣದ ವಿಚಾರಣೆ ನಡೆಸುತ್ತಿರುವಾಗ, ನ್ಯಾಯಮೂರ್ತಿಗಳಾದ ಎನ್‌.ವಿ. ರಮಣ, ಅರುಣ್ ಮಿಶ್ರಾ, ರೋಹಿಂಗ್ಟನ್ ಫಾಲಿ ನಾರಿಮನ್, ಆರ್. ಭಾನುಮತಿ, ಅಶೋಕ್ ಭೂಷಣ್ ನೇತೃತ್ವದ ಪೀಠ 2012 ರ ದೆಹಲಿ ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ವಜಾ ಮಾಡುವಂತೆ ಮತ್ತು ಕ್ಷಮಾದಾನ ಕೋರಿ ದೆಹಲಿ ಗ್ಯಾಂಗ್​ ರೇಪ್​ ಆರೋಪಿಗಳು ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದ ಮನವಿಯನ್ನು ಅವರು ತಿರಸ್ಕರಿಸಿದ ಕುರಿತಂತೆ ಸಲ್ಲಿಸಿದ್ದ ಕೊನೆಯ ಮೇಲ್ಮನವಿಯನ್ನು ಈ ನ್ಯಾಯಪೀಠ ತಿರಸ್ಕರಿಸಿತ್ತು. (2020 ಮಾರ್ಚ್​ 20 ರಂದು ತಿಹಾರ್​ ಜೈಲಿನಲ್ಲಿ ಎಲ್ಲಾ ಆರೋಪಿಗಳನ್ನು ಗಲ್ಲಿಗೇರಿಸಲಾಗಿದೆ)

ಕಾಶ್ಮೀರ ಲಾಕ್‌ಡೌನ್: ಇಂಟರ್​ನೆಟ್​ ಸ್ಥಗಿತ ಅನಿರ್ದಿಷ್ಟವಾಗಿರಬಾರದು

ಅನುರಾಧಾ ಬೇಸಿನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಎನ್.ವಿ. ರಮಣ, ಸೂರ್ಯಕಾಂತ್ ಮತ್ತು ಬಿ.ಆರ್. ಗವಾಯಿ ಅವರು 19 (1) (ಜಿ) ಕಲಂ ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂವಿಧಾನದಡಿಯಲ್ಲಿ ರಕ್ಷಣೆ ಒದಗಿಸಲಾಗಿದೆ ಎಂದು ಹೇಳಿದರು. ಇದಕ್ಕೆ ಸಂಬಂಧಿಸಿದಂತೆ, ಇಂಟರ್ನೆಟ್ ಅನ್ನು ಸ್ಥಗಿತಗೊಳಿಸುವ ಬಗ್ಗೆ ಪರಿಶೀಲಿಸಬೇಕು. ಅಭಿಪ್ರಾಯ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯ ನಿಗ್ರಹಿಸಲು ಅಥವಾ ಪ್ರಜಾಪ್ರಭುತ್ವ ಹಕ್ಕುಗಳನ್ನು ಚಲಾಯಿಸುವ ವೇಳೆ ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಿತ ಆದೇಶಗಳನ್ನು ವಿಧಿಸಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಕೇವಲ ಇಬ್ಬರು ಪಾಲುದಾರರನ್ನು ಒಳಗೊಂಡಿರುವ ಪಾಲುದಾರಿಕೆ ಸಂಸ್ಥೆಯನ್ನು ವಿಸರ್ಜಿಸುವ ವಿಧಾನ

ಎನ್‌.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಮೂರ್ತಿಗಳ ಕೋರಂ, ಕೇವಲ ಇಬ್ಬರು ಪಾಲುದಾರರನ್ನು ಒಳಗೊಂಡಿರುವ ಪಾಲುದಾರಿಕೆ ಸಂಸ್ಥೆಯಲ್ಲಿ ಒಬ್ಬರು ನಿವೃತ್ತಿ ಹೊಂದಲು ಒಪ್ಪಿಕೊಂಡಾಗ, ನಿವೃತ್ತಿಯು ಸಂಸ್ಥೆಯ ವಿಸರ್ಜನೆಗೆ ಸಮನಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.

ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ವಿ. ಸುಭಾಷ್ ಚಂದ್ರ ಅಗರ್ವಾಲ್, 2019

ರಂಜನ್ ಗೊಗೊಯ್, ಎನ್.ವಿ. ರಮಣ, ಡಿ.ವೈ. ಚಂದ್ರಚೂಡ್, ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರ 5 ನ್ಯಾಯಾಧೀಶರ ಸಂವಿಧಾನ ಪೀಠವು ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿ ಮಾಹಿತಿ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.

ರೋಜರ್ ಮ್ಯಾಥ್ಯೂ ವರ್ಸಸ್​​ ಸೌತ್ ಇಂಡಿಯಾ ಬ್ಯಾಂಕ್ ಲಿಮಿಟೆಡ್, 2019

ರಂಜನ್ ಗೊಗೊಯ್, ಎನ್.ವಿ. ರಮಣ, ಡಿ.ವೈ. ಚಂದ್ರಚೂಡ್, ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರ 5 ನ್ಯಾಯಾಧೀಶರ ಸಂವಿಧಾನ ಪೀಠವು ಹಣಕಾಸು ಕಾಯ್ದೆ, 2017 ರ ಸೆಕ್ಷನ್ 184 ರ ಮಾನ್ಯತೆಯನ್ನು ಎತ್ತಿಹಿಡಿದಿತ್ತು.

ಜಿಂದಾಲ್ ಸ್ಟೇನ್ಲೆಸ್ ಲಿಮಿಟೆಡ್ ವರ್ಸಸ್ ಹರಿಯಾಣ ರಾಜ್ಯ, 2017

9 ನ್ಯಾಯಾಧೀಶರ ಪೀಠವು 7: 2 ಬಹುಮತದಿಂದ, ಇತರ ರಾಜ್ಯಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ರಾಜ್ಯಗಳು ವಿಧಿಸಿರುವ ಪ್ರವೇಶ ತೆರಿಗೆಯ ಸಿಂಧುತ್ವವನ್ನು ಎತ್ತಿಹಿಡಿದಿತ್ತು.

ನಬಾಮ್ ರೆಬಿಯಾ, ಮತ್ತು ಬಮಾಂಗ್ ಫೆಲಿಕ್ಸ್ ವರ್ಸಸ್​ ಡೆಪ್ಯೂಟಿ ಸ್ಪೀಕರ್, 2016 ಪ್ರಕರಣದ ತೀರ್ಪು:

ಆದಿ ಶೈವ ಶಿವಚಾರ್ಯಾರ್ಗಲ್ ನಲ ಸಂಗಮ್ ವರ್ಸಸ್​ ತಮಿಳುನಾಡು ರಾಜ್ಯ, 2016:

ದೇವಾಲಯಗಳಲ್ಲಿ ಅರ್ಚಕರ ನೇಮಕವನ್ನು ಆಗಮಗಳಿಗೆ ಅನುಗುಣವಾಗಿ ಮಾಡಬೇಕಾಗಿರುತ್ತದೆ, ಅದು ಅವರ ಸರಿಯಾದ ಗುರುತಿಸುವಿಕೆಗೆ ಒಳಪಟ್ಟಿರುತ್ತದೆ ಮತ್ತು ಸಾಂವಿಧಾನಿಕ ಆದೇಶಗಳು ಮತ್ತು ತತ್ವಗಳಿಗೆ ಅನುಸಾರವಾಗಿರುತ್ತದೆ ಎಂದು ತೀರ್ಪು ನೀಡಿತ್ತು.

ಮಹಿಳೆಯರಿಗೆ ಅವರ ಕಾನೂನು ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು - 2020ರಲ್ಲಿ ನಲ್ಸಾ (NALSA-National Legal Services Authority) ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾಗ ಎನ್.ವಿ. ರಮಣ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಜೊತೆಗಿನ ಸಹಯೋಗದೊಂದಿಗೆ ಮಹಿಳೆಯರಿಗೆ ಅವರ ರಕ್ಷಣೆಗಾಗಿ ಇರುವ ಕಾನೂನು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಕಾನೂನು ಜಾಗೃತಿ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು' ಎಂಬ ಶೀರ್ಷಿಕೆಯಡಿ ಅಭಿಯಾನವೊಂದನ್ನು ಆರಂಭಿಸಿದ್ದರು.

Last Updated : Apr 6, 2021, 7:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.