ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ರಾಂಬನ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದೆ. 10ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ. ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ದಾಲ್ವಾದಲ್ಲಿ ಭೂಮಿ ಬಿರುಕು ಬಿಟ್ಟು ಕುಸಿಯಲು ಆರಂಭಿಸಿದ ಪರಿಣಾಮ ಇಲ್ಲಿನ ವಸತಿ ಗೃಹಗಳು ನೆಲಕಚ್ಚಿವೆ. ಕೂಡಲೇ ಸ್ಥಳೀಯರು ತೆರವು ಕಾರ್ಯ ಆರಂಭಿಸಿದ್ದು, ಮೊದಲು ಹಾನಿಗೊಳಗಾದ ಮನೆಗಳಿಂದ ಜನ, ಜಾನುವಾರುಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಸ್ಥಳಾಂತರಿಸಲು ಪ್ರಯತ್ನಿಸಿದರು.
ದಿಢೀರ್ ಭೂಮಿ ಕುಸಿಯಲಾರಂಭಿಸಿದ ಪರಿಣಾಮ ಆತಂಕ ಉಂಟಾಯಿತು.. ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಸ್ಥಳೀಯರು, 'ಏಕಾಏಕಿ ಭೂಮಿ ಕುಸಿಯಲು ಪ್ರಾರಂಭಿಸಿದ ಕಾರಣ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಾರ್ಡ್ ಸಂಖ್ಯೆ 5 ರ ನಿವಾಸಿಗಳು ತಮ್ಮ ಮನೆಗಳಿಂದ ಹೊರ ಬರಲು ಬಹಳ ಕಷ್ಟಪಟ್ಟರು. ಬಳಿಕ ಅವರ ಮನೆಗಳಿಂದ ಸಾಕು ಪ್ರಾಣಿಗಳು ಸೇರಿದಂತೆ ಇತರ ಬೆಲೆಬಾಳುವ ವಸ್ತುಗಳನ್ನು ಹೊರ ತೆಗೆಯಲಾಯಿತು ಎಂದರು.
ಇದನ್ನೂ ಓದಿ: ಭೂ ಕುಸಿತದಿಂದ ಅವಶೇಷಗಳಡಿ ಸಿಲುಕಿ ರಕ್ಷಣೆಗೋಸ್ಕರ ಹಾತೊರೆದ ಬಾಲಕಿ.. ವಿಡಿಯೋ
ಭೂ ಕುಸಿತದಿಂದ ಎರಡು ಮನೆಗಳು ಸಂಪೂರ್ಣ ನಾಶ.. ಇನ್ನು ಭೂಕುಸಿತದಿಂದಾಗಿ ಎರಡು ಮನೆಗಳು ಸಂಪೂರ್ಣ ನಾಶವಾಗಿವೆ ಎಂದು ಸ್ಥಳೀಯ ನಾಗರಿಕ ಅಬ್ದುಲ್ ಘನಿ ತಿಳಿಸಿದ್ದಾರೆ. ಫರೀದ್ ಅಹ್ಮದ್ ಎಂಬುವರ ಮನೆ ಸಂಪೂರ್ಣ ನೆಲಸಮವಾಗಿದ್ದು, ಅಬ್ದುಲ್ ಘನಿ ಪಚೂ ಅವರ ಮನೆ ಶೇ.50ರಷ್ಟು ಹಾನಿಯಾಗಿದೆ. ಹನೀಫ್, ಮಹಮ್ಮದ್ ಸಾದಿಕ್, ಅಬ್ದುಲ್ ರಶೀದ್, ಮುಹಮ್ಮದ್ ಶಾಫಿ, ಮುಹಮ್ಮದ್ ಅಸ್ಲಂ ಜರ್ಗರ್, ಶಬ್ಬೀರ್ ಅಲಿ, ಹಬೀಬ್ ಹಿಜಾಮ್, ಅಬ್ದುಲ್ ರಶೀದ್ ಶೇಖ್ ಮತ್ತಿತರರ ಮನೆಗಳಿಗೆ ಹಾನಿಯಾಗಿದೆ. ಮುಂಜಾನೆಯಿಂದ ಭೂಮಿ ಕುಸಿಯುವ ಪ್ರಕ್ರಿಯೆ ಆರಂಭಗೊಂಡಿದ್ದು, ಹೀಗೆ ಮುಂದುವರಿದರೆ ಇನ್ನಷ್ಟು ವಸತಿ ಗೃಹಗಳು ಕುಸಿಯುವ ಸಾಧ್ಯತೆ ಇದೆ ಎಂದಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಭೂಕುಸಿತ.. ಬೆಟ್ಟದಿಂದ ರಸ್ತೆಗೆ ಬಿದ್ದ ಕಲ್ಲುಗಳು.. ಜಮ್ಮು ಶ್ರೀನಗರ ಸಂಚಾರ್ ಬಂದ್
ಸ್ಥಳಕ್ಕೆ ಅಧಿಕಾರಿಗಳ ತಂಡ ಆಗಮನ, ಜನರ ರಕ್ಷಣಾ ಕಾರ್ಯ ಆರಂಭ.. ದಾಲ್ವಾ ಪ್ರದೇಶದಲ್ಲಿ ಭೂಮಿ ಕುಸಿಯುತ್ತಿರುವ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳ ತಂಡ ಸಂಪೂರ್ಣ ಪರಿಸ್ಥಿತಿಯನ್ನು ಅವಲೋಕಿಸಿ, ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಜೋಶಿಮಠದ ಮಾಹಿತಿ ಹಂಚಿಕೆಗೆ ನಿರ್ಬಂಧ: ಗೊಂದಲ ತಪ್ಪಿಸಲು ಕೇಂದ್ರ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಘಟನೆಯ ಸುದ್ದಿ ತಿಳಿದ ತಕ್ಷಣ ಇಲ್ಲಿಗೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆವು. ವಸತಿ ಗೃಹಗಳು ಮಾತ್ರವಲ್ಲದೇ, ಕೃಷಿ ಭೂಮಿ ಸಹ ಹಾನಿಗೊಳಗಾಗಿದೆ ಎಂದರು.
ಇದನ್ನೂ ಓದಿ: ಹಿಮಾಚಲದಲ್ಲಿ ಮೇಘಸ್ಫೋಟ : ಉತ್ತರಾಖಂಡ್ ನಲ್ಲಿ ಭೂಕುಸಿತ : ರಸ್ತೆ, ಸೇತುವೆ ಸಂಚಾರ ಬಂದ್