ETV Bharat / bharat

ಮುಂದಿನ 10 ವರ್ಷಗಳಲ್ಲಿ ಭಾರತ ದಾಖಲೆ ಸಂಖ್ಯೆಯ ವೈದ್ಯರ ಪಡೆಯಲಿದೆ: ಮೋದಿ

ದೇಶದ ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಅತಿ ಹೆಚ್ಚಾಗಿ ನಿರ್ಮಾಣ ಮಾಡುತ್ತಿರುವುದರಿಂದ ಮುಂದಿನ 10 ವರ್ಷಗಳಲ್ಲಿ ವೈದ್ಯರ ಸಂಖ್ಯೆ ಹೆಚ್ಚಲಿದೆ. ಇದು ಆರೋಗ್ಯ ಕ್ಷೇತ್ರದ ಗುಣಮಟ್ಟಕ್ಕೆ ಸಹಾಯಕವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

pm-modi
ಪ್ರಧಾನಿ ಮೋದಿ
author img

By

Published : Apr 15, 2022, 7:44 PM IST

ಅಹಮದಾಬಾದ್​(ಗುಜರಾತ್​): ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸುವ ಕೇಂದ್ರ ಸರ್ಕಾರದ ನೀತಿಯಿಂದಾಗಿ ಮುಂದಿನ 10 ವರ್ಷಗಳಲ್ಲಿ ದೇಶವು ದಾಖಲೆ ಪ್ರಮಾಣದ ವೈದ್ಯರನ್ನು ಪಡೆಯಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಗುಜರಾತ್‌ನ ಕಚ್ ಜಿಲ್ಲೆಯ ಭುಜ್‌ನಲ್ಲಿ 200 ಹಾಸಿಗೆಗಳ ಕೆ.ಕೆ.ಪಟೇಲ್ ಮುಟ್ಲಿ ವಿಶೇಷ ಆಸ್ಪತ್ರೆಯನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ದೇಶಕ್ಕೆ ಸಮರ್ಪಿಸಿ ನಂತರ ಅವರು ಮಾತನಾಡಿದರು.

ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ನಿರ್ಮಿಸುವ ಗುರಿ ಇದೆ. ಇದರ ಸಾಕಾರದಿಂದ ದೇಶವು ಮುಂದಿನ 10 ವರ್ಷಗಳ ನಂತರ ದಾಖಲೆ ಸಂಖ್ಯೆಯ ವೈದ್ಯರನ್ನು ಪಡೆದುಕೊಳ್ಳುತ್ತದೆ. 2 ದಶಕಗಳ ಹಿಂದೆ ಗುಜರಾತ್ ಕೇವಲ 9 ವೈದ್ಯಕೀಯ ಕಾಲೇಜುಗಳನ್ನು ಹೊಂದಿತ್ತು. ಇದೀಗ ವೈದ್ಯಕೀಯ ಕ್ಷೇತ್ರ ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಿದೆ ಎಂದು ಮೋದಿ ಹೇಳಿದರು.

ಗುಜರಾತ್​ ಒಂದು ಏಮ್ಸ್​ ಮತ್ತು 38 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಹೊಂದಿದೆ. ಈ ಹಿಂದೆ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಕೇವಲ 1,000 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು, ಈಗ ಈ ಕಾಲೇಜುಗಳಲ್ಲಿ ಸುಮಾರು 6,000 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ರಾಜ್‌ಕೋಟ್‌ನ ಏಮ್ಸ್ 2021 ರಿಂದ 50 ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಪ್ರಾರಂಭಿಸಿದೆ. ಇದು ವೈದ್ಯರ ಸೃಷ್ಟಿಗೆ ಸಹಾಯಕವಾಗಿದೆ ಎಂದು ಮೋದಿ ಹೇಳಿದರು.

'ಕೊರೊನಾ ಇನ್ನೂ ಇದೆ ಎಚ್ಚರ': ಕೊರೊನಾ ವೈರಸ್​ ಇನ್ನೂ ಸುಪ್ತಾವಸ್ಥೆಯಲ್ಲಿದೆ. ಜನರು ಅದನ್ನು ಸುಲಭವಾಗಿ ತೆಗೆದುಕೊಳ್ಳಬಾರದು ಮತ್ತು ಜಾಗರೂಕರಾಗಿರಬೇಕು. ಭಾರತದ ಮೂಲವಾದ ಯೋಗ ಮತ್ತು ಆಯುರ್ವೇದವು ವಿಶ್ವದ ಗಮನ ಸೆಳೆದಿದೆ. ಸಾಂಕ್ರಾಮಿಕ ರೋಗದ ಬಳಿಕ ಭಾರತದಿಂದ ಅರಿಶಿಣದ ರಫ್ತು ದುಪ್ಪಟ್ಟಾಗಿದೆ. ಜಗತ್ತಿನ ಜನರು ಅದರ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ ಎಂದು ಪ್ರಧಾನಿ ಹೇಳಿದರು.

ಪ್ರತಿ ಜಿಲ್ಲೆಯಲ್ಲಿ 75 ಕೆರೆ ನಿರ್ಮಾಣಕ್ಕೆ ಕರೆ: ಭಾರತದ ಸ್ವಾತಂತ್ರ್ಯೋತ್ಸವದ 75 ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲಿ 75 ಕೆರೆಗಳನ್ನು ನಿರ್ಮಿಸಲು ಪ್ರಧಾನಿ ಮೋದಿ ಕರೆ ನೀಡಿದರು. ನೀರಿನ ಕೊರತೆಯನ್ನು ಹೋಗಲಾಡಿಸಬೇಕಾದರೆ ನೀರು ಸಂಗ್ರಹಿಸುವುದು ಅತಿ ಮುಖ್ಯವಾಗಿದೆ. ಹೀಗಾಗಿ ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವ ನೆನಪಿಗಾಗಿ ಅಷ್ಟೇ ಪ್ರಮಾಣದ ಕೆರೆಗಳನ್ನು ನಿರ್ಮಾಣ ಮಾಡಬೇಕು ಎಂದರು.

ಇದನ್ನೂ ಓದಿ: ಈ ಬಾರಿ ದೇಶಾದ್ಯಂತ ವಾಡಿಕೆ ಮಳೆ: ಹವಾಮಾನ ಇಲಾಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.