ETV Bharat / bharat

9 ಗಂಟೆ ಸಿಬಿಐ ವಿಚಾರಣೆ ಎದುರಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ - ಕೇಜ್ರಿವಾಲ್ ಅವರ ಮಾಜಿ ಡೆಪ್ಯೂಟಿ ಮನೀಶ್ ಸಿಸೋಡಿಯಾ

ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನನಗೆ ಒಟ್ಟು 56 ಪ್ರಶ್ನೆಗಳನ್ನು ಕೇಳಿದೆ ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದರು.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
author img

By

Published : Apr 16, 2023, 10:53 PM IST

ನವದೆಹಲಿ: ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದು ನವದೆಹಲಿಯ ಕೇಂದ್ರೀಯ ತನಿಖಾ ಸಂಸ್ಥೆಯ(ಸಿಬಿಐ) ಕಚೇರಿಗೆ ಹಾಜರಾಗಿದ್ದರು. ಸುಮಾರು 9 ಗಂಟೆಗಳ ಕಾಲ ವಿಚಾರಣೆ ಮುಗಿಸಿ ಹೊರಬಂದು ಮಾತನಾಡಿದ ಅವರು, ಸಿಬಿಐ ನನಗೆ ಒಟ್ಟು 56 ಪ್ರಶ್ನೆಗಳನ್ನು ಕೇಳಿದೆ. ಆದರೆ ಎಲ್ಲವೂ ನಕಲಿ, ಪ್ರಕರಣ ಕೂಡಾ ನಕಲಿ, ಅವರ ಬಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮನ್ನು ಆರೋಪಿಗಳನ್ನಾಗಿಸಲು ಒಂದೇ ಒಂದು ಪುರಾವೆಯೂ ಇಲ್ಲ ಎಂದು ನನಗೆ ಮನವರಿಕೆಯಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರಾಮಾಣಿಕತೆಯೊಂದಿಗೆ ರಾಜಿ ಇಲ್ಲ: ಮದ್ಯ ನೀತಿಯ ಪ್ರಕರಣ ಸುಳ್ಳು, ಕಟ್ಟುಕಥೆ, ಪ್ರಾಮಾಣಿಕತೆ ನಮ್ಮ ಸಿದ್ಧಾಂತ, ನಾವು ಸಾಯಲೂ ಸಿದ್ಧರಿದ್ದೇವೆ. ಆದರೆ ಪ್ರಾಮಾಣಿಕತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಅವರು ನಮಗೆ ಮತ್ತು ನಮ್ಮ ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ದೂಷಿಸಲು ಇದನ್ನೆಲ್ಲ ಮಾಡುತ್ತಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ. ಈಗ ಅದಕ್ಕಾಗಿಯೇ ಅವರು ನಮ್ಮನ್ನು ಕೊನೆಗೊಳಿಸಲು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದರು.

  • #WATCH | CBI questioning conducted for 9.5 hours. Entire alleged liquor scam is fake, AAP is 'kattar imaandaar party'. They want to finish AAP but the country's people are with us...: Delhi CM Arvind Kejriwal speaks after nine hours of CBI questioning in excise policy case pic.twitter.com/ODnCGKv7R3

    — ANI (@ANI) April 16, 2023 " class="align-text-top noRightClick twitterSection" data=" ">

ಕಪ್ಪು SUVಯಲ್ಲಿ (ವಾಹನ) ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಭಾರಿ ಭದ್ರತೆಯೊಂದಿಗೆ ಸಿಬಿಐ ಪ್ರಧಾನ ಕಚೇರಿಗೆ ಆಗಮಿಸಿದ್ದ ಎಎಪಿ ಮುಖ್ಯಸ್ಥರನ್ನು ಭ್ರಷ್ಟಾಚಾರ ನಿಗ್ರಹ ದಳದ ಮೊದಲ ಮಹಡಿಯ ಕಚೇರಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರನ್ನು ತನಿಖಾ ತಂಡ ಸುಮಾರು 9 ಗಂಟೆಗಳ ಕಾಲ ಪ್ರಶ್ನಿಸಿತ್ತು.

ಇದಕ್ಕೂ ಮುನ್ನ ಅರವಿಂದ್​ ಕೇಜ್ರಿವಾಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಐದು ನಿಮಿಷದ ವಿಡಿಯೋ ಸಂದೇಶ ಪ್ರಕಟಿಸಿದ್ದರು. ಅದರಲ್ಲಿ ಬಿಜೆಪಿಯವರು ನನ್ನನ್ನು ಬಂಧಿಸುವಂತೆ ಆದೇಶಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸಮನ್ಸ್​ ನೀಡಿದ್ದಾರೆ. ಅಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸುತ್ತೇನೆ. ಬಿಜೆಪಿಯವರು ತುಂಬಾ ಪ್ರಭಾವಿಗಳಿದ್ದಾರೆ. ಇವರು ಎಂತಹ ವ್ಯಕ್ತಿಗಳನ್ನಾದ್ರೂ ಜೈಲಿಗೆ ಕಳುಹಿಸುತ್ತಾರೆ. ಅಪರಾಧ ಮಾಡಿರಲಿ, ಬಿಡಲಿ ಅದು ಗಣನೆಗೆ ಬರುವುದಿಲ್ಲ ಎಂದು ಆರೋಪಿಸಿದ್ದರು.

ಅಬಕಾರಿ ಖಾತೆಯನ್ನೂ ಹೊಂದಿದ್ದ ಸಚಿವ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿ 26 ರಂದು ಬಂಧಿಸಲಾಗಿತ್ತು. ಅವರನ್ನು ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಅಧಿಕಾರಿಗಳು, ಉತ್ತರಗಳು ತೃಪ್ತಿಕರವಾಗಿಲ್ಲ ಎಂದು ಹೇಳಿದ್ದರು. ಬಂಧನ ಬಳಿಕ ಸಿಸೋಡಿಯೋ ದೆಹಲಿ ಉಪಮುಖ್ಯಮಂತ್ರಿ ಸ್ಥಾನ ತ್ಯಜಿಸಿದ್ದರು.

ಆದ್ಮಿ ಪಕ್ಷದಿಂದ ಪ್ರತಿಭಟನೆ: ಕೇಜ್ರಿವಾಲ್‌ಗೆ ಸಿಬಿಐ ಸಮನ್ಸ್‌ ವಿರುದ್ಧ ಆಮ್ ಆದ್ಮಿ ಪಕ್ಷವು ದೇಶದ ಹಲವೆಡೆ ಪ್ರತಿಭಟನೆ ನಡೆಸಿದೆ.

ಇದನ್ನೂ ಓದಿ : ಅಬಕಾರಿ ನೀತಿ ಕೇಸ್​: ಇಂದು ದಿಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಸಿಬಿಐ ಗ್ರಿಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.