ETV Bharat / bharat

ಮಹಿಳಾ ಮೀಸಲಾತಿ ಮಸೂದೆಯನ್ನು ಶೀಘ್ರದಲ್ಲೇ ಜಾರಿಗೊಳಿಸುವುದು ಇಂಡಿಯಾ ಒಕ್ಕೂಟದ ಗುರಿ : ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ - ಮಹಿಳಾ ಮೀಸಲಾತಿ ಮಸೂದೆ

ಮಹಿಳಾ ಮೀಸಲಾತಿ ಮಸೂದೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲು ಇಂಡಿಯಾ ಒಕ್ಕೂಟ ಹೋರಾಟ ನಡೆಸುತ್ತದೆ ಎಂದು ಕಾಂಗ್ರೆಸ್​ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

india-alliances-goal-is-to-enforce-womens-bill-as-soon-as-possible-sonia-gandhi
ಮಹಿಳಾ ಮೀಸಲಾತಿ ಮಸೂದೆಯನ್ನು ಶೀಘ್ರದಲ್ಲೇ ಜಾರಿಗೊಳಿಸುವುದು ಇಂಡಿಯಾ ಒಕ್ಕೂಟದ ಗುರಿ : ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ
author img

By PTI

Published : Oct 15, 2023, 8:48 AM IST

Updated : Oct 15, 2023, 10:07 AM IST

ಚೆನ್ನೈ (ತಮಿಳುನಾಡು) : ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕಾರಗೊಂಡ ಮಹಿಳಾ ಮೀಸಲಾತಿ ಮಸೂದೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲು ಇಂಡಿಯಾ ಮೈತ್ರಿಕೂಟ ಹೋರಾಡುತ್ತದೆ ಎಂದು ಕಾಂಗ್ರೆಸ್​ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಚೆನ್ನೈನಲ್ಲಿ ಡಿಎಂಕೆ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಹಕ್ಕು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಮ್ಮ ದೇಶದ ಮಹಿಳೆಯರನ್ನು ಪಿತೃಪ್ರಭುತ್ವದ ಚೌಕಟ್ಟಿನಲ್ಲಿ, ಸಾಂಪ್ರದಾಯಿಕ ಸಂಕೇತಗಳಾಗಿ ಬಿಂಬಿಸುವ ಕಾರ್ಯ ಮಾಡುತ್ತಿದೆ ಎಂದು ಟೀಕಿಸಿದರು.

ತಮ್ಮ ಪತಿ ದಿವಂಗತ ರಾಜೀವ್​ ಗಾಂಧಿ ಅವರು ಪಂಚಾಯತ್​ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ತಂದರು. ಈ ಮೀಸಲಾತಿಯು ತಳಮಟ್ಟದ ಸರ್ಕಾರಿ ವ್ಯವಸ್ಥೆಯಲ್ಲಿ ಮಹಿಳಾ ನಾಯಕತ್ವಕ್ಕೆ ನಾಂದಿ ಹಾಡಿತು. ಇದು ಇಂದು ಶಾಸಕಾಂಗದಲ್ಲೂ ಮೂರನೇ ಒಂದು ಭಾಗದಷ್ಟು ಮೀಸಲಾತಿ ನೀಡಲು ಪ್ರಮುಖ ಹೆಜ್ಜೆಯಾಯಿತು ಎಂದು ಹೇಳಿದರು.

ನಮ್ಮ ಹೋರಾಟದ ಫಲವಾಗಿ ಇದೀಗ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಯನ್ನು ಅಂಗೀಕರಿಸಲಾಗಿದೆ. ಈ ಮೀಸಲಾತಿ ಅಂಗೀಕಾರಗೊಂಡರೂ ಇನ್ನೂ ಜಾರಿಯಾಗಲು ತುಂಬಾ ಸಮಯ ಹಿಡಿಯುತ್ತದೆ. ಆದರೆ ಮೀಸಲಾತಿಯನ್ನು ಅತಿ ಶೀಘ್ರದಲ್ಲಿ ಅನುಷ್ಠಾನಗೊಳಿಸಲು ಇಂಡಿಯಾ ಒಕ್ಕೂಟ ಹೋರಾಡುತ್ತದೆ ಎಂದು ಭರವಸೆ ನೀಡಿದರು. ಎರಡನೇ ಯುಪಿಎ ಸರ್ಕಾರದ ಅವಧಿಯಲ್ಲಿ ಈ ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿತ್ತು. ಬಳಿಕ ಲೋಕಸಭೆಯಲ್ಲಿ ಒಮ್ಮತದ ಕೊರತೆಯಿಂದ ಮೀಸಲಾತಿ ಮಸೂದೆ ಅಂಗೀಕಾರವಾಗಲಿಲ್ಲ ಎಂದು ಹೇಳಿದರು.

