ಮುಂಬೈ (ಮಹಾರಾಷ್ಟ್ರ): ದೇಶದ ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಹೊಸ ವಿವಾದ ಭುಗಿಲೆದ್ದಿದೆ. ಮರಾಠಿಗರು ಎಂಬ ಕಚೇರಿ ಆರಂಭಿಸಲು ಬಾಡಿಗೆಗೆ ಕಟ್ಟಡ ನೀಡಲ್ಲ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕಿ ಹಾಗೂ ಮಾಜಿ ಶಾಸಕಿ ಪಂಕಜಾ ಮುಂಡೆ ಸಹ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ನಾನು ಮರಾಠಿ ಎಂಬ ಕಾರಣಕ್ಕೆ ನನಗೆ ಮುಂಬೈನಲ್ಲಿ ಮನೆ ನಿರಾಕರಿಸಲಾಗಿತ್ತು ಎಂದು ಪಂಕಜಾ ಮುಂಡೆ ತಿಳಿಸಿದ್ದಾರೆ.
ಇಲ್ಲಿನ ಮುಲುಂಡ್ ಉಪನಗರದಲ್ಲಿ ಗುಜರಾತಿ ಪ್ರಾಬಲ್ಯದ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ತೃಪ್ತಿ ದೇವರುಖ್ಕರ್ ಎಂಬ ಮಹಿಳೆ ತನಗೆ ಕಚೇರಿ ಕಟ್ಟಡ ಸ್ಥಳಾಂತರಕ್ಕೆ ತಡೆವೊಡ್ಡಲಾಗಿದೆ ಎಂದು ಆರೋಪಿಸಿದ್ದಾರೆ. ಬುಧವಾರ ಈ ಮಹಿಳೆ ಹಾಗೂ ಅಲ್ಲಿನ ಸಮಾಜದ ಸದಸ್ಯರ ನಡುವಿನ ಗಲಾಟೆಯ ವಿಡಿಯೋ ಬಹಿರಂಗವಾಗಿದೆ. ಈ ಘಟನೆ ಬಗ್ಗೆ ರಾಜಕೀಯ ಮುಖಂಡರು ಸೇರಿದಂತೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ತೃಪ್ತಿ ದೇವರುಖ್ಕರ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ, ಗುಜರಾತ್ ಮೂಲದ ಪ್ರವೀಣ್ ಠಕ್ಕರ್ ಹಾಗೂ ಈತನ ಮಗ ನೀಲೇಶ್ ಠಕ್ಕರ್ ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪಂಕಜಾ ಮುಂಡೆ ವಿಡಿಯೋ ಪೋಸ್ಟ್: ಮತ್ತೊಂದೆಡೆ, ಬಿಜೆಪಿಯ ನಾಯಕಿ ಪಂಕಜಾ ಮುಂಡೆ ಕೂಡ ತಾವು ಅಂತಹದ್ದೇ ಕಹಿ ಘಟನೆಯನ್ನು ಎದುರಿಸಿದ್ದಾಗಿ ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹೇಳಿಕೆಯೊಂದು ಪೋಸ್ಟ್ ಮಾಡಿದ್ದಾರೆ. ನಾನು ಮರಾಠಿ ಮಹಿಳೆಯ ನೋವನ್ನು ಗಮನಿಸಿದೆ. ಭಾಷೆ ಮತ್ತು ಸಂಕುಚಿತತೆಯಲ್ಲಿ ಸಿಲುಕಿಕೊಳ್ಳುವುದು ನನಗೆ ಇಷ್ಟವಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಪ್ರಾಂತೀಯತೆ, ಧಾರ್ಮಿಕತೆ ಅಥವಾ ಜಾತಿವಾದದ ಬಗ್ಗೆ ನಾನು ಎಂದಿಗೂ ಮಾತನಾಡಿಲ್ಲ. ಆದರೆ, ಮರಾಠಿ ಮಹಿಳೆಯೊಬ್ಬರು ಮರಾಠಿ ಎಂಬ ಕಾರಣಕ್ಕೆ ತನಗೆ ಮನೆ ನೀಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ನಾನು ನನ್ನ ಸರ್ಕಾರಿ ಮನೆಯನ್ನು ಬಿಟ್ಟು ಸ್ವಂತ ಮನೆ ಖರೀದಿಸಲು ಬಯಸಿದಾಗ ನನಗೂ ಅನೇಕ ಸ್ಥಳಗಳಲ್ಲಿ ಇದೇ ಅನುಭವವಾಗಿತ್ತು ಎಂದು ಪಂಕಜಾ ಮುಂಡೆ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ನಾನು ಯಾವುದೇ ಭಾಷೆಯ ಪರವಾಗಿಲ್ಲ. ಮುಂಬೈ ರಾಜ್ಯದ ರಾಜಧಾನಿ ಮಾತ್ರವಲ್ಲದೇ ದೇಶದ ಆರ್ಥಿಕ ರಾಜಧಾನಿಯೂ ಆಗಿದೆ. ಹೀಗಾಗಿ ಎಲ್ಲರಿಗೂ ಇಲ್ಲಿ ಸ್ವಾಗತವಿದೆ. ಆದರೆ, ಇಲ್ಲಿನ ಕೆಲವು ಕಟ್ಟಡಗಳಲ್ಲಿ ಮರಾಠಿ ಭಾಷಿಕರಿಗೆ ಮನೆ ನಿರಾಕರಿಸುವುದು ದುರದೃಷ್ಟಕರ. ನನ್ನಂತಹ ವ್ಯಕ್ತಿಯೂ ಇದನ್ನು ಅನುಭವಿಸಿದ್ದೇನೆ ಎಂದು ಬಿಜೆಪಿಯ ನಾಯಕಿ ಹೇಳಿಕೊಂಡಿದ್ದಾರೆ.
