ETV Bharat / bharat

ಮಹಿಳೆಗೆ ಗರ್ಭ ಧರಿಸುವ, ನಿರಾಕರಿಸುವ ಹಕ್ಕಿದೆ: 26 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಿದ ಹೈಕೋರ್ಟ್​

ಗರ್ಭಿಣಿಯಾಗಿದ್ದ ಅವಿವಾಹಿತ ಯುವತಿ ಮಗುವಿಗೆ ಜನ್ಮ ನೀಡಲು ನಿರಾಕರಿಸಿ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್​ ಎತ್ತಿಹಿಡಿದಿದೆ.

kerala-high-court-allows-26-weeks-abortion
26 ವಾರಗಳ ಗರ್ಭಪಾತಕ್ಕೆ ಅನುಮತಿ
author img

By

Published : Nov 5, 2022, 7:47 PM IST

ಎರ್ನಾಕುಲಂ(ಕೇರಳ): ಮಹಿಳೆ ತಾನು ಗರ್ಭ ಧರಿಸಬೇಕೇ ಬೇಡವೇ ಎಂಬುದು ಆಕೆಯ ನಿರ್ಧಾರಕ್ಕೆ ಬಿಟ್ಟಿದ್ದು. ಇದರಲ್ಲಿ ಯಾರೂ ಒತ್ತಾಯ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್​ ಹೇಳಿತು. ಅವಿವಾಹಿತ ಯುವತಿ ತನ್ನ ಸ್ನೇಹಿತನಿಂದ ಗರ್ಭ ಧರಿಸಿದ್ದು, ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯ ವೇಳೆ ಕೋರ್ಟ್​ ಈ ತೀರ್ಪು ನೀಡಿದೆ.

ಅವಿವಾಹಿತೆಯಾಗಿರುವ ಎಂಬಿಎ ವಿದ್ಯಾರ್ಥಿನಿ ತನ್ನ ಸ್ನೇಹಿತನ ಸಖ್ಯದಿಂದ ಗರ್ಭ ಧರಿಸಿದ್ದು, 26 ವಾರಗಳ ಗರ್ಭಿಣಿಯಾಗಿದ್ದಾರೆ. ಅಚ್ಚರಿ ಅಂದ್ರೆ ತಾನು ಗರ್ಭಿಣಿಯಾಗಿದ್ದೇನೆ ಎಂಬುದು ಯುವತಿಗೆ ಕಳೆದ ತಿಂಗಳಷ್ಟೇ ಗೊತ್ತಾಗಿತ್ತು. ಹೀಗಾಗಿ ಯುವತಿ ತನಗೆ ಈಗಲೇ ಮಗುವಿಗೆ ಜನ್ಮ ನೀಡಲು ಇಷ್ಟವಿಲ್ಲ. ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಳು.

ವಿಚಾರಣೆ ನಡೆಿಸಿದ ಕೋರ್ಟ್​ ಹೆಣ್ಣು ಜನ್ಮ ನೀಡುವ, ತಿರಸ್ಕರಿಸುವ ಸಂಪೂರ್ಣ ಹಕ್ಕು ಹೊಂದಿದ್ದಾಳೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇಷ್ಟವಿಲ್ಲದ ಗರ್ಭ ಧರಿಸಿದರೆ ಆಕೆ ಮಾನಸಿಕವಾಗಿ ಕುಗ್ಗುತ್ತಾಳೆ. ಹೀಗಾಗಿ ಆಕೆಯ ಆಯ್ಕೆಗೆ ಅವಕಾಶವಿದೆ ಎಂದು ಹೇಳಿತು.

ವೈದ್ಯರಿಂದ ವಿರೋಧ: ಯುವತಿಗೆ ಈಗಾಗಲೇ ಗರ್ಭಪಾತ ಮಾಡಿಸಿಕೊಳ್ಳುವ ಅವಧಿ ಮುಗಿದಿದೆ. ಒಂದು ವೇಳೆ ಆಕೆಗೆ ಅಬಾರ್ಷನ್​ ಮಾಡಿದಲ್ಲಿ ಪ್ರಾಣಕ್ಕೆ ಸಂಚಕಾರ ಬರುವ ಸಾಧ್ಯತೆ ಇದೆ ಎಂದು ವೈದ್ಯ ಮಂಡಳಿ ಕೋರ್ಟ್​ಗೆ ವರದಿ ನೀಡಿತ್ತು. ನ್ಯಾಯಾಲಯ ಕೂಡ ಈ ಬಗ್ಗೆ ಮಾಹಿತಿ ಕೇಳಿತ್ತು.

ಆದರೆ, ಮಹಿಳೆಯ ಹಕ್ಕನ್ನು ಎತ್ತಿ ಹಿಡಿದಿರುವ ಕೋರ್ಟ್​, ಆಕೆಯ ಇಚ್ಚಾನುಸಾರವಾಗಿ ಶಸ್ತ್ರಚಿಕಿತ್ಸೆ ನಡೆಸಿ ಗರ್ಭಪಾತ ಮಾಡಬೇಕು. ಈ ಅವಧಿಯಲ್ಲಿ ಮಗು ಜೀವಂತವಾಗಿದ್ದರೆ, ಅದನ್ನು ಉಳಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಕೋರ್ಟ್​ ವೈದ್ಯರಿಗೆ ಸೂಚಿಸಿದೆ.

ದೇಶದಲ್ಲಿ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರಿಗೆ ತಾವು ಗರ್ಭ ಧರಿಸಿದ 26 ವಾರಗಳವರೆಗೂ ಬೇಡ ಎಂದಾದಲ್ಲಿ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು ಕಾನೂನು ನೀಡಿದೆ. ಈ ಬಗ್ಗೆ ಸುಪ್ರೀಂಕೋರ್ಟ್​ ಕೂಡ ತೀರ್ಪು ನೀಡಿದೆ.

ಓದಿ: ಪಿಸ್ತೂಲ್ ಹಿಡಿದು ಶಾಲೆಗೆ ಬಂದ 10ನೇ ತರಗತಿ ವಿದ್ಯಾರ್ಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.