ದಿವಂಗತ ಮುಖ್ಯಮಂತ್ರಿ ಸಿಎನ್​ ಅಣ್ಣಾದೊರೈ ಮತ್ತು ಎಂ ಕರುಣಾನಿಧಿ ಅವರು ಮಹಿಳೆಯರ ಸ್ಥಾನಮಾನ ಮತ್ತು ಅವಕಾಶಗಳಿಗೆ ಅಡಿಪಾಯ ಹಾಕಿದರು. ಇದರಿಂದಾಗಿ ಇಂದು ತಮಿಳುನಾಡು ಮಹಿಳಾ ಸಮಾನತೆ ಮತ್ತು ಮಹಿಳಾ ಅಭಿವೃದ್ಧಿಗೆ ದಾರಿದೀಪವಾಗಿದೆ. ದಶಕಗಳ ಕಾಲ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರು 1973ರಲ್ಲಿ ಪೊಲೀಸ್​ ಇಲಾಖೆಯಲ್ಲಿ ಮಹಿಳೆಯರಿಗೆ ವಿಶೇಷ ಮೀಸಲಾತಿಯನ್ನು ತಂದರು. ಇದರಿಂದಾಗಿ ಇಂದು ತಮಿಳುನಾಡು ಪೊಲೀಸ್​ ಪಡೆಯಲ್ಲಿ ನಾಲ್ಕನೇ ಒಂದು ಭಾಗ ಮಹಿಳೆಯರಿದ್ದಾರೆ. ಇದರ ಜೊತೆಗೆ ಕರುಣಾನಿಧಿ ಅವರು ಸರ್ಕಾರಿ ಹುದ್ದೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ತಂದರು. ಇದರಿಂದಾಗಿ ಸರ್ಕಾರಿ ಸೇವೆಗಳಲ್ಲಿ ಮಹಿಳಾ ಪ್ರಾಬಲ್ಯ ಶೇ. 30ಕ್ಕಿಂತ ಹೆಚ್ಚಾಯಿತು. ಇತ್ತೀಚೆಗೆ ಹಾಲಿ ಸಿಎಂ ಎಂ.ಕೆ ಸ್ಟಾಲಿನ್​ ಶೇ. 40ರಷ್ಟು ಮಹಿಳಾ ಮೀಸಲಾತಿಯನ್ನು ಹೆಚ್ಚಿಸಿದ್ದಾರೆ ಎಂದು ಇದೇ ವೇಳೆ ಹೇಳಿದರು.

ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳು ಮಹಿಳೆಯರ ಸಮಾನತೆ ಬಗ್ಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ. ಮಹಿಳಾ ಮೀಸಲಾತಿ ಮಸೂದೆಯನ್ನು ಆದಷ್ಟು ಬೇಗ ಜಾರಿಗೊಳಿಸಲು ಇಂಡಿಯಾ ಒಕ್ಕೂಟ ಪ್ರಯತ್ನಿಸುತ್ತದೆ. ಈ ಸಂಬಂಧ ನಾವೆಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು. ಒಟ್ಟಾಗಿ ಹೋರಾಡಿದರೆ ಗೆಲುವು ನಮ್ಮದೇ ಎಂದು ಸೋನಿಯಾ ಗಾಂಧಿ ಹೇಳಿದರು.

ಇದನ್ನೂ ಓದಿ : 'ಹವಾಮಾನ ಬದಲಾವಣೆಯ ಕಾರಣ ದೇವರನ್ನು ಕೇಳಿ ನಮಗೆ ಹೇಳಿ': ವಿಚಿತ್ರ ಆರ್​ಟಿಐ ಅರ್ಜಿ ಹಾಕಿದ ಬಿಹಾರದ ವ್ಯಕ್ತಿ!

Last Updated : Oct 15, 2023, 10:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.