-
मुंबईत, मुलुंडमध्ये एका मराठी स्त्रीला, ती मराठी आहे म्हणून व्यवसायासाठी जागा नाकारल्याची घटना समोर आली. इतरांनी निषेध वैगरे व्यक्त केला. आम्हाला निषेध नोंदवणं इत्यादी प्रकार माहित नाहीत. त्यामुळे माझ्या महाराष्ट्र सैनिकांनी आमच्या पद्धतीने दम दिल्यावर त्या बिल्डिंगच्या सचिवाने…
— Raj Thackeray (@RajThackeray) September 29, 2023 " class="align-text-top noRightClick twitterSection" data="
">मुंबईत, मुलुंडमध्ये एका मराठी स्त्रीला, ती मराठी आहे म्हणून व्यवसायासाठी जागा नाकारल्याची घटना समोर आली. इतरांनी निषेध वैगरे व्यक्त केला. आम्हाला निषेध नोंदवणं इत्यादी प्रकार माहित नाहीत. त्यामुळे माझ्या महाराष्ट्र सैनिकांनी आमच्या पद्धतीने दम दिल्यावर त्या बिल्डिंगच्या सचिवाने…
— Raj Thackeray (@RajThackeray) September 29, 2023मुंबईत, मुलुंडमध्ये एका मराठी स्त्रीला, ती मराठी आहे म्हणून व्यवसायासाठी जागा नाकारल्याची घटना समोर आली. इतरांनी निषेध वैगरे व्यक्त केला. आम्हाला निषेध नोंदवणं इत्यादी प्रकार माहित नाहीत. त्यामुळे माझ्या महाराष्ट्र सैनिकांनी आमच्या पद्धतीने दम दिल्यावर त्या बिल्डिंगच्या सचिवाने…
— Raj Thackeray (@RajThackeray) September 29, 2023
ಅಂತರವರಿಗೆ ಒದೆಯಬೇಕು - ರಾಜ್ ಠಾಕ್ರೆ: ಇದೇ ಘಟನೆ ಬಗ್ಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನಾಯಕ ರಾಜ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ವರ್ತನೆಯನ್ನು ಸಹಿಸುವುದಿಲ್ಲ. ಮಹಾರಾಷ್ಟ್ರದ ಮುಂಬೈನಲ್ಲಿ ಮತ್ತೆ ಇಂತಹದ್ದೇನಾದರೂ ನಡೆದರೆ ಕೆನ್ನೆ ಬಾರಿಸುವುದು ನಿಶ್ಚಿತ. ಸರ್ಕಾರವು ಸ್ವಲ್ಪ ಎಚ್ಚರಿಕೆ ನೀಡಬೇಕು. ಮುಲುಂಡ್ ಭೇಟಿ ನೀಡಿದ ನನ್ನ ಮಹಾರಾಷ್ಟ್ರ ಸೈನಿಕರಿಗೆ ನನ್ನ ಅಭಿನಂದನೆಗಳು. ಮರಾಠಿಗರಿಗೆ ಎಲ್ಲಿಯಾದರೂ ಅನ್ಯಾಯವಾದರೆ, ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ನೆನಪಿಸಿಕೊಳ್ಳಬೇಕು. ಎಲ್ಲಿಯೇ ಅನ್ಯಾಯ ಕಂಡರೂ ಒದೆಯಲೇ ಬೇಕು ಎಂದು ತಮ್ಮ ರಾಜ್ ಠಾಕ್ರೆ ತಿಳಿಸಿದ್ಧಾರೆ.
ಇದನ್ನೂ ಓಡಿ: ಪ್ರೇಮ ಪ್ರಕರಣ: ಯುವತಿಗೆ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿದ ತಾಯಿ, ಸಹೋದರ